ಕೊರಟಗೆರೆ, ಅ.25– ಕೊಟ್ಟೋನು ಕೋಡಂಗಿ- ಇಸ್ಕೊಂಡವ ವೀರಭದ್ರ ಎಂಬ ಗಾದೆ ಮಾತಿನಂತೆ ಇಲ್ಲೊಬ್ಬ ಮಹಿಳೆ ಊರಿನ ಹಲವು ಮಹಿಳೆಯರನ್ನ ನಂಬಿಸಿ ಮೈಕ್ರೋ ಫೈನಾನ್ಸ್ ನಲ್ಲಿ ಅವರ ದಾಖಲೆಗಳು ಇಟ್ಟು ಸರಿಸುಮಾರು 35 ಲಕ್ಷಕ್ಕೂ ಹೆಚ್ಚು ಹಣ ಪಡೆದು ಊರು ಬಿಟ್ಟು ಪರಾರಿಯಾಗಿರುವ ಘಟನೆಯೊಂದು ತಾಲೂಕಿನಲ್ಲಿ ಜರುಗಿದೆ.
ತಾಲೂಕಿನ ವಡ್ಡಗೆರೆ ಗ್ರಾಮದ ಮಂಜುನಾಥ್ ಎಂಬುವರ ಮಡದಿ ದ್ರಾಕ್ಷಾಯಿಣಿ ಗ್ರಾಮದ ಕೆಲವು ಮಹಿಳೆಯರನ್ನು ನಂಬಿಸಿ ಮೈಕ್ರೋ ಫೈನಾನ್ಸ್ ನಿಂದ ಅವರಿಗೆ ದುಡ್ಡು ಕೊಡಿಸಿದಂತೆ ಅವರ ನಂಬಿಕೆ ಗಳಿಸಿ ನಂತರ ಅವರಿಂದ ಸರಿ ಸುಮಾರು 35 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡು ಊರು ಬಿಟ್ಟು ಪರಾರಿಯಾಗಿದ್ದಾಳೆ.
ಹಣ ನೀಡಿದ ಮಹಿಳೆಯರಿಗೆ ತಲೆ ನೋವಾಗಿ ಪರಿಣಮಿಸಿದ್ದು, ದಿಕ್ಕು ಕಾಣದೆ ದಂಗುಬಡಿದವರಂತೆ ಮಂಕಾಗಿದ್ದಾರೆ.ಕೊರಟಗೆರೆ ತಾಲೂಕಿನ ಹಲವು ಮೈಕ್ರೋ ಫೈನಾನ್ಸ್ ಗಳಲ್ಲಿ ವಡ್ಡಗೆರೆ ಗ್ರಾಮದ ಹಲವು ಮಹಿಳೆಯರಿಗೆ ಸೇರಿದ ದಾಖಲಾತಿಗಳನ್ನು ನೀಡಿ 50 ಸಾವಿರ, 60 ಸಾವಿರ, 1 ಲಕ್ಷ ಹೀಗೆ ಹಲವು ಮಹಿಳೆಯರಿಗೆ ಲೋನ್ ಕೊಡಿಸಿ ಕೊಟ್ಟ ಲೋನ್‌ನಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತವನ್ನ ವಾಪಸ್ ಪಡೆದು ನೀವು ಮೊದಲು ಕಂತುಗಳನ್ನು ಕಟ್ಟಿ, ಆನಂತರ ನಾನು ನಿಮ ಕಂತುಗಳನ್ನ ಕಟ್ಟುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಾ ಹಣ ಕೊಟ್ಟಿದ್ದ ಮಹಿಳೆ ವಿರುದ್ಧವೇ ಕಿತ್ತಾಡಿಕೊಳ್ಳುತ್ತಿದ್ದ ದ್ರಾಕ್ಷಾಯಿಣಿ ಇದ್ದಕ್ಕಿದ್ದಂತೆ ಊರು ತೊರೆದು ಬೇರೆಡೆ ದೊಡ್ಡಬಳ್ಳಾಪುರ ಭಾಗದಲ್ಲಿ ಮನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದ್ರಾಕ್ಷಾಯಿಣಿ ಮಾತನ್ನು ನಂಬಿ ಮೋಸ ಹೋದ ಮಹಿಳೆಯರಿಗೆ ದಿಕ್ಕು ಕಾಣದಂತಾಗಿದ್ದು, ಮೈಕ್ರೋ ಫೈನಾನ್‌್ಸನವರಿಗೆ ಹಣ ಕಟ್ಟಲಾಗದೆ ಈ ಕಡೆ ಹಣ ಪಡೆದ ಮಹಿಳೆ ಕೈಗೆ ಸಿಗದೇ ಇರುವುದು ಮಹಿಳೆಯರಿಗೆ ದೊಡ್ಡ ತಲೆನೋವುವಾಗಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ವಡ್ಡಗೆರೆ ಗ್ರಾಮದ ಹಲವು ಮಹಿಳೆಯರು ಮನೆಯ ಯಜಮಾನರಿಗೆ ತಿಳಿದಂತೆ ಹಾಗೂ ತಿಳಿಯದಂತೆ ಒಂದಷ್ಟು ಜನ ಮೈಕ್ರೋ ಫೈನಾನ್‌್ಸ ಸಂಸ್ಥೆಯಲ್ಲಿ ಹಣ ಪಡೆದು ಸಣ್ಣಪುಟ್ಟ ಒಡವೆ ವಸ್ತ್ರ ತೆಗೆದುಕೊಳ್ಳುವ ಆಸೆಯಲ್ಲಿ ಹಲವಾರು ಕಂತು ಕಟ್ಟುವ ಸಂದರ್ಭದಲ್ಲಿ ಅರ್ಧ ಹಣ ಪಡೆದ ಕೆಲವು ಮಹಿಳೆಯರಿಂದ ಪೂರಾ ಹಣ ಪಡೆದ ಇನ್ನೂ ಕೆಲವು ಮಹಿಳೆಯರಿಂದ ಸಾಲ ಪಡೆದು ಕಂಗಾಲಾಗಿದ್ದಾರೆ.
