ಕೊಲಂಬೊ, ನ.13– ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನ್ಯಾಯಸಮತ ಮತ್ತು ಪಾರದರ್ಶಕವಾಗಿ ನಾಳೆ ಸಂಸತ್ತಿನ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಸ್ಥಳೀಯ ಕಾಲಮಾನ ಬೆಳಗ್ಗೆ 7 ರಿಂದ ಸಂಜೆ 4 ರವರೆಗೆ ದೇಶಾದ್ಯಂತ 13,314 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮತದಾನ ಕೇಂದ್ರಗಳಿಗೆ ಅಗತ್ಯವಿರುವ ಎಲ್ಲಾ ಮತಪೆಟ್ಟಿಗೆಗಳು ಮತ್ತು ಇತರ ಸಲಕರಣೆಗಳನ್ನು ರವಾಸುವ ಕಾರ್ಯ ನಡೆಯುತಿದೆ ಎಂದು ಚುನಾವಣಾ ಆಯೋಗದ ಮಹಾನಿರ್ದೇಶಕ ಸಮನ್ ಶ್ರೀ ರತ್ನಾಯಕ ತಿಳಿಸಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮತಗಟ್ಟೆ ಅಧಿಕಾರಿಗಳು ತಾಲೀಮು ನಡೆಸಲಿದ್ದಾರೆ. ದೇಶದ 2.10 ಕೋಟಿ ಜನಸಂಖ್ಯೆತಲ್ಲಿ 1.5 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಪ್ರಾತಿನಿಧ್ಯದ ಆಧಾರದ ಮೇಲೆ ಸಂಸತ್ತಿನ 225 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಪಶ್ಚಿಮ ಪ್ರಾಂತ್ಯದ ಜಿಲ್ಲೆ ಗಂಪಹಾ ಸಂಸತ್ತಿನ ಅತ್ಯಧಿಕ ಸಂಖ್ಯೆಯ 19 ಸದಸ್ಯರನ್ನು ಆಯ್ಕೆ ಮಾಡುತ್ತದೆ ಅದೇ ಪ್ರಾಂತ್ಯದಿಂದ ಕೊಲಂಬೊ ರಾಜಧಾನಿ ಜಿಲ್ಲೆಯಲ್ಲಿ 18 ಸಂಸದರನ್ನು ಚುನಾಯಿತರಾಗಿದ್ದಾರೆ. ಪೂರ್ವ ಪ್ರಾಂತ್ಯದ ಟ್ರಿಂಕೋಮಲಿ ಜಿಲ್ಲೆ ಅತ್ಯಂತ ಕಡಿಮೆ ಸಂಖ್ಯೆಯನ್ನು ಆಯ್ಕೆ ಮಾಡುತ್ತದೆ ಅಲ್ಲಿ ಕೇವಲ 4 ಸಂಸತ್ ಸ್ಥಾನವಿದೆ.ಚುನಾವಣೆಯ ಭದ್ರತೆಗಾಗಿ ಸುಮಾರು 90,000 ಪೊಲೀಸ್ ಮತ್ತು ಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಸಂಚಾರಿ ಪೊಲೀಸ್ ಗಸ್ತು ಕೂಡ ಇರಲಿದೆ ಎಂದು ಪೊಲೀಸ್ ವಕ್ತಾರ ನಿಹಾಲ್ ತಲ್ದುವಾ ತಿಳಿಸಿದ್ದಾರೆ.
ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ನೇತೃತ್ವದ ರಾಷ್ಟ್ರೀಯ ಜನತಾ ಶಕ್ತಿಯ ಆಡಳಿತ ಪಕ್ಷಕ್ಕೆ ಇದು ಮೊದಲ ಪ್ರಮುಖ ಅಗ್ನಿ ಪರೀಕ್ಷೆಯಾಗಲಿದೆ. ಕಳೆದ ಸೆ.21ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡಿಸಾನಾಯಕೆ ವಿರುದ್ಧ ಸೋಲು ಕಂಡಿದ್ದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, 1977ರ ನಂತರ ಮೊದಲ ಬಾರಿಗೆ ಸಂಸತ್ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಹಿಂದಿನ ಆಡಳಿತದ ಹಲವಾರು ಸಚಿವರು ಮತ್ತು ಸಂಸದರು ಈ ಬಾರಿ ಹೊರಗುಳಿದಿದ್ದಾರೆ.
22 ಜಿಲ್ಲೆಗಳಿಂದ ಅನುಪಾತದ ಪ್ರಾತಿನಿಧ್ಯದ ಆಧಾರದ ಮೇಲೆ 196 ಸದಸ್ಯರನ್ನು ಚುನಾಯಿಸಲಾಗುವುದು ಮತ್ತು ಐದು ವರ್ಷಗಳ ಅವಧಿಗೆ 225 ಸದಸ್ಯರ ಸಂಸತ್ತನ್ನು ಒದಗಿಸಲುರಾಷ್ಟ್ರೀಯ ಪಟ್ಟಿಯಿಂದ 29 ಚುನಾಯಿತರಾಗುತ್ತಾರೆ.
ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಗುಂಪುಗಳು ಪ್ರತಿ ಜಿಲ್ಲೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುತ್ತವೆ. ಚಲಾವಣೆಯಾದ ಮತಗಳಿಗೆ ಅನುಗುಣವಾಗಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ವೈಯಕ್ತಿಕ ಸಂಸದರು ತಮ ಪರವಾಗಿ ಚಲಾವಣೆಯಾದ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಆಯ್ಕೆಯಾಗುತ್ತಾರೆ. ಪ್ರತಿಯೊಬ್ಬ ಮತದಾರರು ಮೂರು ವೈಯಕ್ತಿಕ ಆದ್ಯತೆಗಳನ್ನು ಗುರುತಿಸಲು ಅರ್ಹರಾಗಿರುತ್ತಾರೆ.