ಪುಣೆ, ಅ 27 (ಪಿಟಿಐ) ಬಾರಾಮತಿ ಮೂಲದ ಅಗ್ರಿಕಲ್ಚರ್ ಡೆವಲಪ್‍ಮೆಂಟ್ ಟ್ರಸ್ಟ್ ರೈತರ ಅನುಕೂಲಕ್ಕಾಗಿ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲು ಅನುಕೂಲವಾಗುವ ಆನ್‍ಲೈನ್ ಕೋರ್ಸ್ ಅನ್ನು ಪರಿಚಯಿಸಲಿದೆ ಎಂದು ಎನ್‍ಸಿಪಿ ಸಂಸ್ಥಾಪಕ ಶರದ್ ಪವಾರ್ ಹೇಳಿದ್ದಾರೆ.
ಕೃಷಿ ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆಗಾಗಿ ಕೃತಕ ಬುದ್ಧಿಮತ್ತೆ ಎಂಬ ಕೋರ್ಸ್ ಅನ್ನು ಮುಂದಿನ ವರ್ಷ ಆರಂಭಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಡಿಟಿಯ ಸಹ-ಸಂಸ್ಥಾಪಕರೂ ಆಗಿರುವ ಮಾಜಿ ಕೇಂದ್ರ ಸಚಿವರು, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯವು ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ ಎಂದು ವಿವರಣೆ ನೀಡಿದರು.
ಇಸ್ರೇಲ್-ಹಮಾಸ್ ಹಿಂಸಾಚಾರದ ಯುದ್ಧಕ್ಕೆ ಪ್ರಿಯಾಂಕಾ ವಾದ್ರಾ ಖಂಡನೆ
ಇದು ರೈತರಿಗೆ ನಿರ್ವಹಣೆ ಮತ್ತು ಇಳುವರಿ ಮುನ್ಸೂಚನೆ, ನೀರು ನಿರ್ವಹಣೆ ಮತ್ತು ಬರ ಮುನ್ಸೂಚನೆ, ಕೃಷಿ ಸಂಪನ್ಮೂಲ ಹಂಚಿಕೆ, ಮಣ್ಣಿನ ನಿರ್ವಹಣೆ, ಬೆಳೆ ಸರದಿ, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಲ್ಲಿ ಸಹಾಯ ಮಾಡುತ್ತದೆ ಎಂದು ಎಡಿಟಿ ಪ್ರಕಟಣೆ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಕ್ಲೌಡ್ ಅಂಡ್ ಎಡ್ಜ್ ಇಂಪ್ಲಿಮೆಂಟೇಶನ್ ಕೋರ್ಸ್ ನಿರ್ದೇಶಕ ಅಜಿತ್ ಜಾವ್ಕರ್, ಎಐ ತಂತ್ರಜ್ಞಾನವನ್ನು ನೆಲಮಟ್ಟದಲ್ಲಿ ಮತ್ತು ರೈತರ ಅನುಕೂಲಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡುವುದು ನಮ್ಮ ಗಮನವಾಗಿದೆ ಎಂದಿದ್ದಾರೆ.