Tuesday, December 3, 2024
Homeಜಿಲ್ಲಾ ಸುದ್ದಿಗಳು | District Newsಸೋರುತ್ತಿದೆ ಗ್ರಂಥಾಲಯ : ದುರಸ್ತಿಗೆ ಓದುಗರ ಆಗ್ರಹ

ಸೋರುತ್ತಿದೆ ಗ್ರಂಥಾಲಯ : ದುರಸ್ತಿಗೆ ಓದುಗರ ಆಗ್ರಹ

leaking library: readers' demand for maintenance

ಕೊರಟಗೆರೆ,ಅ.26- ಪಟ್ಟಣದ ಕೇಂದ್ರ ಗ್ರಂಥಾಲಯ ಸತತ ಮಳೆಯಿಂದ ಸೋರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಉಪಯುಕ್ತವಾಗುವ ಬಹಳಷ್ಟು ಪುಸ್ತಕಗಳು ಮಳೆ ನೀರು ಸೋರಿಕೆಯಿಂದ ಹಾಳಾಗುವ ಆತಂಕ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಸುವ್ಯವಸ್ಥಿತ ಗ್ರಂಥಾಲಯಕ್ಕೆ ಹಲವರು ಒತ್ತಾಯಿಸಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಉಪಯುಕ್ತತೆಗಾಗಿ ತೆರೆಯಲಾದ ಗ್ರಂಥಾಲಯಗಳು ಹಲವಾರು ಸಮಸ್ಯೆಗಳು ಎದುರಾಗಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಶಾಖಾ ಗ್ರಂಥಾಲಯ ಕೊರಟಗೆರೆ ಪಟ್ಟಣದಲ್ಲಿ ಹಲವು ಸಮಸ್ಯೆಗಳಿಂದ ಕೂಡಿದ್ದು, ಗ್ರಂಥಾಲಯ ಬಹಳ ಕಿರಿದಾಗಿದ್ದು, ಗ್ರಂಥಾಲಯಕ್ಕೆ ಬರುವ ಸಂಖ್ಯೆ ಹೆಚ್ಚಾಗಿರುವ ಕಾರಣ ಸಾರ್ವಜನಿಕರು ಬಹಳ ಕಿರಿಕಿರಿ ಅನುಭವಿಸುತ್ತಿದ್ದು, ಗ್ರಂಥಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿದೆ ಜೊತೆಗೆ ಇಲ್ಲಿನ ಸಾರ್ವಜನಿಕರು ಸಂಬಂಧಪಟ್ಟಂತ ಇಲಾಖೆಗಳು ಗಮನ ಆರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊರಟಗೆರೆ ಭಾಗದಲ್ಲಿ ಸುಸಜ್ಜಿತವಾದ ಅತ್ಯುನ್ನತ ತಂತ್ರಜ್ಞಾ ನವುಳ್ಳ ಡಿಜಿಟಲ್ ಗ್ರಂಥಾಲಯದ ಅವಶ್ಯಕತೆ ಇದ್ದು, ಆದರೆ ಬಹಳ ಕಿರಿದಾದ ಚಿಕ್ಕ ಕೊಠಡಿಯಲ್ಲಿ ಗ್ರಂಥಾಲಯ ಬಹಳ ವರ್ಷಗಳಿಂದ ನಡೆಯುತ್ತಿದೆ.

ಮಳೆ ಬಂದು ಕೊಠಡಿ ಸೋರುತ್ತಿರುವುದರಿಂದ ಪುಸ್ತಕ ಇಟ್ಕೋಳೋಕೆ ತುಂಬಾ ಸಮಸ್ಯೆ ಆಗಿದೆ. ಬುಕ್ಕುಗಳಿರು ಸ್ಥಳದಲ್ಲಿ ಮಳೆ ನೀರು ಸೋರಿಕೆಯಿಂದ ನೆಂದು ಹಾಳಾಗುತ್ತಿದ್ದು, ಈ ಗ್ರಂಥಾಲಯದಲ್ಲಿ ಬಹಳಷ್ಟು ನಾವು ಕಿರಿಕಿರಿ ಅನುಭವಿಸುತ್ತಿದ್ದು, ಬೆಳಗ್ಗಿಂದ ಸಂಜೆವರೆಗೂ ನಾವು ಗ್ರಂಥಾಲಯದಲ್ಲಿ ಕೂತು ಕೆಲಸ ಮಾಡುವ ನಮಗೆ ನಮ್ಮ ಬಳಕೆಗೂ ಇಲ್ಲಿ ಶೌಚಾಲಯ ಇಲ್ಲದೆ ಗ್ರಂಥಾಲಯದಲ್ಲಿ ಬಹಳಷ್ಟು ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಎಂದು ಗ್ರಂಥಪಾಲಕಿ ಚೈತ್ರ ನೋವು ತೋಡಿಕೊಂಡಿದ್ದಾರೆ.

ಪ್ರತಿದಿನ ನಾನು ಗ್ರಂಥಾಲಯಕ್ಕೆ ಪತ್ರಿಕೆ ಓದಲು ಬರುತ್ತೇನೆ, ಗ್ರಂಥಾಲಯದಲ್ಲಿ ನಮ್ಮ ತಲೆಯ ಮೇಲೆ ಯಾವಾಗ ಚಾವಣಿ ಕಳಿಸಿ ಬೀಳುತ್ತದೋ ನಮ್ಮ ಪ್ರಾಣ ಯಾವಾಗ ಹೋಗುತ್ತದೆ ಎಂಬ ಆತಂಕದಲ್ಲಿ ಬಂದು ಕೂರುವಂತಾಗಿದೆ ಎಂದು ನಿವೃತ್ತ ಉಪಾಧ್ಯಾಯ ಮಹದೇವ ತಿಳಿಸಿದ್ದಾರೆ.

RELATED ARTICLES

Latest News