Sunday, November 24, 2024
Homeಕ್ರೀಡಾ ಸುದ್ದಿ | Sports2025ರ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲಿ ಸ್ಥಳೀಯರಿಗೆ ಮಣೆ

2025ರ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲಿ ಸ್ಥಳೀಯರಿಗೆ ಮಣೆ

Karnataka-government-might-force-Rcb-to-buy-local-players

ಬೆಂಗಳೂರು, ಅ. 21- ಐಪಿಎಲ್‌ನಲ್ಲಿ ಹೆಸರಿಗೆ ಬೆಂಗಳೂರು ಪದ ಇಟ್ಟುಕೊಂಡಿ ದ್ದರೂ ಸ್ಥಳೀಯರಿಗೆ ಮಣೆ ಹಾಕುವಲ್ಲಿ ಆರ್‌ಸಿಬಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದು, ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಹೆಸರಿಗೆ ತಕ್ಕಂತೆ ತಂಡದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಫ್ರಾಂಚೈಸಿಗೆ ಕರ್ನಾಟಕ ಸರ್ಕಾರ ಹೇಳಿದೆ.

ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಾಗಿರುವ ಮುಂಬೈ ಇಂಡಿಯನ್ಸ , ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು 5 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಲು ಸ್ಥಳೀಯ ಪರಿಶ್ರಮವೇ ಕಾರಣವಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಲೀಕರು ಆಟಗಾರರಿಲಿ, ಸಿಬ್ಬಂದಿಗಳನ್ನು ಹೊರ ರಾಜ್ಯ ಹಾಗೂ ವಿದೇಶಿಗರಿಗೆ ಮಣೆ ಹಾಕುತ್ತಾ ಬಂದಿದೆ.

ಒಂದು ವೇಳೆ ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿದರೂ ಅವರ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಾ ಬಂದಿದ್ದು, ಕರ್ನಾಟಕದ ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಆರ್‌ಸಿಬಿ ಟ್ರೋಫಿ ಜಯಿಸಬೇಕಾದರೆ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಸರ್ಕಾರವು ತಂಡದ ಮಾಲೀಕರಿಗೆ ಸೂಚಿಸಿದ್ದಾರೆ.

ಆರ್‌ಸಿಬಿಗೆ ಮರಳುತ್ತಾರಾ ಕೆ.ಎಲ್‌.ರಾಹುಲ್?
2013 ರಿಂದ 2016ರವರೆಗೂ ತವರು ತಂಡದ ಪರ ಆಡಿದ್ದ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರು ನಂತರ ಬೇರೆ ಫ್ರಾಂಚೈಸಿಗಳಲ್ಲಿ ಪರ ಆಡಿದ್ದು 2022 ರಿಂದ 2024ರವರೆಗೆ ಲಖನೌ ಸೂಪರ್‌ ಜಯಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ಆದರೆ ಈಗ 2025ರಲ್ಲಿ ರಾಹುಲ್‌ ಅವರು ಆರ್‌ಸಿಬಿ ತಂಡಕ್ಕೆ ಮರಳುವ ಸಾಧ್ಯತೆಗಳಿವೆ ಒಂದು ವೇಳೆ ಹೀಗಾದರೆ ತಂಡಕ್ಕೆ ಸಮರ್ಥ ನಾಯಕ ಹಾಗೂ ಒಬ್ಬ ಅಪ್ಪಟ ಆಟಗಾರ ದೊರೆತು ತಂಡವು ಟ್ರೋಫಿ ಗೆಲ್ಲಲು ಹೆಚ್ಚು ಸಹಕಾರಿ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಬೆಂಗಳೂರು ಟೆಸ್ಟ್‌ನಲ್ಲಿ ರಾಹುಲ್‌ ಅವರು ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದ್ದು ರಾಹುಲ್‌ ಆರ್‌ಸಿಬಿ ಪರ ಆಡುತ್ತಾರಾ? ಇಲ್ಲವಾ? ಎಂಬ ಅನುಮಾನುಗಳು ಮೂಡಿವೆ.

RELATED ARTICLES

Latest News