ಬೆಂಗಳೂರು : ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಭಾನುವಾರ ಭರ್ಜರಿ ಫಿನಾಲೆಯೊಂದಿಗೆ ಅಂತ್ಯಗೊಂಡಿದ್ದು, ಗಿಲ್ಲಿ ನಟರಾಜ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಫಿನಾಲೆಯಲ್ಲಿ ಭಾರೀ ಪೈಪೋಟಿ ನಡೆದಿದ್ದು, ರಕ್ಷಿತಾ ಶೆಟ್ಟಿ ರನ್ನರ್ ಅಪ್, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಕೋಟ್ಯಂತರ ವೀಕ್ಷಕರ ಕುತೂಹಲಕ್ಕೆ ತೆರೆ ಬಿದ್ದಿದ್ದು, ವಿನ್ನರ್ ಗಿಲ್ಲಿಗೆ ಬಿಗ್ ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಉಡುಗೊರೆಯಾಗಿ ನೀಡಲಾಗಿದೆ.
40 ಕೋಟಿಗೂ ಅಧಿಕ ಮತಗಳೊಂದಿಗೆ ಐತಿಹಾಸಿಕ ಗೆಲುವು :
‘ಬಿಗ್ ಬಾಸ್ ಕನ್ನಡ 12’ರಲ್ಲಿ ಒಟ್ಟು 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ಜಯ ಸಾಧಿಸಿದ್ದಾರೆ. ನಟ ಸುದೀಪ್ ಗಿಲ್ಲಿಯ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದರು. ಗಿಲ್ಲಿ ಈ ಸೀಸನ್‌ನಲ್ಲಿ 40 ಕೋಟಿಗೂ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿರುವುದು ಹೊಸ ದಾಖಲೆಯಾಗಿ ಮೂಡಿಬಂದಿದೆ.
ಫಿನಾಲೆಯ ಹೈಲೈಟ್ಸ್
ಫಿನಾಲೆಗೆ ಧನುಷ್, ರಘು, ಕಾವ್ಯ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ಎನ್ನುವ ಆರು ಜನ ಫೈನಲಿಸ್ಟ್‌ಗಳು ಪ್ರವೇಶಿಸಿದ್ದರು.
ಮೊದಲು ಧನುಷ್ ಎಲಿಮಿನೇಟ್ ಆಗಿದ್ದರು ನಂತರ ರಘು ಹೊರಬಿದ್ದರು. ಮೂರನೆಯದಾಗಿ ಕಾವ್ಯ ಎಲಿಮಿನೇಟ್ ಆದರು. ಕೊನೆಗೂ ಗಿಲ್ಲಿ ವಿನ್ನರ್, ರಕ್ಷಿತಾ ರನ್ನರ್ ಅಪ್ ಆಗಿ ಶೋಷಣೆ ಆಯಿತು.
ಸೀಸನ್ 12ಕ್ಕೆ ದಾಖಲೆ ಮಟ್ಟದ ಬೆಂಬಲ
ಈ ಬಾರಿಯ ಸೀಸನ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಹಿಂದಿನ ಎಲ್ಲಾ ಸೀಸನ್‌ಗಳಿಗಿಂತಲೂ ಹೆಚ್ಚು ಜನ ಬೆಂಬಲ ದೊರೆತಿದೆ. ಅದರಲ್ಲೂ ಗಿಲ್ಲಿಗೆ ಸಿಕ್ಕ ಬೆಂಬಲ ಇತಿಹಾಸದಲ್ಲೇ ಅಪರೂಪ ಎನ್ನಲಾಗುತ್ತಿದೆ. ಮೊದಲ ದಿನದಿಂದಲೂ ತಾನು ತಾನಾಗಿಯೇ ಇದ್ದ ಗಿಲ್ಲಿ, ತಮ್ಮ ಹಾಸ್ಯ, ಸರಳತೆ ಮತ್ತು ನೈಜತನದಿಂದ ಪ್ರೇಕ್ಷಕರ ಮನ ಗೆದ್ದಿದ್ದರು.
