Monday, November 4, 2024
Homeರಾಷ್ಟ್ರೀಯ | Nationalಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಪಟಾಕಿ ವಶ

ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಪಟಾಕಿ ವಶ

Fireworks seized illegally collected at home

ಬಂದಾ (ಯುಪಿ), ಅ. 26- ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಭಾರೀ ಪ್ರಮಾಣದ ಪಟಾಕಿಗಳನ್ನು ಪೊಲೀಸರು ಇಲ್ಲಿ ವಶಪಡಿಸಿಕೊಂಡಿದ್ದಾರೆ.

ಸುಳಿವಿನ ಮೇರೆಗೆ ನಾವು ಕಳೆದ ರಾತ್ರಿ ಜಗದೀಶ್‌ಗಂಜ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ಮಾಡಿ ಪಟಾಕಿಗಳನ್ನು ವಶಪಡಿಸಿಕೊಂಡಿದ್ದೇವೆ ಘಟನೆಗೆ ಸಂಭಂದಿಸಿದಂತೆ ಕುಲದೀಪ್ ಗುಪ್ತಾ ಎಂಬ ಆರೋಪಿಯನ್ನುಬಂಧಿಸಲಾಗಿದೆ ಎಂದು ಚಿತ್ರಕೂಟ ನಗರದ ಸದರ್ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಉಪೇಂದ್ರ ಸಿಂಗ್ ತಿಳಿಸಿದ್ದಾರೆ.

ದೀಪಾವಳಿಗೂ ಮುನ್ನ ಪಟಾಕಿಗಳನ್ನು ಸಂಗ್ರಹಿಸಲು ಪರವಾನಗಿ ಪಡೆದಿರಲಿಲ್ಲ ಮತ್ತು ಮನೆಯ ತುಂಬಾ ಪಟಾಕಿ ರಾಶಿ ತುಂಬಿತ್ತು ಎಂದು ಹೇಳಿದರು.ಸುರಕ್ಷತಾ ದೃಷ್ಠಿಯಿಂದ ಮತ್ತು ಯಾವುದೇ ಅನಾಹುತ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

RELATED ARTICLES

Latest News