ವಂಚಕಿ ದ್ರಾಕ್ಷಾಯಿಣಿ ಕೆಲವು ದಿನಗಳ ಹಿಂದೆ ರಾತ್ರೋರಾತ್ರಿ ಊರು ಬಿಟ್ಟು ಬೇರೆಡೆ ಸ್ಥಳಾಂತರವಾಗಿರುವುದು ಮಹಿಳೆಯರಿಗೆ ದಿಕ್ಕು ಕಾಣದಂತಾಗಿ, ತಮ ಗಂಡ, ಮಕ್ಕಳಿಂದಲೂ ಚಿಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.
ಒಂದು ಕಡೆ ಕಂತು ಕಟ್ಟಲಾಗದೆ ಈ ಕಡೆ ಮನೆಯಲ್ಲೂ ಇರಲಾಗದೆ ಫೈನಾನ್ಸ್ ನವರು ಕಂತಿನ ಹಣಕ್ಕಾಗಿ ಹುಡುಕಿಕೊಂಡು ಮನೆ ಬಳಿ ಹೋದಾಗ ಸಮಸ್ಯೆಗೆ ಸಿಲುಕಿಕೊಂಡು ನೋವು ಅನುಭವಿಸುವಂತಾಗಿದೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾಮೂಹಿಕವಾಗಿ ಆತ್ಮಹತ್ಯೆಯ ನಿರ್ಧಾರ :
ಗ್ರಾಮದ ಹಲವು ಮಹಿಳೆಯರಿಂದ ಹಣ ಪಡೆದ ಮಹಿಳೆ ಗ್ರಾಮ ತೊರೆದಿದ್ದು, ದಯಮಾಡಿ ನಮಗೆ ನ್ಯಾಯ ಕೊಡಿ ಇಲ್ಲವಾದರೆ ಸಾಮೂಹಿಕವಾಗಿ ಯಾವುದಾದರೂ ನದಿಗೆ ಹಾರಿ ನಾವೆಲ್ಲರೂ ಆತಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮಹಿಳೆಯರು ನೋವು ತೋಡಿಕೊಂಡಿದ್ದಾರೆ.
ಪೊಲೀಸ್ ಠಾಣೆಯ ಮೊರೆ:
ಹಣ ಕಳೆದುಕೊಂಡ ಹತ್ತಾರು ಮಹಿಳೆಯರು ಪೊಲೀಸರ ಮೊರೆ ಹೋಗಿದ್ದಾರೆ. ನಿಷ್ಠಾವಂತ ಪೊಲೀಸ್ ಅಧಿಕಾರಿ ಸಿಪಿಐ ಅನಿಲ್ ಹಾಗೂ ಪಿಎಸ್‌ಐ ಚೇತನ್‌ಗೌಡ ಅವರು ದ್ರಾಕ್ಷಾಯಿಣಿಯನ್ನು ಹುಡುಕಿ ಕರೆತಂದು ನಮ ಹಣ ನಮಗೆ ಕೊಡಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲವಾದರೆ ನಾವು ಹಣ ಕಟ್ಟಲಾಗದೆ ಅನಿವಾರ್ಯವಾಗಿ ಆತಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಗ್ರಾಪಂ ಸದಸ್ಯ ಮುಂದೆ ಅಳಲು:
ಮೈಕ್ರೋ ಫೈನಾನ್ಸ್ ನಿಂದ ಹಣ ಪಡೆದು ಮೋಸಕ್ಕೊಳಗಾದ ಹತ್ತಾರು ಮಹಿಳೆಯರು ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ವಸಂತು ಎಂಬವರ ಬಳಿ ಅಳಲು ತೋಡಿಕೊಂಡು ಅಂಗಲಾಚುತ್ತಿರುವುದನ್ನು ಕಂಡರೆ ಯಾರಿಗಾದರೂ ಮನ ಕರಗುತ್ತದೆ. ಮಹಿಳೆಯರ ಆ ನೋವಿನ ಕಥೆ ನೋಡಿದವರು ಕೇಳಿದವರು ಸಾಲ ಮಾಡಿದರೆ ಇಷ್ಟೊಂದು ಕಷ್ಟನಾ ಅನ್ಸೋದಂತು ಸತ್ಯ..
ಗ್ರಾಮದ ಮಹಿಳೆಯರಾದ ಗೀತಮ, ರಾಜಮ, ನಾಗಲಕ್ಷ್ಮಿ ರತ್ನಮ, ರತ್ನಮ, ನಾಗರತ್ನಮ ಅವರು ಮನೆ ಮಾಲೀಕರಾದ ರಾಜಮನ ಕಡೆಯಿಂದ ಒಂದುವರೆ ಲಕ್ಷ ದುಡ್ಡು ಪಡೆದಿದ್ದು ನಮಗೆ ನ್ಯಾಯ ದೊರಕಿಸಿಕೊಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.