ಮುಂಬೈ,ಅ.10-ಪ್ರಚಾರದಿಂದ ಸ್ವಲ್ಪ ದೂರ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಿದ್ದು ಕಡಿಮೆ ಆದರೂ ಅಪರೂಪಕ್ಕೆ ಒಂದೆರೆಡು ಬಾರಿ ತಮ ವಿವಾಹದ ವಿಷಯದ ಕುರಿತು ಅವರು ಬಹಿರಂಗವಾಗಿ ಮಾತನಾಡಿದ್ದರು.
ಚಿತ್ರ ನಟಿ ಜೊತೆ ನಿಶ್ಚಿತವಾಗಿದ್ದ ವಿವಾಹ ಕೊನೆ ಹಂತದಲ್ಲಿ ರದ್ದುಗೊಂಡಿತ್ತು ಆದರೆ ಅವರಿಗೆ ಅದ್ಯಾಕೋ ವಿವಾಹ ಭಾಗ್ಯ ಒದಗಿ ಬರಲೇ ಇಲ್ಲ ಆದರೆ ಜಗತ್ತೇ ಬೆರಗಾಗುವಂತೆ ಅಪ್ರತಿಮ ಉದ್ಯಮಿಯಾಗಿ ಟಾಟಾ ಕಂಪನಿಯನ್ನು ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ಅವರ ಪರಿಶ್ರಮ ಅಪರಿಮಿತ.
ಕನಿಷ್ಠ 4 ಬಾರಿ ವಿವಾಹದ ಸಮೀಪಕ್ಕೆ ಹೋಗಿದ್ದೆ. ಆದರೆ ಪ್ರತಿ ಬಾರಿಯೂ ನಾನೇ ಹೆದರಿಕೊಂಡು ವಿವಾಹದಿಂದ ಹಿಂದೆ ಸರಿದೆ. ಹೀಗಾಗಿ ಮದುವೆ ಅವಕಾಶ ತಪ್ಪಿಹೋಯ್ತು ಎಂದು ನಗುನಗುತ್ತಲೇ ಉತ್ತರಿಸಿದ್ದರು ಒಂದು ಭಾರಿ ರತನ್ ಟಾಟಾ ಹೇಳಿದರು.
ಬಾಲಿವುಡ್ ನಟಿ, ಮಾಡೆಲ್ ಸಿಮಿ ಗರೇವಾಲ್ ಮತ್ತು ರತನ್ ಟಾಟಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ 70-80ರ ದಶಕದಲ್ಲಿ ದೊಡ್ಡದಾಗಿ ಹಬ್ಬಿತ್ತು. ಆದರೆ ಇಬ್ಬರೂ ಎಲ್ಲಿಯೂ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ ಮತ್ತು ಪ್ರತಿಕ್ರಿಯೆಯನ್ನೂ ನೀಡಲಿರಲಿಲ್ಲ. ಆದರೆ ಸಂದರ್ಶನವೊಂದರಲ್ಲಿ ಸ್ವತಃ ಸಿಮಿ,ರತನ್ ಟಾಟಾ ಅವರನ್ನು ಬಹುವಾಗಿ ಹೊಗಳಿದ್ದರು.
ನಮಿಬ್ಬರದ್ದು ಸುದೀರ್ಘ ಇತಿಹಾಸವಿದೆ. ಅವರೊಬ್ಬ ಪರಿಪೂರ್ಣ ವ್ಯಕ್ತಿ. ಅವರೆಂದೂ ದುಡ್ಡಿನ ಹಿಂದೆ ಬಿದ್ದಿರಲಿಲ್ಲ ಎಂದು ಹೇಳಿದ್ದರು.
ಬ್ರಹಚಾರಿಯಾಗಿ ಇಡೀ ಜೀವನ ಆದರ್ಶಬದುಕು ನಡೆಸಿ ಬಾರದ ಲೋಕಕ್ಕೆ ತೆರಳಿದ್ದಾರೆ.