Saturday, October 19, 2024
Homeಅಂತಾರಾಷ್ಟ್ರೀಯ | Internationalಬೈರೂತ್‌ನಲ್ಲಿ ಇಸ್ರೇಲ್ ವಾಯು ದಾಳಿ, 22 ಮಂದಿ ದಾರುಣ ಸಾವು

ಬೈರೂತ್‌ನಲ್ಲಿ ಇಸ್ರೇಲ್ ವಾಯು ದಾಳಿ, 22 ಮಂದಿ ದಾರುಣ ಸಾವು

Lebanon says 22 killed in Israeli strikes on central Beirut

ಬೈರೂತ್ , ಅ.11– ಇಸ್ರೇಲ್ ಸೇನೆಯು ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 22 ಮಂದಿ ಹತ್ಯೆಯಾಗಿದ್ದು, ಸುಮಾರು 117 ಮಂದಿ ಗಾಯಗೊಂಡಿದ್ದಾರೆ

ರಾಸ್ ಅಲಾ -ನಬಾ ಪ್ರದೇಶ ಮತ್ತು ಬುರ್ಜ್ ಅಬಿ ಹೈದರ್ ಪ್ರದೇಶ, ಮತ್ತು ಎಂಟು ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಿತು. ಸೆಪ್ಟೆಂಬರ್ ಅಂತ್ಯದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿದ ನಂತರ ಬೈರೂತ್‌ನ ದಕ್ಷಿಣ ಉಪನಗರವಾದ ದಹಿಯೆಹ್ ಹೊರಗೆ ಇದು ಮೂರನೇ ಇಸ್ರೇಲಿ ದಾಳಿಯನ್ನು ಸೂಚಿಸುತ್ತದೆ.

ಅದೃಷ್ಟವಶಾತ್ ಈ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಅಧಿಕಾರಿಯೊಬ್ಬರು ಬದುಕುಳಿದಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ. ಸ್ಥಳೀಯ ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಮತ್ತು ಅಲ್ ಜಜೀರಾದ ಸತ್ಯಶೋಧನಾ ಸಂಸ್ಥೆ ಪರಿಶೀಲಿಸಿದ ವೀಡಿಯೋಗಳು ದಾಳಿಯ ನಂತರದ ಗೊಂದಲ ಮಯ ದೃಶ್ಯಗಳನ್ನು ತೋರಿಸುತ್ತವೆ, ರಾಸ್ ಅಲ್ಲಾ -ನಬಾ ಮತ್ತು ಅಲ್ಲಾ -ನುವೇರಿಯ ವಸತಿ ಬ್ಲಾಕ್‌ಗಳನ್ನು ಹೊಗೆ ಮತ್ತು ಜ್ವಾಲೆಗಳು ಆವರಿಸಿವೆ.

ಕಳೆದ 1 ವರ್ಷದಲ್ಲಿ ಇಸ್ರೇಲ್ ನಡೆಸಿದ ಮಾರಣಾಂತಿಕ ದಾಳಿಗಳಲ್ಲಿ ಇದೂ ಒಂದು ಎನ್ನಲಾಗಿದೆ. ದಾಳಿಯಿಂದ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲಕರಿಗೆ ಅಪಾಯವುಂಟಾಗಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ

ಈ ಹಿಂದೆ ಸೆ. 29 ರಂದು ಬೈರೂತ್‌ನ ಕೋಲಾ ಮತ್ತು ಅ.3 ರಂದು ಬಚೌರಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಅಲ್ ಜಜೀರಾ ವರದಿ ಮಾಡಿದೆ. ಯಾವುದೇ ಮುನ್ಸೂಚನೆಯಿಲ್ಲದೆ ನಿನ್ನೆ ಮಧ್ಯರಾತ್ರಿ ಸಂಭವಿಸಿದ ಈ ದಾಳಿಗಳು ರಾಜಧಾನಿಯ ಹೃದಯಭಾಗದಲ್ಲಿರುವ ಎರಡು ವಸತಿ ಕಟ್ಟಡಗಳಿಗೆ ಅಪ್ಪಳಿಸಿವೆ. ಉದ್ದೇಶಿತ ಕಟ್ಟಡಗಳಲ್ಲಿ ಒಂದು ಅನೇಕ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುವ ಪ್ರದೇಶದಲ್ಲಿದೆ.

ಸುಮಾರು ಒಂದು ಮೈಲಿ ದೂರದಿಂದ ಭೂಕಂಪನದ ಅನುಭವವಾಗುತ್ತಿದ್ದು, ಕಟ್ಟಡಗಳು ನಡುಗುತ್ತಿವೆ ಮತ್ತು ವಸತಿ ಬ್ಲಾಕ್ ಗಳಿಂದ ಹೊಗೆ ಹೊರಬರುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್‌ಗಳನ್ನು ಖಾಲಿ ಮಾಡಿದರು, ತುರ್ತು ಸೇವೆಗಳು ಸ್ಪಂದಿಸುತ್ತಿದ್ದಂತೆ ಅಂಗಳಗಳಲ್ಲಿ ಜಮಾಯಿಸಿದ್ದರು.

ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ, ಲೆಬನಾನ್ ಸೇನಾ ಟ್ಯಾಂಕರ್‌ಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರತ್ ನನ್ನು ಹೊಡೆದುರುಳಿಸಿದ ನಂತರ ಉನ್ನತ ಅಧಿಕಾರಿಗಳ ಸರಣಿ ಹತ್ಯೆಯನ್ನೇ ಹೆಚ್ಚಾಗಿ ಗುರಿಯಾಗಿಸಿದೆ.

ಆದ್ರೆ ಈ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತಾಧಿಕಾರಿ ಬದುಕುಳಿದಿದ್ದಾರೆ. ಈ ದಾಳಿಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಸ್ಪೇನ್ ಹಾಗೂ ಇಟಲಿ ದೇಶಗಳು ಆರೋಪಿಸಿವೆ. ಇತ್ತೀಚೆಗೆ ಇಸ್ರೇಲ್ ಹಿಜ್ಬುಲ್ಲಾದ 120 ಉಗ್ರ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಆ ನಂತರ ನಡೆದ ಅತಿದೊಡ್ಡ ದಾಳಿ ಇದಾಗಿದೆ.

ಸಿರಿಯಾಕ್ಕೆ ಪಲಾಯನ :
ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಯುದ್ಧ ವಿಮಾನಗಳು ಲೆಬನಾನ್‌ನ ಬೆಕಾ ಪ್ರದೇಶ ಮತ್ತು ಬೈರೂತ್‌ನಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. ಮೂಲಸೌಕರ್ಯ ತಾಣಗಳು, ಲಾಂಚರ್‌ಗಳು, ಕಮಾಂಡ್ ಕಂಟ್ರೋಲ್ ಸೆಂಟರ್‌ಗಳು ಹಾಗೂ ಸಂಗ್ರಹಣಾ ಸೌಲಭ್ಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ.

ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಭಯಭೀತರಾಗಿರುವ 2.20 ಲಕ್ಷ ಮಂದಿ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

RELATED ARTICLES

Latest News