ಕನ್ನಡಿಗನ ಸಂಶೋಧನೆ: ಮಕ್ಕಳಿಗೆ ಪಾಠ ಮಾಡಲಿದೆ ‘ಶಿಕ್ಷಾ’ ರೋಬೋಟ್

ಬೆಂಗಳೂರು, ಫೆ.27 (ಪಿಟಿಐ) – ಒಂದರಿಂದ ನಾಲ್ಕನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಾಮಥ್ರ್ಯ ಹೊಂದಿರುವ ರೋಬೋಟ್ ಒಂದನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿರುವ ಟೆಕ್ಕಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ. ಎಲೆಕ್ಟ್ರಾನಿಕ್ಸ್‍ನಲ್ಲಿ ಪರಿಣಿತಿ ಪಡೆದು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿರುವ ಅಕ್ಷಯ್ ಮಶೆಲ್ಕರ್ ಎಂಬುವರು ಶಿಕ್ಷಾ ಎಂಬ ರೋಬೋಟ್ ಕಂಡುಹಿಡಿದಿರುವುದು ನಮ್ಮ ಕನ್ನಡಿಗ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಹ್ಯುಮನಾಯ್ಡ್ ಮಾದರಿಯ ರೋಬೋಟ್ ಸಿದ್ದವಾಗಿದೆ, ಆದರೆ ಅದನ್ನು ಅಧಿಕೃತವಾಗಿ ಎಲ್ಲಿಯೂ ನಿಯೋಜಿಸಲಾಗಿಲ್ಲ. ಆದಾಗ್ಯೂ, ‘ಶಿಕ್ಷಾ’ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಪಯುಕ್ತ ಕಲಿಕೆಯ ಸಾಧನವಾಗಿದೆ […]