Friday, November 15, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಿಕ್ಕಮಗಳೂರಿನಲ್ಲಿ ಮತ್ತೆ ನಕ್ಸಲರ ಸದ್ದು, ಪೊಲೀಸರಿಂದ ಕೂಂಬಿಂಗ್‌ ಕಾರ್ಯಾಚರಣೆ

ಚಿಕ್ಕಮಗಳೂರಿನಲ್ಲಿ ಮತ್ತೆ ನಕ್ಸಲರ ಸದ್ದು, ಪೊಲೀಸರಿಂದ ಕೂಂಬಿಂಗ್‌ ಕಾರ್ಯಾಚರಣೆ

Naxals in Chikkamagaluru

ಚಿಕ್ಕಮಗಳೂರು,ನ.12- ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮತ್ತೆ ನಕ್ಸಲರು ಸದ್ದು ಕೇಳಿ ಬಂದಿದ್ದು ನಕ್ಸಲ್‌ ನಿಗ್ರಹ ಪಡೆ (ಎಏನ್‌ಎಫ್‌) ಸಿಬ್ಬಂದಿಗಳು ಕೂಂಬಿಂಗ್‌ ಕಾರ್ಯಚರಣೆ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಜಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಮನೆಗಳಿಗೆ ನಕ್ಸಲರು ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಮತ್ತು ನಕ್ಸಲ್‌ ನಿಗ್ರಹ ಪಡೆಯ ಎಸ್‌‍.ಪಿ.ಜಿತೇಂದ್ರಕುಮಾರ್‌ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌ ಕೂಡ ಶೃಂಗೇರಿಯಲ್ಲಿ ಮುಖ ಮೂಡಿದ್ದಾರೆ.ಕೆಲವು ವರ್ಷಗಳಿಂದ ತಣ್ಣಗೆ ಇದ್ದ ಮಲೆನಾಡಿನಲ್ಲಿ ನಕ್ಸಲ್‌ ಚಟುವಟಿಕೆ ಮತ್ತೆ ಕಾಣಿಸಿಕೊಂಡಿರುವುದು ಸಾರ್ವಜನಿಕಲಿ ಆತಂಕ ಸೃಷ್ಟಿಸಿದ್ದು ಸಾಕೆತ್‌ ರಾಜನ್‌ ಎನ್‌ ಕೌಂಟರ್‌ ಬಳಿಕ ನಕ್ಸಲ್‌ ಚಟುವಟಿಕೆ ಕೊಂಚ ಕಡಿಮೆಯಾಗಿತ್ತು. ಅರಣ್ಯ ಒತ್ತುವರಿ ತೆರುವಿನ ವಿರುದ್ಧ ಜನ ಆಕ್ರೋಷಿತರಾಗಿದ್ದು ಈ ವೇಳೆ ನಕ್ಸಲರು ಕಾಣಿಸಿಕೊಂಡಿರುವುದು ಮಲೆನಾಡಿನಲ್ಲಿ ಆತಂಕ ಹೆಚ್ಚಿದೆ.

ನಕ್ಸಲರು ಬಂದು ಸ್ಥಳೀಯರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿ, ನಾಡ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಲೆನಾಡು ಭಾಗಗಳಲ್ಲಿ ಈಗಾಗಲೇ ಕೋಂಬಿಂಗ್‌ ಕಾರ್ಯಚಣೆ ನಡೆಯುತ್ತಿದ್ದು ಕಾಡಿನಿಂದ ವಾಪಸ್‌‍ ಬಂದ ಬಳಿಕ ಹೆಚ್ಚಿನ ಮಾಹಿತಿ ದೊರಕಲಿದೆ ಎಂದು ಐಜಿಪಿ ಅಮಿತ್‌ ಸಿಂಗ್‌ ತಿಳಿಸಿದ್ದಾರೆ.

RELATED ARTICLES

Latest News