Friday, November 15, 2024
Homeಬೆಂಗಳೂರುಬೆಂಗಳೂರು: ಡಿಜಿಟಲ್ ಅರೆಸ್ಟ್ ಬೆದರಿಕೆ, 10.21 ಲಕ್ಷ ಕಳೆದುಕೊಂಡ ವೃದ್ಧೆ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಬೆದರಿಕೆ, 10.21 ಲಕ್ಷ ಕಳೆದುಕೊಂಡ ವೃದ್ಧೆ

ಬೆಂಗಳೂರು,ನ.4- ಇತ್ತೀಚೆಗೆ ಪ್ರಧಾನಿ ನರೇಂದ್ರಮೋದಿ ಅವರು ಮನ್ ಕೀ ಬಾತ್ನಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆ ಪ್ರಸ್ತಾಪಿಸಿ ಜನ ಜಾಗೃತರಾಗುವಂತೆ ಹೇಳಿದ್ದರೂ ಸಹ ಎಚ್ಚೆತ್ತುಕೊಳ್ಳದೆ ವಂಚನೆಗೆ ಒಳಗಾಗುತ್ತಿದ್ದಾರೆ.
76 ವರ್ಷದ ಮಹಿಳೆಯೊಬ್ಬರು ಇಂತಹ ಮೋಸಕ್ಕೆ ಒಳಗಾಗಿ ಒಟ್ಟು 10.21 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಕನ್ನಿಂಗ್ಹ್ಯಾಮ್ ರಸ್ತೆಯ ಜಿಪಿಒನಲ್ಲಿ ನೆಲೆಸಿರುವ ಈ ಮಹಿಳೆಗೆ ಅ.25ರಂದು ಅಪರಿಚಿತ ವ್ಯಕ್ತಿಯೊಬ್ಬ ವೊಡೊಫೋನ್ನಿಂದ ನಿಮಗೆ ಕರೆ ಮಾಡುತ್ತಿರುವುದಾಗಿ ತಿಳಿಸಿ ನೀವು ಅಪರಾಧ ಮಾಡಿದ್ದೀರಾ, ನಿಮ ಫೋನ್ ಸಂಪರ್ಕವನ್ನು ಕಡಿತ ಮಾಡುವುದಾಗಿ ಹೆದುರಿಸಿ ಸಿಬಿಐ ಮುಂಬೈಗೆ ನಿಮ ಕರೆಯನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾನೆ.

ತದನಂತರದಲ್ಲಿ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಮೊಬೈಲ್ ವಾಟ್ಸಪ್ ಮೂಲಕ ಈ ಮಹಿಳೆಯನ್ನು ಸಂಪರ್ಕಿಸಿ, ನೀವು ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರ. ನಿಮ ಮೇಲೆ ವಾರಂಟ್ ಇದೆ, ನಿಮನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾನೆ. ನಂತರ ತನಿಖೆಗೆ ಸಹಕರಿಸಿದರೆ ನಿಮನ್ನು ಬಂಧಿಸುವುದಿಲ್ಲ. ತನಿಖೆಗಾಗಿ ಹಣವನ್ನು ಡೆಪಾಸಿಟ್ಮಾಡಬೇಕು ಮತ್ತು ವಿಡಿಯೋ ಕರೆಯನ್ನು ಕಡಿತ ಮಾಡದೇ ನಿಮ ಮನೆಯ ರೂಮ್ನಲ್ಲೇ ಇರಬೇಕು. ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಬಾರದೆಂದು ಹೆದರಿಸಿದ್ದಾನೆ.

ಮಹಿಳೆಯು ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯ ಐಸಿಐಸಿಐ ಬ್ಯಾಂಕ್ ಖಾತೆಗೆ 6.80 ಲಕ್ಷ ಹಣವನ್ನು ಹಾಗೂ ಇಂಡಸ್ ಇಂಡ್ ಬ್ಯಾಂಕ್ ಖಾತೆಗೆ 3.41 ಲಕ್ಷ ಹಣವನ್ನು ಆಗಿಂದಾಗ್ಗೆ ವರ್ಗಾಯಿಸಿದ್ದಾರೆ.
ಕೊಟೆಕ್ ಮಹೀಂದ್ರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪರಿಚಿತ ವ್ಯಕ್ತಿ ಮಹಿಳೆಗೆ ನೀಡಿದ್ದು, ಆ ಖಾತೆಗೆ 2 ಲಕ್ಷ ಹಣವನ್ನು ವರ್ಗಾಯಿಸುವಂತೆ ತಿಳಿಸಿದ್ದಾರೆ. ಆದರೆ ಈ ಹಣವನ್ನು ಮಹಿಳೆ ವರ್ಗಾಯಿಸಿಲ್ಲ.

ಈ ಬಗ್ಗೆ ಅನುಮಾನಗೊಂಡು ಆ ಮಹಿಳೆ ಸೆಂಟ್ರಲ್ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಗೆ ಬಂದಿರುವಂತಹ ಕರೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

RELATED ARTICLES

Latest News