Thursday, December 5, 2024
Homeರಾಜ್ಯಕದಂಬ ನೌಕಾನೆಲೆ ಬಳಿ ಅಬುಮಾನಾಸ್ಪದ ಡ್ರೋನ್ ಹಾರಾಟ

ಕದಂಬ ನೌಕಾನೆಲೆ ಬಳಿ ಅಬುಮಾನಾಸ್ಪದ ಡ್ರೋನ್ ಹಾರಾಟ

Intel Agencies on High Alert After Drone Spotted Over Naval Base in Karnataka's Karwar

ಕಾರವಾರ,ಅ.9- ಇಲ್ಲಿನ ಅರಗಾದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆ ಪ್ರದೇಶ ಬಳಿ ಕಳೆದ ರಾತ್ರಿ ಅಪರಿಚಿತ ಡ್ರೋನ್ ಹಾರಾಡಿರುವುದು ಹೊಸ ಅನುಮಾನ ಸೃಷ್ಠಿಸಿದೆ. ವಕ್ಕನಳ್ಳಿಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಾಡಿದ್ದು, ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆಗೆ ನಿಷೇಧಸಲಾಗಿದೆ.ಪ್ರಸ್ತುತ ಡ್ರೋನ್ ಹಾರಾಟದ ವಿಡಿಯೋವನ್ನು ಸ್ಥಳಿಯರು ನೌಕಾನೆಲೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ.

ಸುಮಾರು 2-3 ಕಿ.ಮೀ ಎತ್ತರದಲ್ಲಿ ನೈಟ್ ವಿಶನ್ ಡ್ರೋನ್ ಹಾರಾಡಿದ್ದು, ಹಲವು ಸಂಶಯಕ್ಕೆ ಕಾರಣಾಗಿದೆ. ಸಾಮಾನ್ಯವಾಗಿ 600 ದಿಂದ 1,200 ಮೀ ಎತ್ತರ ಹಾರುವ ಡ್ರೋನ್ ಸ್ಥಳೀಯವಾಗಿ ಬಳಕೆ ಮಾಡಲಾಗುತ್ತೆ. ಆದರೆ, ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಾಡಿರುವುದು ಸಂಶಯಕ್ಕೆ ಕಾರಣವಾಗಿದೆ.ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ನೌಕಾಪಡೆ, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳು ಮುಂದಾಗಿವೆ.

ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಥಳೀಯರಿಂದಲೂ ಮಾಹಿತಿ ಪಡೆಯುತ್ತಿದ್ದಾರೆ . ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆಬಿ ಹಾಗೂ ಎನ್‌ಹೆಚ್‌ಎಐಗಳು ಕೂಡ ಡ್ರೋನ್ ಬಳಸಿಲ್ಲ ಎಂದು ಸ್ಪಷ್ಟಪಡಿಸಿವೆ. ಇದರಿಂದ ಸಂಶಯ ದಟ್ಟವಾಗಿದ್ದು ನೌಕಾಪಡೆ ಹಾಗೂ ಗುಪ್ತಚರ ಇಲಾಖೆಗಳಿಂದ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.

ಇತ್ತೀಚೆಗೆ ಹನಿಟ್ರ್ಯಾಪ್ ಗೆ ಒಳಗಾಗಿ ನೌಕಾ ನೆಲೆಯಲ್ಲಿನ ಗುಪ್ತ ಮಾಹಿತಿ ನೀಡುತ್ತಿದ್ದ ಮೂವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಈ ಘಟನೆ ಮಾಸುವ ಮುನ್ನವೇ ಇದೀಗ ಡ್ರೋನ್ ಹಾರಾಟ ಮಾಡಿರುವು ಹೊಸ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

RELATED ARTICLES

Latest News