ಅಮರಾವತಿ,ಅ.26- ನನ್ನ ಸಹೋದರ ಜಗನ್ ಮೋಹನ್ ರೆಡ್ಡಿ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ನನಗೆ ನೀಡಿಲ್ಲ ಎಂದು ಸಹೋದರಿ ಹಾಗೂ ಕಾಂಗ್ರೆಸ್‌ನ ಅಧ್ಯಕ್ಷೆ ಶರ್ಮಿಳಾ ಆರೋಪಿಸಿದ್ದಾರೆ.
ಜಗನ್ ಆಸ್ತಿಗಳ ಏಕೈಕ ಉತ್ತರಾಧಿಕಾರಿಯಲ್ಲ. ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅವರ ಜೀವಿತಾವಧಿಲಾಗಲಿ ಅಥವಾ ಅವರ ನಿಧನದ ನಂತರ ಯಾವುದೇ ಆಸ್ತಿ ವರ್ಗಾವಣೆ ನಡೆದಿಲ್ಲ. ಕುಟುಂಬದ ಯಾವುದೇ ಆಸ್ತಿಯು ನ್ಯಾಯಸಮ್ಮತವಾಗಿ ತನಗೆ ಸೇರಿಲ್ಲ. ನನ್ನ ಮತ್ತು ನನ್ನ ಮಕ್ಕಳ ಪಾಲಿನ ಒಂದೇ ಒಂದು ಆಸ್ತಿಯನ್ನು ನಾನು ಇನ್ನೂ ಹೊಂದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವನ್ನು ವೈಎಸ್‌ಆರ್‌ಅಭಿಮಾನಿಗಳಿಗೆ ಅವರು ಬರೆದ ಬಹಿರಂಗ ಪತ್ರದಲ್ಲಿ ಆಂಧ್ರದಲ್ಲಿ ಭಾರಿ ಸಂಚಲನ ಸೃಷ್ಠಿಸಿದೆ.ನಮ್ಮ ತಂದೆ ವೈಎಸ್‌ಆರ್ ಅವರ ಆಸ್ತಿ ಅವರ ನಾಲ್ವರು ಮೊಮ್ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯ ಸಮ್ಮತವಾಗಿ ಆ ರೀತಿ ಹಂಚಿಕೆ ಮಾಡುವುದು ಜಗನ್ ಕರ್ತವ್ಯವಾಗಿದೆ ಜಗನ್ ಮೋಹನ್ ರೆಡ್ಡಿ ಒಡೆತನದ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ವಿಚಾರವಾಗಿ ಅವರು ಪತ್ರ ಬಿಡುಗಡೆ ಮಾಡಿದ್ದಾರೆ.
ಸತ್ಯವನ್ನು ಪ್ರಸ್ತುತಪಡಿಸುವುದು ತನ್ನ ಕರ್ತವ್ಯ ಎಂದು ಭಾವಿಸಿ ಪತ್ರ ಬರೆದಿದ್ದೇನೆ. ವೈಎಸ್‌ಆರ್ ಜೀವಿತಾಧಿಯಲ್ಲಿ ಆಸ್ತಿ ಹಂಚಿಕೆಯಾಗಿದೆ ಎಂಬುದು ಸುಳ್ಳು ,ನಾನು ಮತ್ತು ತನ್ನ ತಾಯಿ ಆಸ್ತಿಗಾಗಿ ದುರಾಸೆ ಹೊಂದಿದ್ದಾರೆ ಎಂದು ವೈಎಸ್‌ಆರ್ ಬೆಂಬಲಿಗರನ್ನು ದಾರಿತಪ್ಪಿಸಬೇಡಿ. ನನಗೆ ಆಸ್ತಿಯನ್ನು ನೀಡದಿದ್ದರೂ, ನಾನು ಅದನ್ನು ಎಂದಿಗೂ ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ. ಕಾನೂನಿನ ಬಾಗಿಲನ್ನೂ ತಟ್ಟಿಲ್ಲ. ಪ್ರತಿಕೂಲ ಮತ್ತು ಆರ್ಥಿಕ ತೊಂದರೆಗಳ ನಡುವೆಯೂ ನಾನು ಶ್ರಮಪಟ್ಟಿದ್ದೇನೆ. ಕುಟುಂಬದ ಗೌರವ ಮತ್ತು ವೈಎಸ್‌ಆರ್ ಅವರ ಘನತೆಯನ್ನು ಎತ್ತಿಹಿಡಿಯಿರಿ ಎಂದು ಜಗನ್‌ಗೆ ಎಚ್ಚರಿಸಿದ್ದಾರೆ.