ನವದೆಹಲಿ, ನ.28 (ಪಿಟಿಐ) – ಕೇರಳದ ವಯನಾಡ್ನಿಂದ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಲೋಕಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ತಿನಲ್ಲಿ ಕುಟುಂಬದ ಮೂವರು ಸದಸ್ಯರು ಒಟ್ಟಿಗೆ ಸೇರಿರುವ ಅಪರೂಪದ ನಿದರ್ಶನದಲ್ಲಿ ತನ್ನ ತಾಯಿ ಸೋನಿಯಾ ಮತ್ತು ಸಹೋದರ ರಾಹುಲ್ ಅವರ ಸಮುಖದಲ್ಲಿ ಅವರು ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಹಿಂದಿಯಲ್ಲಿ ದಢೀಕರಣವನ್ನು ಪಡೆದರು.
ನಾಂದೇಡ್ ಉಪಚುನಾವಣೆಯಲ್ಲಿ ಗೆದ್ದಿರುವ ರವೀಂದ್ರ ಚವಾಣ್ (ಕಾಂಗ್ರೆಸ್) ಕೂಡ ದೇವರ ಹೆಸರಿನಲ್ಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ಅವರ ತಂದೆ ವಸಂತರಾವ್ ಚವಾಣ್ ಅವರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.
ಪ್ರಿಯಾಂಕಾ ಗಾಂಧಿ 2019 ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು ಮತ್ತು ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ವರ್ಷಗಳ ನಂತರ, ಪ್ರಿಯಾಂಕಾ ಗಾಂಧಿ ಅವರು ಚುನಾಯಿತ ಜನಪ್ರತಿನಿಧಿಯಾಗಿ ತಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.
4.1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಕೇರಳದ ವಯನಾಡ್ನಿಂದ ತಮ ಸಹೋದರ ರಾಹುಲ್ ಗಾಂಧಿ ಅವರಿಗಿಂತ ಹೆಚ್ಚು ಅಂತರದಲ್ಲಿ ಮತ ಪಡೆದು ಗಮನ ಸೆಳೆದಿದ್ದಾರೆ.
ತಮ ಅಜ್ಜಿ ಇಂದಿರಾ ಗಾಂಧಿಯವರ ನೋಟ ಮತ್ತು ಮಾತಿನ ರೀತಿಯಲ್ಲಿ ಹೋಲಿಕೆ ಇರುವ ಪ್ರಿಯಾಂಕಾ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದಲೂ ಮತ್ತು ಅದಕ್ಕೂ ಮೊದಲು ಅವರು ತಮ ತಾಯಿ ಸೋನಿಯಾ ಮತ್ತು ಸಹೋದರ ರಾಹುಲ್ ಅವರ ಪರವಾಗಿ ಪ್ರಚಾರ ಮಾಡುವಾಗಲೂ ಪಕ್ಷದ ಪ್ರಚಾರಕರಾಗಿದ್ದರು. .