ಶ್ರೀನಗರ, ಅ.22– ಕಾಶೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ ಎಂದು ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ. ಜಮು ಮತ್ತು ಕಾಶೀರದ ಗಂದರ್ಬಾಲ್ನ ಗಗಾಂಗೀರ್ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ಪಾಕಿಸ್ತಾನವು ಭಾರತದ ಸ್ನೇಹ ಬಯಸಿದರೆ ಈ ಉಗ್ರ ಕತ್ಯಗಳನ್ನು ನಿಲ್ಲಿಸಬೇಕು, ಜಮುವನ್ನು ಪಾಕಿಸ್ತಾನವಾಗಲು ನಾವು ಎಂದಿಗೂ ಬಿಡು ವುದಿಲ್ಲ ಎಂದು ಗುಡುಗಿದ್ದಾರೆ.
ಜಮು ಮತ್ತು ಕಾಶೀರದ ಗಂದರ್ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಸ್ಥಳದಲ್ಲಿ ನಿನ್ನೆ ಸಂಜೆ ಭಯೋತ್ಪಾದಕರ ದಾಳಿ ನಡೆದಿದ್ದು, ವೈದ್ಯರು ಮತ್ತು ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ದಾಳಿಯ ಕುರಿತು ಜಮು ಮತ್ತು ಕಾಶೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು, ಪಾಕಿಸ್ತಾನವು ಜಮು ಮತ್ತು ಕಾಶೀರದ ಶಾಂತಿ, ನೆಮದಿ ಮತ್ತು ಸಮದ್ಧಿಯನ್ನು ಕದಡಲು ಪದೇ ಪದೇ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಮ ಸೈನಿಕರು ಪಾಕಿಸ್ತಾನದ ಪ್ರತಿಯೊಂದು ಪಿತೂರಿ ಮತ್ತು ಪ್ರತಿ ಭಯೋತ್ಪಾದಕ ಘಟನೆಯನ್ನು ವಿಫಲಗೊಳಿಸುತ್ತಾರೆ. ಅಪರಾಧ ಮಾಡಿದವರಿಗೆ ಅವರ ಅಪರಾಧಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗುತ್ತದೆ ಎಂದಿದ್ದಾರೆ. ಈ ದಾಳಿ ನಡೆದ ರೀತಿ ಆತಂಕಕಾರಿಯಾಗಿದೆ ಎಂದರು. ಈ ಬಗ್ಗೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.
ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಇಂತಹ ಘಟನೆಗಳು ಮತ್ತೆ ಆರಂಭವಾಗಿವೆ ಎಂದಿದ್ದಾರೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.