Saturday, October 19, 2024
Homeರಾಷ್ಟ್ರೀಯ | Nationalಜಮ್ಮು-ಕಾಶ್ಮೀರದ ಅನಂತನಾಗ್ ಬಳಿ ಯೋಧನನ್ನು ಅಪಹರಿಸಿದ ಉಗ್ರರು

ಜಮ್ಮು-ಕಾಶ್ಮೀರದ ಅನಂತನಾಗ್ ಬಳಿ ಯೋಧನನ್ನು ಅಪಹರಿಸಿದ ಉಗ್ರರು

Territorial Army Personnel abducted during Anti-Militancy Operation in South Kashmir

ಶ್ರೀನಗರ, ಅ.9- ಜಮ್ಮು-ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ಉಗ್ರರು ಇಬ್ಬರು ಯೋಧರನ್ನು ಅಪಹರಿದ್ದಾರೆ . ಅವರಲ್ಲಿ ಓರ್ವ ಯೋಧ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡವು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಯೋಧನ ಪತ್ತೆಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ. 2020ರಲ್ಲಿ ಉಗ್ರರು ಇದೇ ರೀತಿಯ ಹೇಡಿತನ ನಡೆಸಿದ್ದರು. ಕಾಶ್ಮೀರದಲ್ಲಿ ಟೆರಿಟೋರಿಯಲ್ ಆರ್ಮಿ ಯೋಧ ಶಾಕಿರ್ ಮಂಜೂರ್ ವೇಜ್ ಅವರನ್ನು ಅಪಹರಿಸಲಾಗಿತ್ತು. ಈ ಘಟನೆಯ ಐದು ದಿನಗಳ ನಂತರ, ಮನೆಯ ಬಳಿ ಶಾಕಿರ್ ಬಟ್ಟೆಗಳು ಸಿಕ್ಕಿದ್ದವು..

ನಂತರ 24 ವರ್ಷದ ಶಾಕಿರ್ ವೇಜ್ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಹರ್ಮಾನ್‌ನಲ್ಲಿರುವ ತನ್ನ ಮನೆಯ ಬಳಿ ನಾಪತ್ತೆಯಾಗಿದ್ದರು. ಬಕ್ರೀದ್‌ನಂದು ಶಾಕಿರ್ ತನ್ನ ಮನೆಗೆ ಹೋಗಿದ್ದ. ಅಪಹರಣದ ಜತೆಗೆ ಯೋಧನ ಕಾರನ್ನು ಉಗ್ರರು ಸುಟ್ಟು ಹಾಕಿದ್ದಾರೆ ಶಾಕಿರ್ ದಕ್ಷಿಣ ಕಾಶ್ಮೀರದ ಬಾಲಾಪುರದಲ್ಲಿ 162-ಟಿಎಯಲ್ಲಿ ನಿಯೋಜನೆಗೊಂಡಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಗುರುತು ಪತ್ತೆಯಾಗಿರಲಿಲ್ಲ.

ಒಂದು ವರ್ಷದ ನಂತರ ಸೆಪ್ಟೆಂಬರ್‌ನಲ್ಲಿ ಶಕೀರ್‌ನ ಶವ ಪತ್ತೆಯಾಗಿತ್ತು. ಕಾಶ್ಮೀರದ ಕುಲ್ಗಾಮ್ ಜಿಲ್ಲೆ ಶಾಕಿರ್ ವಾಗೆ ಮೃತದೇಹ ಪತ್ತೆಯಾಗಿದೆ. ತನಿಖೆಯ ನಂತರ ಪೊಲೀಸರು ಶಾಕಿರ್ ಕುಟುಂಬವನ್ನು ಸಂಪರ್ಕಿಸಿದರು. ಈ ವೇಳೆ ಮೃತದೇಹವನ್ನು ಗುರುತಿಸಿದಾಗ ಅದು ತನ್ನ ಮಗ ಶಾಕಿರ್ ಎಂದು ಪತ್ತೆಯಾಗಿದೆ ಎಂದು ಆತನ ತಂದೆ ಮಂಜೂರ್ ಅಹ್ಮದ್ ವಾಗೆ ತಿಳಿಸಿದ್ದಾರೆ

ಇದಕ್ಕೂ ಮುನ್ನ ಆಗಸ್ಟ್ 27 ರಂದು ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಬಂಧಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಅರಣ್ಯ ಪ್ರದೇಶದಿಂದ ಟೆರಿಟೋರಿಯಲ್ ಆರ್ಮಿಯ ಇಬ್ಬರು ಸೈನಿಕರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿತ್ತು.

RELATED ARTICLES

Latest News