Thursday, November 21, 2024
Homeಬೆಂಗಳೂರುಕದ್ದ ವಾಹನ ಬಳಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ಕದ್ದ ವಾಹನ ಬಳಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

Two arrested for robbing houses using stolen vehicles

ಬೆಂಗಳೂರು,ನ.19- ಕಳವು ಮಾಡಿದ ವಾಹನಗಳನ್ನೇ ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಾಪುರ ಠಾಣೆ ಪೊಲೀಸರು ಬಂಧಿಸಿ 41.36 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 2 ಕಾರು ಹಾಗೂ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ದೀಪಕ್ ಅಲಿಯಾಸ್ ದೀಪು ಮತ್ತು ಪವನ್ ಅಲಿಯಾಸ್ ಕಾಟ ಬಂಧಿತ ಆರೋಪಿಗಳು.ದೀಪಕ್ ವಿರುದ್ಧ 37 ಪ್ರಕರಣಗಳು ದಾಖಲಾದರೆ ಪವನ್ ವಿರುದ್ಧ 13 ಪ್ರಕರಣಗಳು ದಾಖಲಾಗಿವೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿರುದ್ಧ 29 ಪ್ರಕರಣಗಳು ದಾಖಲಾಗಿವೆ.

ಈ ಇಬ್ಬರು ಹಳೇ ಆರೋಪಿಗಳಾಗಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಮತ್ತೇ ತಮ ಹಳೇ ಛಾಳಿ ಮುಂದುವರೆಸಿದ್ದರು. ಎಚ್ಎಂಟಿ ಲೇಔಟ್ ನಿವಾಸಿಯೊಬ್ಬರು ತೀರ್ಥ ಯಾತ್ರೆ ನಿಮಿತ್ತ ಗುಜರಾತ್ಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಡೋರ ಲಾಕ್ ಮುರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ , 7 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿ ಕನಕಪುರ ರಸ್ತೆಯ ಹಾರೋಹಳ್ಳಿ ಬಸ್ ನಿಲ್ದಾಣದ ಹತ್ತಿರ ಇಬ್ಬರನ್ನು ಕಾರು ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮನೆ ಹಾಗೂ ವಾಹನ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಯಲಹಂಕ ನ್ಯೂಟೌನ್ನ ಕೆಂಪನಹಳ್ಳಿಯ ಫಿಕಾಕ್ ಗಾರ್ಡನ್ ಬಳಿ ಇರುವ ಖಾಲಿ ಜಾಗದಲ್ಲಿ ಕಾರನ್ನು ನಿಲ್ಲಿಸಿರುವುದಾಗಿ ತಿಳಿಸಿದ ಮೇರೆಗೆ ಆ ಸ್ಥಳದಿಂದ ಕಾರು ಹಾಗೂ ಅದರಲ್ಲಿದ್ದ 12 ಗ್ರಾಂ ಚಿನ್ನಾಭರಣ ಮತ್ತು 3 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ ಹೊಸಕೋಟೆಯಲ್ಲಿ ವಾಸವಿರುವ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣ ಹಾಗೂ ಸೋಲದೇವನಹಳ್ಳಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 6 ದ್ವಿಚಕ್ರ ವಾಹನ ಹಾಗೂ ವಿದ್ಯಾರಣ್ಯಾಪುರದ ದೊಡ್ಡಗೌಡನ ಪಾಳ್ಯದಲ್ಲಿರುವ ಮಹಾಲಕ್ಷ್ಮಿ ಬ್ಯಾಂಕರ್ರಸ ಅಂಗಡಿಯಲ್ಲಿ ಮಾರಾಟ ಮಾಡಿದ್ದ 64 ಗ್ರಾಂ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ ಹೊಸಕೋಟೆಯ ಟ್ರೂ ಗೋಲ್‌್ಡ ಕಂಪನಿಗೆ ಮಾರಾಟ ಮಾಡಿದ್ದ 42 ಗ್ರಾಂ ಆಭರಣ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ ಹಾಗೂ ಅವರ ಪರಿಚಯಸ್ಥರಿಂದ 129 ಗ್ರಾಂ ಆಭರಣ, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರು ದ್ವಿಚಕ್ರ ವಾಹನ, ದೊಡ್ಡಗೌಡನ ಪಾಳ್ಯದಲ್ಲಿರುವ ಮಹಾಲಕ್ಷ್ಮಿ ಬ್ಯಾಂಕರ್ ಅಂಗಡಿಯಲ್ಲಿ ಮಾರಾಟ ಮಾಡಿದ್ದ 44 ಗ್ರಾಂ ಚಿನ್ನಾಭರಣ, ಹೊಸಕೋಟೆಯ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಹೊಸಕೋಟೆಯಲ್ಲಿ ವಾಸವಿರುವ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣವನ್ನು ಆತ ಠಾಣೆಗೆ ತಂದು ಒಪ್ಪಿಸಿದ್ದಾನೆ.

ಒಟ್ಟಾರೆ ಆರೋಪಿಗಳ ಬಂಧನದಿಂದ 7 ಮನೆಗಳ್ಳನ ಪ್ರಕರಣಗಳು, 6 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇನ್ಸ್ಪೆಕ್ಟರ್ ಶಿವಸ್ವಾಮಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

RELATED ARTICLES

Latest News