ಅಮ ನಮನ್ನು ಬಹಳ ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ನನ್ನ ಬದುಕಿನ ಮೇಲೆ ಅವರ ಪ್ರೀತಿ ನಡೆನುಡಿ ಅದ್ಭುತ ಪರಿಣಾಮ ಬೀರಿದೆ. ಅವರೊಂದಿಗೆ ಇರುವ ಪ್ರತೀ ಕ್ಷಣವೂ ನನಗೆ ಒಂದಲ್ಲ ಒಂದು ರೀತಿಯಲ್ಲಿ ಏನನ್ನಾದರೂ ಅವರಿಂದ ಕಲಿಯಲು ಅವಕಾಶವಾಗುತ್ತದೆ. ಈಗಲೂ ನಮಗೆ ಬುದ್ದಿ ಹೇಳುವುದನ್ನು ಅವರು ಮರೆಯುವುದಿಲ್ಲ. ಹಸಿದವರಿಗೆ ಅನ್ನವಿಟ್ಟು ತಾವು ಖಾಲಿ ಹೊಟ್ಟೆಯಲ್ಲಿ ಮಲಗಿದ್ದನ್ನು ನಾನೇ ಕಂಡಿದ್ದೇನೆ.
ಅನ್ನದ ಮಹತ್ವದ ಬಗ್ಗೆ ಅವರದ್ದೇ ಆದ ಮಾತುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಬಡವರ ಬಗ್ಗೆ ಅವರು ತೋರುತ್ತಿದ್ದ ಅನುಕಂಪ, ನಾವು ಮರೆಯಲಿಕ್ಕೆ ಸಾಧ್ಯವಿಲ್ಲ. ನಮಗೆ ಸದಾ ಅದನ್ನೇ ಹೇಳುತ್ತಿದ್ದರು. ಬಡವರನ್ನು ಪ್ರೀತಿಸುವುದರಿಂದ ದೇವರಿಗೂ ನಾವು ಪ್ರಿಯರಾಗುತ್ತೇವೆ ಎಂದು ಹೊಳೇನರಸೀಪುರದಲ್ಲಿದ್ದಾಗ ಬಡ ವಿದ್ಯಾರ್ಥಿಗಳಿಗೂ ನಮಮ ವಾರಾನ್ನದ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಅವರಿಗೂ ನಮಂತೆಯೇ ಊಟ ಬಡಿಸಿ ಸಂತೋಷಪಡುತ್ತಿದ್ದರು. ಓದುವ ಮಕ್ಕಳಿಗೆ ಊಟ ಹಾಕಿದರೆ ಪುಣ್ಯ ಬರುತ್ತದೆ ಎಂದು ನಮಗೂ ವಿಷಯ ತಿಳಿಯುವಂತೆ, ನಮ ಗಮನ ಸೆಳೆಯುತ್ತಿದ್ದರು. ಎಂದೂ ವಾರಾನ್ನದ ಮಕ್ಕಳಿಗೆ ಅನ್ನ ನೀಡುವುದನ್ನು ಅಮ ತಪ್ಪಿಸಿರಲಿಲ್ಲ. ಓದುವ ಹುಡುಗರನ್ನು ಕಂಡರೆ ಅವರಿಗೆ ತುಂಬಾ ಇಷ್ಟ ಅವರಿಗೆ ಏನಾದರೂ ಸಹಾಯ ಮಾಡಬೇಕೆಂದು ಯಾವಾಗಲೂ ಹೇಳುತ್ತಿದ್ದರು. ಅವರ ಕೈಲಾದ ಸಹಾಯ ಮಾಡುತ್ತಿದ್ದರು.
ನಾವು ಹೊಳೆನರಸೀಪುರದಲ್ಲಿದ್ದಾಗ ರಾತ್ರಿ ಕೊನೆ ಬಸ್ಸು ಬರುವವರೆಗೆ ಅಮ ಊಟ ಮಾಡುತ್ತಿರಲಿಲ್ಲ. ಕಾರಣ ಯಾರಾದರೂ ಬಂದರೆ ಅವರಿಗೆ ಊಟ ಬಡಿಸಬೇಕು. ನಂತರ ತಾವು ಊಟ ಮಾಡಬೇಕು. ಎಂದೂ ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡಬೇಕೆಂದು ಅಮ ನಮಗೆ ಹೇಳಿಕೊಟ್ಟಿದ್ದಾರೆ. ಹೆಣ್ಣುಮಕ್ಕಳು ಕಷ್ಟ ತೋಡಿಕೊಂಡರೆ ಅಮ ಅವರ ದುಃಖದಲ್ಲಿ ಭಾಗಿಯಾಗಿ ಏನಾದರೂ ಸಹಾಯ ಮಾಡದೆ ಕಳುಹಿಸುತ್ತಿರಲಿಲ್ಲ.
ನಮಮ ಹೇಳಿದ ಒಂದೊಂದು ಮಾತೂ ನನಗೆ ದಾರಿದೀಪ. ನಮಮನ ಶಿಸ್ತನ್ನು ನನಗೂ ಅಳವಡಿಸಿಕೊಳ್ಳಬೇಕೆಂದು ಆಸೆ, ಅದಕ್ಕಾಗಿ ಪ್ರಯತ್ನ ಪಡುತ್ತಿದ್ದೇನೆ. ಅಮ ಹೇಳುವ ಅನೇಕ ವಿಷಯಗಳನ್ನು ಕೃತಿಗಿಳಿಸಲು ನಾನು ನನ್ನ ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ನಮ ತಾಯಿಯ ನಡವಳಿಕೆಗಳೇ ನಮಗೆ ಆದರ್ಶ. ಅವರ ಮಾರ್ಗವೇ ನಮಗೆ ಒಳಿತು. ಎನ್ನುವುದು ನನ್ನ ನಂಬಿಕೆ. ನಮ ಕ್ಷೇತ್ರದಲ್ಲಿ ನಮಮನ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತಾಸೆ ನೀಡಲಾಗುತ್ತಿದೆ.
ಸಾಮಾನ್ಯ ಪರೀಕ್ಷಾ ವ್ಯವಸ್ಥೆಯಲ್ಲಿ ಬಡಮಕ್ಕಳಿಗೆ ಸಹಾಯ ಮಾಡಲು ವ್ಯವಸ್ಥೆಯನ್ನು ರೂಪಿಸಿದ್ದೇನೆ. ನಿರ್ಗತಿಕರಿಗೆ ಅನ್ನ ಹಾಕುವ ಕಾರ್ಯಕ್ರಮ ಹಲವು ಕಡೆಗಳಲ್ಲಿ ನಡೆಸುತ್ತಾ ಇದ್ದೇವೆ. ಸುಮಾರು ಐದು ಸಾವಿರ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಉದ್ಯೋಗದಿಂದ ಆರ್ಥಿಕಸ್ಥಿತಿ ಸುಧಾರಿಸಲು ಶಾಸಕರ ನಿಧಿ ಮೂಲಕ ಉದ್ಯೋಗ ತರಬೇತಿ ನೀಡುತ್ತಿರುವುದು ಕೂಡ ಅಮ ಹಾಕಿಕೊಟ್ಟ ಹಾದಿಯಲ್ಲಿ ಒಂದು ಯತ್ನ .
