Friday, May 10, 2024
Homeರಾಜಕೀಯಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ : ಪರಮೇಶ್ವರ್

ಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ : ಪರಮೇಶ್ವರ್

ಬೆಂಗಳೂರು, ಅ.27- ಮೈತ್ರಿ ಸರ್ಕಾರ ಪತನಗೊಳ್ಳುವ ಮುನ್ನಾ ಆಗಿನ ಉಪಮುಖ್ಯಮಂತ್ರಿ ಪರಮೇಶ್ವರ್ ಮನೆಯಲ್ಲಿ ಸಭೆ ನಡೆದು, ಕೆಲ ಶಾಸಕರು ತಿಂಡಿ ತಿಂದು ಹೊರಟರು ಎಂಬುದು ಆಧಾರ ರಹಿತ ಆರೋಪ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ. ನಮ್ಮ ಮನೆಯಲ್ಲಿ ಅಂತಹ ಯಾವ ಸಭೆಗಳು ನಡೆದಿಲ್ಲ. ಶಾಸಕರು ಸಚಿವರ ಮನೆಗೆ ಬರುವುದು ಸ್ವಾಭಾವಿಕ. ಆದರೆ ನಮ್ಮ ಮನೆಯಲ್ಲಿ ಸರ್ಕಾರ ಪತನಗೊಳಿಸುವಂತಹ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದು ಕುಮಾರಸ್ವಾಮಿ ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಹೇಳಿದ ಎಲ್ಲಾದಕ್ಕೂ ಉತ್ತರ ನೀಡುವ ಅಗತ್ಯ ಇಲ್ಲ. ಈಗಾಗಲೇ ರಾಜ್ಯದ ಜನ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೂ ಹಾಗೂ ನಮ್ಮ ಅಹವಾಲಿಗೂ ಉತ್ತರ ಸಿಕ್ಕಿದೆ ಎಂದರು.

ವನ್ಯಜೀವಿಗಳ ವಸ್ತುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ಕೋಮುವಾದದ ಒಡಕು ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿ ಗೃಹ ಸಚಿವರು, ದೇಶದಲ್ಲಿರುವ ಕಾನೂನು ಎಲ್ಲರಿಗೂ ಒಂದೆ ಯಾವುದೇ ಜಾತಿ, ಧರ್ಮ ಪ್ರತ್ಯೇಕವಾಗಿರುವುದಿಲ್ಲ. ಎಲ್ಲರಿಗೂ ಏಕರೂಪವಾಗಿಯೇ ಅನ್ವಯವಾಗುತ್ತದೆ. ವನ್ಯ ಜೀವಿಗಳ ವಸ್ತುಗಳನ್ನು ವಾಪಾಸ್ ನೀಡಲು ಮತ್ತೊಮ್ಮೆ ಅವಕಾಶ ನೀಡುವ ಬಗ್ಗೆ ಸಚಿವರು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅಂತಹ ವಸ್ತುಗಳನ್ನು ಯಾರೇ ಇಟ್ಟುಕೊಂಡಿದ್ದರೂ ನಿಗದಿತ ಅವಯಲ್ಲಿ ವಾಪಾಸ್ ನೀಡಬೇಕು. ಇಲ್ಲವಾದರೆ ಕ್ರಮ ಜರುಗಿಸಲಾಗುತ್ತದೆ. ದರ್ಗಾದಲ್ಲಿ ನವೀಲುಗರಿಗಳಿದ್ದರೆ ಅದರ ವಿರುದ್ಧವೂ ಕ್ರಮಗಳಾಗುತ್ತವೆ ಎಂದರು.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಪೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹಗರಣದ ಆರೋಪಿ ಶ್ರೀಕಿ ಪರ ವಕೀಲರು ಒಂದನೇ ಎಸಿಎಂಎಂ ನ್ಯಾಯಾಲಯಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಬಿಟ್ ಕಾಯಿನ್ ತನಿಖೆ ನಡೆಸುತ್ತಿರುವ ಪ್ರತಿ ಅಕಾರಿಗೂ ಬಹಳ ಎಚ್ಚರಿಕೆಯಿಂದ ಇರಬೇಕು ಹಾಗೂ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಹೇಳಿದ್ದೇವೆ.

ಅದರಲ್ಲಿರುವ ಅಧಿಕಾರಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ತನಿಖಾ ತಂಡದಿಂದ ಕೈ ಬಿಡುತ್ತೇವೆ. ಅತಂಹವರನ್ನು ಇಟ್ಟುಕೊಂಡು ತನಿಖೆ ಮಾಡುವುದಿಲ್ಲ ಎಂದರು.

ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಶಾಸಕರು ವಿದೇಶ ಪ್ರವಾಸ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಸ್ವಂತ ದುಡ್ಡಿನಲ್ಲಿ ತಾನೇ ವಿದೇಶ ಪ್ರವಾಸ ಮಾಡುತ್ತಾರೆ. ಹೋಗಲಿ ಬಿಡಿ, ಖುಷಿಯಾಗಿ ಪ್ರವಾಸ ಮಾಡಿ ಸಂಭ್ರಮಿಸಿ ಬರಲಿ. ನಾಲ್ಕು ಮಂದಿ ಶಾಸಕರು ಪ್ರವಾಸ ಹೋಗುತ್ತಾರೆ ಎಂದರೆ ಅದಕ್ಕೆ ಬೇರೆ ಬಣ್ಣ ಕಟ್ಟುವ ಅಗತ್ಯ ಇಲ್ಲ ಎಂದರು.

ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಕುಣಿಗಲ್ ಕೂಡ ಬೆಂಗಳೂರಿಗೆ ಸೇರಬೇಕು ಎಂಬ ಯಾವುದೇ ಪ್ರಸ್ತಾವನೆಗಳಿಲ್ಲ. ರಾಮನಗರ ವಿವಾದದಲ್ಲಿ ತುಮಕೂರಿನವರನ್ನು ಮಧ್ಯೆ ತರಬೇಡಿ. ನಾವು ಶಾಂತಿಯಿಂದ ಇದ್ದೇವೆ ಎಂದರು.

RELATED ARTICLES

Latest News