Sunday, November 24, 2024
Homeಬೆಂಗಳೂರು'ಹಜಾಮ' ಪದಬಳಕೆ : ಬೆಂಗಳೂರು ವಿವಿ ಕನ್ನಡ ಪಠ್ಯದಲ್ಲಿ ಸವಿತಾ ಸಮಾಜಕ್ಕೆ ಅವಮಾನ

‘ಹಜಾಮ’ ಪದಬಳಕೆ : ಬೆಂಗಳೂರು ವಿವಿ ಕನ್ನಡ ಪಠ್ಯದಲ್ಲಿ ಸವಿತಾ ಸಮಾಜಕ್ಕೆ ಅವಮಾನ

Bangalore University insult Savita Samaj in Kannada Syllabus

ಬೆಂಗಳೂರು, ಅ.23- ಬೆಂಗಳೂರು ವಿಶ್ವವಿದ್ಯಾಲಯದ ಬಿಡಿಎ, ಬಿಸಿಎ ಸೇರಿದಂತೆ ವಿವಿಧ ಕೋರ್ಸ್ ಗಳ ಮೊದಲನೇ ಕನ್ನಡ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ಪುಸ್ತಕದ ಕುರುಡು ಕಾಂಚಾಣ ಪಠ್ಯದಲ್ಲಿ ಸವಿತ ಸಮಾಜದವರನ್ನು ಹಜಾಮ ಎಂಬ ಪದವನ್ನು ಅನೇಕ ಬಾರೀ ಬಳಸುವ ಮೂಲಕ ಅವಮಾನಿಸಿದ್ದು, ಕುಲಪತಿಗಳು, ಕುಲಸಚಿವ ಮತ್ತು ಪಠ್ಯ ಪುಸಕದ ಅಧ್ಯಯನ ಸಮಿತಿಯನ್ನು ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷ ಮಾವಳ್ಳಿ ಕೃಷ್ಣ, ರಾಜ್ಯ ಸರ್ಕಾರ ಕ್ಷೌರಿಕ ಎಂಬ ಪದವನ್ನು ತಗೆದು ಹಾಕಿದ್ದರೂ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ಸಮಿತಿ ಉದ್ದೇಶಪೂರ್ವಕವಾಗಿ ನಮ ಸಮಾಜಕ್ಕೆ ಅವಮಾನ ಮಾಡಲು ನಮ ಸಮಾಜದ ನಿಷೇದಿತ ಪದವನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿರುವುದು ಸರ್ಕಾರದ ಆದೇಶ ಉಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತಂತೆ ಕಳೆದ 19ರಂದು ಹಲಸೂರು ಪೋಲಿಸ್ ಠಾಣೆಗೆ ದೂರು ನೀಡಿದ್ದೇವೆ, ಕೂಡಲೇ ಪುಸ್ತಕ ಬಿಡುಗಡೆಗೊಳಿಸಲು ಕಾರಣರಾದ ಕುಲಪತಿಗಳು, ಕುಲಸಚಿವರು ಪ್ರಧಾನ ಸಂಪಾದಕರುಗಳ ಮೇಲೆ ಕ್ರಮ ಕೈಗೊಳ್ಳಲು ದೂರಿನಲ್ಲಿ ತಿಳಿಸಿದ್ದೇವೆ. ಕೂಡಲೇ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜು ಜಾತಿ ನಿಯಂತ್ರಣ ಕಾಯ್ದೆಯಡಿ ಸವಿತಾ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು  ಒತ್ತಾಯಿಸಿದರು.

RELATED ARTICLES

Latest News