Friday, October 25, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2024)

Today's Horoscope

ನಿತ್ಯ ನೀತಿ : ನಿಯತ್ತು ಅನ್ನೋದು ಸೋಲುತ್ತ ಬಂದ ಹಾಗೆ… ಸಂಬಂಧಗಳು ಸಾಯುತ್ತ ಹೋಗುತ್ತವೆ…

ಶುಕ್ರವಾರ ಪಂಚಾಂಗ :25-10-2024
ಕ್ರೋಧಿನಾಮ ಸಂವತ್ಸರ \ ದಕ್ಷಿಣಾಯಣ \ ಶರದ್ ಋತು \ ಆಶ್ವಯುಜ ಮಾಸ \ ಕೃಷ್ಣ ಪಕ್ಷ
ತಿಥಿ: ನವಮಿ \ ನಕ್ಷತ್ರ: ಪುಷ್ಯ \ ಯೋಗ: ಶುಭ \ ಕರಣ: ತೈತಿಲ

ಸೂರ್ಯೋದಯ : ಬೆ.06.12
ಸೂರ್ಯಾಸ್ತ : 05.55
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ಮೇಷ: ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವರಿಗೆ ನಿರೀಕ್ಷಿತ ಲಾಭ ದೊರೆಯುವ ಸಾಧ್ಯತೆಯಿದೆ.
ವೃಷಭ: ಕಚೇರಿಯಲ್ಲಿ ಕೆಲವು ಹೊಸ ಮತ್ತು ಪ್ರಮುಖ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ.
ಮಿಥುನ: ಹಣದ ಕೊರತೆ ದೂರವಾಗುತ್ತದೆ ಮತ್ತು ನಿಮ್ಮ ಎಲ್ಲಾ ಚಿಂತೆ, ತೊಂದರೆಗಳು ಸಹ ಕೊನೆಗೊಳ್ಳುತ್ತವೆ.

ಕಟಕ: ಶಿಕ್ಷಣ ಕ್ಷೇತ್ರ ದಲ್ಲಿ ಮಕ್ಕಳ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ತುಂಬಾ ಸಂತೋಷವಾಗಿರುತ್ತೀರಿ.
ಸಿಂಹ: ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯ ಬಹುದು. ಆದಾಯದಲ್ಲಿ ಹೆಚ್ಚಳ ವಾಗುವ ಲಕ್ಷಣಗಳಿವೆ. ಚಿಂತಿಸುವ ಅಗತ್ಯವಿಲ್ಲ.
ಕನ್ಯಾ: ಕೌಟುಂಬಿಕ ಜೀವನ ಸುಖಮಯವಾಗಿರು ತ್ತದೆ. ನೀವು ಮಾಡುವ ಕೆಲಸ-ಕಾರ್ಯಗಳಿಗೆ ಮನೆಯ ಸದಸ್ಯರ ಬೆಂಬಲ ದೊರೆಯಲಿದೆ.

ತುಲಾ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಶ್ಚಿಕ: ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸದಿರುವುದು ಉತ್ತಮ.
ಧನುಸ್ಸು: ಮನೆಯ ಜವಾಬ್ದಾರಿಗಳನ್ನು ಪೂರೈಸು ವಲ್ಲಿ ಪ್ರೀತಿಪಾತ್ರರ ಬೆಂಬಲ ಪಡೆಯುತ್ತೀರಿ.

ಮಕರ: ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ದೂರ ಪ್ರಯಾಣ ಮಾಡದಿರಿ.
ಕುಂಭ: ವ್ಯಾಪಾರಕ್ಕೆ ಸಂಬಂಧಿಸಿದ ಜನರ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಉತ್ತಮ ದಿನ.
ಮೀನ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.

RELATED ARTICLES

Latest News