Homeಜಿಲ್ಲಾ ಸುದ್ದಿಗಳುಸ್ವದೇಶದಲ್ಲಿ ರೋಹಿತ್‌, ಕೊಹ್ಲಿಗೆ ಇಂದು ಕೊನೆಯ ಪಂದ್ಯ

ಸ್ವದೇಶದಲ್ಲಿ ರೋಹಿತ್‌, ಕೊಹ್ಲಿಗೆ ಇಂದು ಕೊನೆಯ ಪಂದ್ಯ

Rohit, Kohli to play their last match at home today

ನವದೆಹಲಿ ಜ.18- ಟೀಮ್‌ ಇಂಡಿಯಾದ ದಿಗ್ಗಜರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ಇಂದೋರ್‌ನಲ್ಲಿ ನಡೆಯುತ್ತಿರುವ ಪಂದ್ಯವು 2026ರ ಮೊದಲ ಆರು ತಿಂಗಳುಗಳಲ್ಲಿ ಸ್ವದೇಶದಲ್ಲಿ ಆಡಲಿರುವ ಅಂತಿಮ ಪಂದ್ಯವಾಗಿದೆ.

2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ-20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ನಂತರ ಚುಟುಕು ಕ್ರಿಕೆಟ್‌ ಗೆ ರೋ-ಕೋ ವಿದಾಯ ಹೇಳಿದ್ದರು. ನಂತರ ಟೆಸ್ಟ್‌ ಕ್ರಿಕೆಟ್‌ಗೂ ಈ ಜೋಡಿ ಗುಡ್‌ ಬೈ ಹೇಳಿದೆ.

ರೋ-ಕೊ ಜೋಡಿಯು ಈಗ ಕೇವಲ ಏಕದಿನ ಕ್ರಿಕೆಟ್‌ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಟೀಮ್‌ ಇಂಡಿಯಾ ಯಾವುದೇ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡದಿರುವುದರಿಂದ ದಿಗ್ಗಜರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇಂದೋರ್‌ನಲ್ಲಿಂದು ನಡೆಯಲಿರುವ ಪಂದ್ಯವನ್ನು ನೋಡಲು ಸಾಗರೋಪಾದಿಯಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದಾರೆ.

2026ರ ಜುಲೈನಲ್ಲಿ ಟೀಮ್‌ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ, ಆದರೆ ಈ ಸರಣಿಯು ಇಂಗ್ಲೆಂಡ್‌ನಲ್ಲಿ ಆಯೋಜನೆಗೊಂಡಿದ್ದು, ಸ್ವದೇಶಿ ಅಭಿಮಾನಿಗಳು ರೋ-ಕೊ ಆಟವನ್ನು ಕಣ್ತುಂಬಿಕೊಳ್ಳುವುದು ಸ್ವಲ್ಪ ಕಠಿಣವಾಗಲಿದೆ.
ಆಗಸ್ಟ್‌ ನಂತರ ಬಿಸಿಸಿಐ ಸ್ವದೇಶದಲ್ಲಿ ಏಕದಿನ ಪಂದ್ಯಗಳನ್ನು ಆಯೋಜಿಸಿದರೆ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿರುವ ರೋಹತ್‌ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಆಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲದಿದ್ದರೆ ಈ ದಿಗ್ಗಜರು ಸ್ವದೇಶದಲ್ಲಿ ಆಡುವ ಆಟವನ್ನು ಕಣ್ತುಂಬಿಕೊಳ್ಳಲು 2027ರವರೆಗೂ ಕಾಯಲೇಬೇಕು.

ಕನ್ನಡಿಗ ಪ್ರಸಿದ್ಧ್ ಕೃಷ್ಣ ಔಟ್‌, ಹರ್ಷದೀಪ್‌ ಇನ್‌
ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬದಲಿಗೆ ಅರ್ಷದೀಪ್‌ ಸಿಂಗ್‌ಗೆ ಪ್ಲೇಯಿಂಗ್‌ ಇಲೆವೆನ್‌ ನಲ್ಲಿ ಸ್ಥಾನ ನೀಡಲಾಗಿದೆ ಎಂದು ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ತಿಳಿಸಿದ್ದಾರೆ.

ಟಾಸ್‌‍ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿ ರುವ ನಾಯಕ ಶುಭಮನ್‌ ಗಿಲ್‌, ಸರಣಿ ಗೆಲ್ಲಲು ಇಂದಿನ ಪಂದ್ಯವು ನಿರ್ಣಾಯಕವಾಗಿರುವುದರಿಂದ ಪಂದ್ಯದಲ್ಲಿ ಒಂದು ಪ್ರಮುಖ ಬದಲಾವಣೆಗೆ ನಾವು ಮುಂದಾಗಿ ದ್ದೇವೆ ಎಂದು ಹೇಳಿದರು.

ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಸಂಘಟನೆ ತೋರಿದ್ದ ಪ್ರಸಿದ್‌್ಧ ಕೃಷ್ಣ (2 ವಿಕೆಟ್‌), ಎರಡನೇ ಪಂದ್ಯದಲ್ಲಿ ಅವರು ತಮ ಲಯವನ್ನು ಕಳೆದುಕೊಂಡಿದ್ದರು.ಉತ್ತಮ ಲೈನ್‌ ಆ್ಯಂಡ್‌ ಲೆನ್‌್ತ ನಲ್ಲಿ ಬೌಲ್‌ ಮಾಡದೆ ಇದ್ದಿದ್ದರಿಂದ ತಂಡವು ಬೆಲೆ ತೆರಬೇಕಾಯಿತು. ಆದ್ದರಿಂದ ಹೊಸ ಚೆಂಡಿನಲ್ಲಿ ಪರಿಣಾಮಕಾರಿ ಬೌಲಿಂಗ್‌ ಮಾಡಿ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿರುವ ಅರ್ಷದೀಪ್‌ ಸಿಂಗ್‌ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇನ್ನು ಉಳಿದಂತೆ ಹಿಂದಿನ ಎರಡು ಪಂದ್ಯಗಳಲ್ಲಿ ಆಡಿದ್ದ ತಂಡವನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ.

ಸರಣಿ ಗೆಲ್ಲುತ್ತಾ ಭಾರತ:
ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (93 ರನ್‌) ಹಾಗೂ ಶುಭಮನ್‌ ಗಿಲ್‌ (56ರನ್‌) ಅವರ ಆರ್ಧಶತಕದ ನೆರವಿನಿಂದ 4 ವಿಕೆಟ್‌ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಡೇರಿಲ್‌ ಮಿಚೆಲ್‌ ರ ಆಕರ್ಷಕ ಶತಕ (131 *ರನ್‌)ದ ನೆರವಿನಿಂದ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದ ನ್ಯೂಜಿಲೆಂಡ್‌ 1-1 ರಿಂದ ಸರಣಿ ಸಮಬಲಗೊಳಿಸಿದ್ದು, ಇಂದಿನ ಪಂದ್ಯ ಗೆಲ್ಲುವ ತಂಡವು ಸರಣಿ ಜಯಿಸಲಿದೆ.

RELATED ARTICLES

Latest News