ಗಿಲ್ಲಿಯ ಕಾರಣದಿಂದಲೇ ಈ ಬಾರಿ ಬಿಗ್ ಬಾಸ್ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಕುಟುಂಬ ಸಮೇತವಾಗಿ ಶೋ ವೀಕ್ಷಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಹೊಸ ದಾಖಲೆ, ಹೊಸ ಭರವಸೆ
ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಗಿಲ್ಲಿಯ ಗೆಲುವು ಹೊಸ ಮೈಲಿಗಲ್ಲಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಅವರ ಸಿನಿಮಾ ಹಾಗೂ ಟಿವಿ ಬದುಕಿನ ಮೇಲೆ ಎಲ್ಲರ ಗಮನ ನೆಟ್ಟಿದೆ.
ಭರ್ಜರಿ ಬಹುಮಾನ :
ಗಿಲ್ಲಿ ನಟರಾಜ್ ಈ ಬಾರಿಯ ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿದ್ದು, ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಸೀಸನ್ 12 ಗೆದ್ದ ಗಿಲ್ಲಿಗೆ 50 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಜೊತೆ ಭರ್ಜರಿ ಗಿಫ್ಟ್ ಕೂಡ ಸಿಕ್ಕಿದೆ. ಬಾರಿ ಬಿಗ್‌ಬಾಸ್ 12 ಗೆದ್ದವರಿಗೆ ಕ್ಯಾಶ್ ಪ್ರೈಸ್ ಜೊತೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡ ಉಡುಗೊರೆಯಾಗಿ ನೀಡಲಾಗಿದೆ.
ರನ್ನರ್ ಅಪ್ ಆದಂತ ರಕ್ಷಿತಾಗೆ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ರಕ್ಷಿತಾಗೆ 20 ಲಕ್ಷ ರೂಪಾಯಿ. ಜ್ಯಾರ್ ಆಪ್ ಕಡೆಯಿಂದ 5 ಲಕ್ಷ ರೂಪಾಯಿ ಬಹುಮಾನವಾಗಿ ನೀಡಿದ್ದಾರೆ. ಇದೇ ವೇಳೆ ಮಾತನ್ನಾಡಿದ ರಕ್ಷಿತಾ, ನಂಗೆ ದೊಡ್ಡ ದೊಡ್ಡ ಮಾತನ್ನಾಡುವುದಕ್ಕೆ ಬರುವುದಿಲ್ಲ. ಇಲ್ಲಿಯ ತನಕ ತಂದು ನಿಲ್ಲಿಸಿದ್ದೀರಿ ಅಲ್ವಾ ತಮಬಾ ಥ್ಯಾಂಕ್ಸ್. ಎರಡು ಟ್ರೋಫಿ ಇದ್ರೆ ನಂಗು ಒಂದು ಸಿಕ್ತಾ ಇತ್ತು ಎಂದು ಖುಷಿ ಪಟ್ಟಿದ್ದಾರೆ.
ಎರಡನೇ ರನ್ನರ್ ಅಪ್ ಆದ ಅಶ್ವಿನಿ ಅವರಿಗೆ 14 ಲಕ್ಷ ರೂಪಾಯಿ ಹಾಗೂ ಬಿಗ್‌ಬಾಸ್ ಫಿನಾಲೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಹೊರಗೆ ಹೋದ ಕಾವ್ಯಾ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
ಈ ಸೀಸನ್‌ನಲ್ಲಿ ಒಟ್ಟು 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಂತಿಮವಾಗಿ 6 ಸ್ಪರ್ಧಿಗಳು ಫಿನಾಲೆಗೆ ಬಂದಿದ್ದರು. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಫಿನಾಲೆ ತಲುಪಿದ್ದರು.
