Thursday, December 12, 2024
Homeರಾಷ್ಟ್ರೀಯ | Nationalರೈಲಿಗೆ ಬಾಂಬ್‌ ಬೆದರಿಕೆ, ಕೆಲ ಕಾಲ ಆತಂಕ

ರೈಲಿಗೆ ಬಾಂಬ್‌ ಬೆದರಿಕೆ, ಕೆಲ ಕಾಲ ಆತಂಕ

Purushottam Express halted for over three hours in Uttar Pradesh's Tundla after bomb scare

ನವದೆಹಲಿ, ಅ.10- ಕೆಲವು ಶಂಕಿತ ಭಯೋತ್ಪಾದಕರು ಸ್ಫೋಟಕಗಳೊಂದಿಗೆ ಪ್ರಯಾಣಿಸುತ್ತಿರುವ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶಬಂದು ಕೆಲ ಕಾಲ ಆತಂಕ ಸೃಷೃಯಾದ ಘಟನೆ ಇಂದು ಮುಂಜಾನೆ ನಡೆದಿದೆ.

ಇದರಿಂದ ಇಂದು ಮುಂಜಾನೆ ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ಪುರಿ-ನವದೆಹಲಿ ನಡುವೆ ಸಂಚರಿಸುವ ಪುರುಷೋತ್ತಮ್‌ ಎಕ್ಸ್ ಪ್ರೆಸ್‌‍ಅನ್ನು ಮೂರು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು.

ಮುಂಜಾನೆ 2.30 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ರೈಲನ್ನು ತೀವ್ರ ತಪಾಸಣೆ ನಡೆಸಲಾಯಿತು.ಎಲ್ಲಾ ಕೋಚ್‌ಗಳಲ್ಲಿನ ಪ್ರತಿಯೊಬ್ಬ ಪ್ರಯಾಣಿಕರನ್ನು ಎಚ್ಚರಗೊಳಿಸಲಾಯಿತು ಮತ್ತು ಅವರ ಲಗೇಜ್‌ಗಳನ್ನು ಲೋಹ ಶೋಧಕಗಳು ಮತ್ತು ಶ್ವಾನ ದಳಗಳೊಂದಿಗೆ ಸಂಪೂರ್ಣವಾಗಿ ಪರಿಶೀಲಿಸಲಾಯಿತು ಆದರೆ ಏನೂ ಕಂಡುಬಂದಿಲ್ಲ ಎಂದು ಪ್ರಯಾಗ್‌ರಾಜ್‌‍ ರೈಲು ವಿಭಾಗದ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲಿನಲ್ಲಿ ಸ್ಫೋಟಕಗಳೊಂದಿಗೆ ಬಯೋತ್ಪಾದಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ನಾವು ಎಕ್ಸ್ ಪೋಸ್ಟ್‌ನಲ್ಲಿ ಸ್ವೀಕರಿಸಿದ್ದೇವೆ, ಇದನ್ನು ಏರ್‌ ಇಂಡಿಯಾ ದೆಹಲಿ-ಲೇಹ್‌ ವಿಮಾನದಿಂದ ಬಂದಿದೆ. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News