Tuesday, October 22, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಹಾಸನದಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಬಾಂಗ್ಲಾದೇಶಿಗರ ಬಂಧನ

ಹಾಸನದಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಬಾಂಗ್ಲಾದೇಶಿಗರ ಬಂಧನ

arrest-of-three-bangladeshis-who-were-living-illegally

ಹಾಸನ,ಅ.22- ಅಕ್ರಮವಾಗಿ ನಗರದಲ್ಲಿ ವಾಸವಾಗಿದ್ದ ಮೂವರು ಬಾಂಗ್ಲಾದೇಶಿಗರನ್ನುಪೊಲೀಸರು ಬಂಧಿಸಿದ್ದಾರೆ. ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಬಂಧಿತ ಆರೋಪಿಗಳಾಗಿದ್ದು,ಇವರ ಬಳಿ ನಕಲಿ ಆಧಾರ್ ಕಾರ್ಡ್ ಮತ್ತಿತರ ವಸ್ತು ವಶಪಡಿಸಿಕೊಳ್ಳಲಾಗಿದೆ.

ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬುವವರ ಮನೆಯಲ್ಲಿ ವರು ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಜುಬೇರ್ ಮನೆ ಕಟ್ಟಡ ನಿರ್ಮಾಣದ ಕಾಮಗಾರಿ ಕೆಲಸ ಮಾಡುತ್ತಿದ್ದ ಅವರ ಬಳಿ ಇವರು ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿ ನಂತರ ಇಲ್ಲಿಗೆ ಬಂದಿದ್ದಾರೆ ಎಂದು ಗೊತ್ತಾಗಿದೆ.

ಪಶ್ಚಿಮಬಂಗಾಳದ ವಿಳಾಸವಿರುವ ಆಧಾರ್‌ಕಾರ್ಡ್ ಹೊಂದಿರುವ ಮೂವರು ಬಾಂಗ್ಲಾ ಪ್ರಜೆಗನ್ನು ಈಗ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.ನ್ ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES

Latest News