Monday, December 2, 2024
Homeಬೆಂಗಳೂರುಮದ್ಯಕ್ಕಾಗಿ ಪೀಡಿಸಿದ ವ್ಯಕ್ತಿ ಕೊಲೆ

ಮದ್ಯಕ್ಕಾಗಿ ಪೀಡಿಸಿದ ವ್ಯಕ್ತಿ ಕೊಲೆ

A man who was tortured for alcohol was killed.

ಬೆಂಗಳೂರು, ಅ.23- ಚಾಕುವಿನಿಂದ ಅಪರಿಚಿತ ವ್ಯಕ್ತಿಯ ಕುತ್ತಿಗೆಗೆ ಇರಿದು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಸುಮಾರು 35ರಿಂದ 40 ವರ್ಷದಂತೆ ಕಾಣುವ ಈ ಅಪರಿಚಿತ ವ್ಯಕ್ತಿಯ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ. ಮೋದಿ ಜಂಕ್ಷನ್ನ ಬಳಿ ಇರುವ ಬಾರ್ ಮುಂದೆ ಈ ವ್ಯಕ್ತಿ ನಿನ್ನೆ ರಾತ್ರಿ ಬಾರ್ಗೆ ಬರುವವರ ಬಳಿ ಎಣ್ಣೆ ಕೊಡಿಸುವಂತೆ ಪೀಡಿಸುತ್ತಿದ್ದನು.

ಬೆಳಗಾಗುವಷ್ಟರಲ್ಲಿ ಈ ವ್ಯಕ್ತಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಮಹಾವೀರ ಹಾರ್ಡ್ವೇರ್ ಅಂಗಡಿ ಮುಂಭಾಗ ಕೊಲೆ ಮಾಡಿ ಪರಾರಿಯಾಗಿದ್ದಾರೆ..

ಸುದ್ದಿ ತಿಳಿದು ಬಸವೇಶ್ವರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ

RELATED ARTICLES

Latest News