Tuesday, December 3, 2024
Homeಜಿಲ್ಲಾ ಸುದ್ದಿಗಳು | District News16.73 ಕೋಟಿ ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣ ಅಭಿವೃದ್ಧಿ : ವಿ.ಸೋಮಣ್ಣ

16.73 ಕೋಟಿ ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣ ಅಭಿವೃದ್ಧಿ : ವಿ.ಸೋಮಣ್ಣ

Development of Gubbi Railway Station at a cost of 16.73 crores - V Somanna

ತುಮಕೂರು,ಅ.27- ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣವನ್ನು 16.73 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.

ಗುಬ್ಬಿ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಬ್ಬಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ. ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣಕ್ಕೆ ಶ್ರೀ ಚನ್ನಬಸವೇಶ್ವರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಚನ್ನಸೆಟ್ಟಿಹಳ್ಳಿ ಬಳಿ ಶಿವಮೊಗ್ಗ-ತುಮಕೂರು ಹೆದ್ದಾರಿಗೆ ಗುಬ್ಬಿಯ ಬಳಿ ನಿರ್ಮಿಸವಾಗುತ್ತಿರುವ ವರ್ತುಲ ರಸ್ತೆ ಕಾಮಗಾರಿ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡದೆ ಇದ್ದ ಕಾರಣ ಅಪೂರ್ಣವಾಗಿತ್ತು. ಖುದ್ದು ರೈತರ ಮನೆಯ ಬಳಿಯೆ ತೆರಳಿದ ಸಚಿವ ಸೋಮಣ್ಣ ರೈತರ ಸಮಸ್ಯೆಗಳನ್ನು ಅಲಿಸಿ ರೈತರಿಗೆ ಕೊಡಬೇಕಾದ 2 ಕೋಟಿ 94 ಲಕ್ಷ ಹಣವನ್ನು ಶೀಘ್ರವೇ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಯ ಬಳಿ ಇರುವ ಉಲ್ಲಾನೇಶ್ವರ ದೇವಸ್ಥಾನವನ್ನು ಸ್ಥಳಾಂತರ ಮಾಡಿ ದೇವಸ್ಥಾನ ಕಟ್ಟಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ಮನವೊಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ರೈಲ್ವೆ ಇಲಾಖೆ ಅಧಿಕಾರಿಗಳು, ಗುಬ್ಬಿ ತಹಶೀಲ್ದರ್ ಆರತಿ, ಮುಖಂಡರು ಸೇರಿದಂತೆ ಮತ್ತಿತರರು ಇದ್ದರು.

RELATED ARTICLES

Latest News