ಥಾಣೆ,ಅ.17- ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿ ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ ಸುಮಾರು 1.31 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಭಾರತೀಯ ರೈಲ್ವೇಯಲ್ಲಿ ಕ್ಲೆರಿಕಲ್ ಉದ್ಯೋಗ ಕೊಡಿಸುವ ಭರವಸೆ ನೀಡಿ ಸುಮಾರು 20 ಜನರನ್ನುವೊಚಿಸಿದ್ದಾರೆ.ಕಳೆದ ಸೆಪ್ಟೆಂಬರ್ 2022 ರಿಂದ ಏಪ್ರಿಲ್ 2023 ರ ನಡುವೆ ಡಿಜಿಟಲ್ ಪಾವತಿ ಮತ್ತು ನಗದು ವಹಿವಾಟಿನ ಮೂಲಕ ಉದ್ಯೋಗ ಆಕಾಂಕ್ಷಿಗಳಿಂದ 1.31 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಖಾರ್ಘರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ವಿಚಿತ್ರವೆಂದರೆ ಆರೋಪಿಗಳಲ್ಲಿ ಒಬ್ಬನು ಪಡೆದ ಹಣವನ್ನುಕೊಲ್ಲಾಪುರದಲ್ಲಿ ಮನೆ ನಿರ್ಮಿಸಲು ಬಳಸಿಕೊಂಡಿದ್ದಾನೆ.ಕೆಲಸ ಸಿಗದಿದ್ದಾಗ ಸಂತ್ರಸ್ತರು, ನವಿ ಮುಂಬೈನ ಖಾರ್ಘರ್‌ನ ಎಲ್ಲಾ ನಿವಾಸಿಗಳು ಒಟ್ಟಾಗಿ ಆರೋಪಿಗಳನ್ನು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲಿಲ್ಲ ಮತ್ತು ಹಣವನ್ನು ಹಿಂದಿರುಗಿಸಲು ಒತ್ತಾಯಿಸಿದ್ದರು ತಾವು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ದೂರಿನ ಆಧಾರದ ಮೇಲೆ, ಖಾರ್ಘರ್ ಪೊಲೀಸರು ಆರು ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.ಪ್ರಸ್ತುತ ಅವರು ತಲೆ ಮರೆಸಿಕೊಂಡಿದ್ದು , ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.