Thursday, November 21, 2024
Homeರಾಜಕೀಯ | Politicsನಿಖಿಲ್ ಸ್ಪರ್ಧೆಯಿಂದ ಕೆಲವರ ಬ್ಯಾಟರಿ ಡೌನ್ ಆಗಿದೆ : ಬಿ.ವೈ ವಿಜಯೇಂದ್ರ

ನಿಖಿಲ್ ಸ್ಪರ್ಧೆಯಿಂದ ಕೆಲವರ ಬ್ಯಾಟರಿ ಡೌನ್ ಆಗಿದೆ : ಬಿ.ವೈ ವಿಜಯೇಂದ್ರ

BY Vijayendra on Channapatna Byelection

ಹಾಸನ, ಅ.30- ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ ಮೇಲೆ ಕೆಲವರ ಬ್ಯಾಟರಿ ಡೌನ್ ಆಗಿದೆ. ಏನ್ ಗೆದ್ದೇ ಬಿಟ್ವಿ ಎನ್ನುವ ಭ್ರಮೆಯಲ್ಲಿದ್ದರು. ವಾಸ್ತವಿಕ ಪರಿಸ್ಥಿತಿ ಈಗ ಅರ್ಥ ಆಗ್ತಿದೆ. ವಾತಾವರಣ ದಿನೇ ದಿನೇ ಎನ್ಡಿಎ ಅಭ್ಯರ್ಥಿ ಪರ ನಿರ್ಮಾಣವಾಗಿದೆ.ನಿಶ್ಚಿತವಾಗಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಹಾಸನಾಂಬ ದರ್ಶನಕ್ಕೆ ತಂದೆ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐತಿಹಾಸಿಕ ಗೆಲುವು ಸಂಡೂರಿನಲ್ಲಿ ಆಗೋದಿದೆ. ಸಂಡೂರಿನಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಅಲ್ಲೂ ಕೂಡ ಬಿಜೆಪಿ ಗೆಲ್ಲುತ್ತೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ಕುಮಾರಸ್ವಾಮಿ , ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಅವರು ಸ್ಪರ್ಧಿಸಿದ್ದು, ಮೂರು ಅಭ್ಯರ್ಥಿಗಳು ಚುನಾವಣೆಯಲ್ಲಿ ಯಶಸ್ಸನ್ನು ಕಾಣ್ತಾರೆ, ದೊಡ್ಡ ಅಂತರದಲ್ಲಿ ಗೆಲ್ತಾರೆ ಎಂದು ಹೇಳಿದರು.

ಇವತ್ತು ಚುನಾವಣೆ ಕಾರ್ಯತಂತ್ರ ಯಾವ ರೀತಿ ರೂಪಿಸಬೇಕು ಎಂದು ಎರಡು ಪಕ್ಷದ ನಾಯಕರುಗಳು ಕುಳಿತು ಚರ್ಚೆ ಮಾಡಿದ್ದೇವೆ. ಆ ದಿಕ್ಕಿನಲ್ಲಿ ಎಲ್ಲವೂ ಕೂಡ ಸುಸೂತ್ರವಾಗಿ ನಡೆಯುತ್ತಿದೆ. ನಮಗೆ ಸಂಪೂರ್ಣ ವಿಶ್ವಾಸವಿದೆ. ಏನೇ ಇರಲಿ ಫಲಿತಾಂಶ ನಮ್ಮ ಪರವಾಗಿ ಬರುತ್ತೆ. ಯಾವುದೇ ರೀತಿಯ ಅನುಮಾನಗಳಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಜಮೀನು ವಕ್ಫ್ ಹೆಸರಿನಲ್ಲಿರುವ ವಿಚಾರವಾಗಿ, ಪಕ್ಷದ ಹಿರಿಯ ಮುಖಂಡರಾಗಿರುವ ಗೋವಿಂದ ಕಾರಜೋಳ ಅವರ ನೇತೃತ್ವದ ಒಂದು ತಂಡ ಬಿಜಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿಯನ್ನ ನೀಡಿದ್ದಾರೆ. ಅಲ್ಲಿಯ ರೈತರನ್ನು, ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದರು.

ಯಾರ್ಯಾರು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡ್ತಾರೆ ಒಬ್ಬೊಬ್ಬರನ್ನೇ ಪಕ್ಷದಿಂದ ಹೊರ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡ್ತಾ ಇದ್ದೇವೆ.ನಮ್ಮ ಪಕ್ಷ ಶುದ್ದೀಕರಣ ಅಗಬೇಕೆಂದು ಅನೇಕ ಹಿರಿಯರ ಆಸೆ ಇತ್ತು.ಅವರ ಆಸೆಗೆ ತಕ್ಕಂತೆ ಶುದ್ದೀಕರಣ ಕೂಡ ಆಗುತ್ತಿದೆ.ಬರುವ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗುತ್ತೆ ಎಂದರು.

ಯತ್ನಾಳ್, ರಮೇಶ್ ಜಾರಕಿಹೋಳಿ ಅಸಮಾಧಾನ ವಿಚಾರವಾಗಿ,ಅವರ ಅಸಮಾಧಾನ ಹೊರಹಾಕಲು ಬೇರೆ ವ್ಯವಸ್ಥೆ ಮಾಡಿಕೊಡಬೇಕು.ಆ ದಿಕ್ಕಿನಲ್ಲಿ ಯೋಚನೆ ಮಾಡ್ತಾ ಇದ್ದೇವೆ. ನಾನಂತೂ ಅದರ ಬಗ್ಗೆ ಏನೂತಲೆಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ. ಪಕ್ಷ ಸಂಘಟನೆ ಕೆಲಸ ಇದೆ, ಉಪಚುನಾವಣೆ ಇದೆ.ಇವತ್ತು ವಕ್‌್ಫ ವಿಚಾರವಾಗಿ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ.ಆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ತೇವೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಪ್ರೀತಂಗೌಡ ಇತರರು ಇದ್ದರು.

RELATED ARTICLES

Latest News