Thursday, December 5, 2024
Homeರಾಷ್ಟ್ರೀಯ | Nationalನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಹರಿಯಾಣ ಮೂಲದ ವ್ಯಕ್ತಿಯ ಬಂಧನ

ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಹರಿಯಾಣ ಮೂಲದ ವ್ಯಕ್ತಿಯ ಬಂಧನ

Plot to kill Salman Khan: Navi Mumbai police nab man from Haryana

ಮುಂಬೈ, ಅ.17- ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಆರೋಪಿಯನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಖಾನನ್ನು ಹರಿಯಾಣದ ಪಾಣಿಪತ್‌ನಿಂದ ಬಂಧಿಸಲಾಗಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಜೂನ್‌ನಲ್ಲಿ, ನವಿ ಮುಂಬೈನ ಪನ್ವೇಲ್ ಬಳಿಯ ಅವರ ಫಾರ್ಮ್‌ಹೌಸ್‌ಗೆ ಹೋಗುವ ದಾರಿಯಲ್ಲಿ ನಟನನ್ನು ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಈ ಬೆಳವಣಿಗೆಯು ಮುನ್ನ ಏಪ್ರಿಲ್‌ನಲ್ಲಿ ಮುಂಬೈನ ಬಾಂದ್ರಾ ನಿವಾಸದ ಹೊರಗೆ ಗುಂಡಿನ ದಾಳಿಯು ನಡೆದಿತ್ತು.ಬಂಧಿತ ಆರೋಪಿ ಹರಿಯಾಣ ಮೂಲದ ವ್ಯಕ್ತಿಯಾಗಿದ್ದು ಆತನನ್ನು ನವಿ ಮುಂಬೈಗೆ ಕರೆತರಲಾಗಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಲಾರೆನ್ಸ್ಬಿಷ್ಣೋಯ್ ಗ್ಯಾಂಗ್ ತನ್ನನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲ್ಲುವ ಉದ್ದೇಶದಿಂದ ತನ್ನ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಖಾನ್ ಪೊಲೀಸರಿಗೆ ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಬಂಧಿತ ಆರೋಪಿಗಾಗಿ ಕಳೆದ 3 ತಿಂಗಳಿನಿಂದ ದ ಹುಡುಕಾಟ ನಡೆದಿತ್ತು.

RELATED ARTICLES

Latest News