Sunday, November 24, 2024
Homeಕ್ರೀಡಾ ಸುದ್ದಿ | Sports"ಮೊಹಮ್ಮದ್ ಸಿರಾಜ್ ಅವರನ್ನ ತಂಡದಿಂದ ಹೊರಗಿಡಿ"

“ಮೊಹಮ್ಮದ್ ಸಿರಾಜ್ ಅವರನ್ನ ತಂಡದಿಂದ ಹೊರಗಿಡಿ”

Has Mohammed Siraj failed to crack ‘home’ code?

ಬೆಂಗಳೂರು, ಅ. 20- ಐಪಿಎಲ್ನ ತಮ್ಮ ತವರು ನೆಲದಲ್ಲೇ ಉತ್ತಮ ಬೌಲಿಂಗ್ ಮಾಡುವಲ್ಲಿ ಎಡವಿರುವ ಮೊಹಮದ್ ಸಿರಾಜ್ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಟ್ಟು ಆಕಾಶ್ದೀಪ್ ಅವರಿಗೆ ಸ್ಥಾನ ಕಲ್ಪಿಸಬೇಕೆಂದು ಮಾಜಿ ಕ್ರಿಕೆಟಿಗರು ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಅನುಭವಿ ಜಸ್ಪ್ರೀತ್ ಅವರು ಉತ್ತಮ ಬೌಲಿಂಗ್ ಸಂಘಟಿಸಿ ಎರಡು ವಿಕೆಟ್ಗಳನ್ನು ಪಡೆದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಬೆಂಬಲ ನೀಡಬೇಕಾಗಿದ್ದ ಮೊಹಮದ್ ಸಿರಾಜ್ ವಿಕೆಟ್ ಪಡೆಯುವಲ್ಲಿ ಎಡವಿದ್ದರಿಂದ ಮಾಜಿ ಕ್ರಿಕೆಟ್ ಸಬಾ ಕರೀಮ್ ಅವರು ಸಿರಾಜ್ ಅವರನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಮುನ್ನ ಅವರೊಂದಿಗೆ ಆಯ್ಕೆ ಮಂಡಳಿ ಚರ್ಚಿಸಬೇಕೆಂದು ಸಲಹೆ ನೀಡಿದ್ದಾರೆ.

`ಮೊಹಮ್ಮದ್ ಸಿರಾಜ್ ಅವರು ಕೆಲವು ರೀತಿಯ ಒತ್ತಡಕ್ಕೆ ಒಳಗಾಗಬಹುದು ಎಂದು ನಾನು ಭಾವಿಸುತ್ತಿದ್ದೇನೆ ಮತ್ತು ಅವರು ಮುಂದಿನ ಟೆಸ್ಟ್ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡುವ ಮುನ್ನ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಬೇಕು. ಏಕೆಂದರೆ ಟೆಸ್ಟ್ ಪಂದ್ಯದಲ್ಲಿ ಮುಂಚೂಣಿಯ ವೇಗದ ಬೌಲರ್ ಆಗಿರುವ ಅವರಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತೇವೆ.

ನಿಮನ್ನು ನಿರೀಕ್ಷಿಸಲಾಗಿದೆ. ಹೊಸ ಚೆಂಡಿನೊಂದಿಗೆ ವಿಕೆಟ್ಗಳನ್ನು ತೆಗೆಯಲು ಮತ್ತು ಎರಡನೇ ಹೊಸ ಚೆಂಡಿನೊಂದಿಗೆ ಉತ್ತಮವಾಗಿ ಬೌಲ್ ಮಾಡುವ ಮೂಲಕ ವಿಕೆಟ್ ಪಡೆದು ತಂಡಕ್ಕೆ ನೆರವು ನೀಡಬೇಕಾಗುತ್ತೆ. ಅಲ್ಲದೆ ಸಿರಾಜ್ ಭಾರತೀಯ ಪರಿಸ್ಥಿತಿಗಳಲ್ಲಿ ಅಂತಹ ಟ್ರ್ಯಾಕ್ಗಳಲ್ಲಿ ಬೌಲಿಂಗ್ ಮಾಡುವ ಸಾಕಷ್ಟು ಅನುಭವವನ್ನು ಅವರು ಹೊಂದಿದ್ದಾರೆ ಏಕೆಂದರೆ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವು ಪಂದ್ಯಗಳನ್ನು ಆಡಿರುವ ಅನುಭವ ಹೊದಿದ್ದಾರೆ. ಆದರೆ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಮೂಡಿ ಬರದಿರುವುದನ್ನು ನಾವು ಕಂಡಿದ್ದೇವೆ’ ಎಂದು ಸಾಬಾ ಕರೀಮ್ ಹೇಳಿದರು.

ಆಕಾಶ್ದೀಪ್ಗೆ ಸ್ಥಾನ ನೀಡಿ: ಅನಿಲ್ಕುಂಬ್ಳೆ
ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ಕುಂಬ್ಳೆಅವರು ಕೂಡ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೊಹಮದ್ ಸಿರಾಜ್ ಬದಲಿಗೆ ಆಕಾಶ್ದೀಪ್ಗೆ ಅವಕಾಶ ನೀಡುವ ಮೂಲಕ ಅವರ ಬತ್ತಳಿಕೆಯಲ್ಲಿರುವ ವೇಗದ ಅಸ್ತ್ರವನ್ನು ಬಳಸಿಕೊಳ್ಳಬೇಕೆಂದು ಹೇಳಿದ್ದಾರೆ.

RELATED ARTICLES

Latest News