ಬೆಂಗಳೂರು,ಅ.27- ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಹುಲಿ ಉಗುರು ಪ್ರಸಂಗಗಳ ಕುರಿತಂತೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಜನತೆಗೆ ಸಮಸ್ಯೆಯಾಗದಂತೆ ತಿಳಿ ಹೇಳೀ ಕಾನೂನು ಕ್ರಮದಿಂದ ಪಾರಾಗಲು ಹೊಸ ಆಲೋಚನೆ ಮಾಡಿದೆ.
ರಾಜ್ಯಾದ್ಯಂತ ಹಲವು ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳು, ಚಿತ್ರರಂಗದ ತಾರೆಯರು, ರಾಜಕಾರಣಿಗಳಿಗೆ ಹೊಸ ಫಜೀತಿಯಾಗಿರುವ ಇದನ್ನು ಸರಿಮಾಡಲು ಅರಣ್ಯ ಸಚಿವಾಲಯ ವನ್ಯಪ್ರಾಣಿಗಳ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ ನೀಡಲು ಸಮಯ ಅವಕಾಶ ನೀಡುವ ಯೋಜನೆಯನ್ನು ರೂಪಿಸುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೆಲವರು ಹುಲಿ ಉಗುರು, ಜಿಂಕೆ ಕೊಂಬು, ಕೆಲವು ವನ್ಯಪ್ರಾಣಿಗಳ ಚರ್ಮಗಳನ್ನು ಬಳಸುತ್ತಿದ್ದರು. ಕಾಲ ಕಳೆದಂತೆ ವನ್ಯಪ್ರಾಣಿಗಳ ಸಂರಕ್ಷಣೆ ಹಾಗೂ ಪರಿಸರ ಸಮತೋಲನಕ್ಕಾಗಿ ಕಠಿಣ ಕಾನೂನನ್ನು ಜಾರಿಗೆ ತಂದಿದೆ. ಆದರೆ ಇದರ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ ಮತ್ತು ಜಾಗೃತಿ ಮೂಡಿಸುವ ಕಾರ್ಯಗಳು ಕೂಡ ಅಷ್ಟಾಗಿ ನಡೆದಿಲ್ಲ.
- ಉಪಸಮರದ ಫಲಿತಾಂಶಕ್ಕೆ ಕ್ಷಣಗಣನೆ : ಅಭ್ಯರ್ಥಿಗಳ ಎದೆಯಲ್ಲಿ ಢವಢವ
- ಕೆ.ಎಲ್.ರಾಹುಲ್ ಔಟಾ? ನಾಟ್ ಔಟಾ? : ಅಂಪೈರ್ ತೀರ್ಪು ವಿರುದ್ಧ ಮಾಜಿ ಕ್ರಿಕೆಟಿಗರ ಆಕ್ರೋಶ
- ಐಪಿಎಲ್ 3 ಆವೃತ್ತಿಗಳ ವೇಳಾಪಟ್ಟಿ ಘೋಷಿಸಿದ ಬಿಸಿಸಿಐ
- ಕಾಂಗ್ರೆಸ್ಗೆ ಅಧಿಕಾರ ಕೊಟ್ಟು ಶಿಕ್ಷೆ ಅನುಭವಿಸುತ್ತಿರುವ ರಾಜ್ಯದ ಜನ : ಜೆಡಿಎಸ್
- ಕುಣಿಗಲ್ : ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್ ಹಳ್ಳಕ್ಕೆ ಉರುಳಿಬಿದ್ದು ರೈತ ಸಾವು
ಪ್ರಸ್ತುತ ಪ್ರಗತಿಪರ ರೈತ ವರ್ತೂರ್ ಸಂತೋಷ್ ಬಂಧನದ ನಂತರ ರಾಜ್ಯಾದ್ಯಂತ ಸಂಚಲ ಸೃಷ್ಟಿಯಾಗಿದ್ದು, ಈಗಾಗಲೇ ಹಲವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗಳು ಕೂಡ ಸೃಷ್ಟಿಯಾಗುತ್ತಿದೆ.
ಇದೆಲ್ಲದರ ಮನಗಂಡು ಸರ್ಕಾರ ಸದ್ಯಯಾರನ್ನು ಬಂಸುವುದು ಬೇಡ. ಅವರಿಗೆ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡುವ ಕ್ರಮಕ್ಕೆ ಮುಂದಾಗಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೂಡ ಈಗ ಯಾರನ್ನು ಬಂಸಬೇಕೆಂಬುದು, ಕಾನೂನು ಕ್ರಮ ಕೈಗೊಳ್ಳುವುದು ತನಿಖಾಕಾಧಿರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸುವ ಮೂಲಕ ಇದಕ್ಕೆ ಪುಷ್ಟಿ ನೀಡುವಂತೆ ಮಾತನಾಡಿದರು.
ಹಲವು ಸಚಿವರು ಹಾಗೂ ಶಾಸಕರ ಮನವಿಯಂತೆ ಸರ್ಕಾರ ಹೊಸದಾಗಿ ಅಭಿಯಾನ ಆರಂಭಿಸಿ ಯಾರ್ಯಾರ ಬಳಿ ಹುಲಿ ಉಗುರಾಗಲಿ, ಇತರೆ ಕಾನೂನು ವಿರೋ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸುವ ಅವಕಾಶವನ್ನು ನೀಡುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಾರ್ವಜನಿಕರಿಗೆ ನಿಗದಿತ ಸಮಯ ಹಾಗೂ ಯಾವ ಕಚೇರಿಗಳಲ್ಲಿ ಇದನ್ನು ಒಪ್ಪಿಸಬೇಕು ಎಂಬುದರ ಬಗ್ಗೆಯೂ ರೂಪುರೇಷೆ ಸಿದ್ದಪಡಿಸಲು ಅಧಿಕಾರಿ ವಲಯದಲ್ಲಿ ಕೂಡ ಚರ್ಚೆ ನಡೆಯುತ್ತಿದೆ. ಸಾರ್ವಜನಿಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಸರ್ಕಾರ ಯಾವ ಯಾವ ನಿಯಮಗಳನ್ನು ಮುಂದಿಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.