Thursday, December 5, 2024
Homeರಾಷ್ಟ್ರೀಯ | Nationalಮಹಿಳೆಯನ್ನು ಕೊಂದು 50 ತುಂಡುಗಳನ್ನಾಗಿ ಕತ್ತರಿಸಿ ಬಿಸಾಡಿದ ಪಾಪಿ

ಮಹಿಳೆಯನ್ನು ಕೊಂದು 50 ತುಂಡುಗಳನ್ನಾಗಿ ಕತ್ತರಿಸಿ ಬಿಸಾಡಿದ ಪಾಪಿ

Jharkhand man kills live-in partner, chops body into 50 pieces; dog finds remains

ರಾಂಚಿ,ನ.28- ಅನ್ಯ ಮಹಿಳೆ ವಿಚಾರದಲ್ಲಿ ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದವಳನ್ನು ವ್ಯಕ್ತಿಯೊಬ್ಬ ಭೀಕರವಾಗಿ ಕೊಲೆ ಮಾಡಿ ದೇಹವನ್ನು 50 ತುಂಡುಗಳನ್ನಾಗಿ ಕತ್ತರಿಸಿ ಹಾಕಿರುವ ಘಟನೆ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯನ್ನು ಕೊಲೆ ಮಾಡಿ ದೇಹವನ್ನು 50 ತುಂಡುಗಳನ್ನಾಗಿ ಮಾಡಿ ಅದನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದ ಪಾಪಿಯನ್ನು ನರೇಶ್‌ ಭೇಂಗ್ರಾನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಹಿಳೆಯನ್ನು ಹತ್ಯೆ ಮಾಡಿ ದೇಹವನ್ನು ಅರಣ್ಯದಲ್ಲಿ ಬಿಸಾಡಿದ್ದ ಆದರೆ ನಾಯಿಗಳು ಮನುಷ್ಯ ದೇಹದ ತುಂಡುಗಳನ್ನು ಎಳೆದಾಡುತ್ತಿರುವುದು ಬೆಳಕಿಗೆ ಬಂದ ನಂತರ ಕೊಲೆ ರಹಸ್ಯ ಬಯಲಾಗಿದೆ.

ಜೋರ್ಡಾಗ್‌ ಗ್ರಾಮದ ಗಂಗಿ ಕುಮಾರಿ ಎಂಬಾಕೆಯೊಂದಿಗೆ ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ ಇದ್ದ ನರೇಶ್‌ ಆಕೆಯೊಂದಿಗೆ ತಮಿಳುನಾಡಿನಲ್ಲಿ ವಾಸಿಸುತ್ತಿದ್ದ ಆದರೆ ಆತ ಕುಂತಿಯಲ್ಲಿ ಬೆರೊಬ್ಬ ಮಹಿಳೆಯೊಂದಿಗೆ ವಿವಾಹವಾಗಿರುವ ವಿಷಯ ತಿಳಿದು ಇಬ್ಬರ ನಡುವೆ ಬಿರುಕು ಮೂಡಿತ್ತು.

ಕೆಲ ದಿನಗಳ ಹಿಂದೆ ಗಂಗಿಯ ಒತ್ತಾಯದ ಮೇರೆಗೆ ದಂಪತಿ ಕುಂತಿಗೆ ಮರಳಿದಾಗ ಕ್ರೂರ ಘಟನೆ ನಡೆದಿದೆ. ಆದರೆ, ಆಕೆ ತನ್ನನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ನಿರಾಕರಿಸಿದರೆ ನೀಡಬೇಕಿದ್ದ ಹಣವನ್ನು ವಾಪಸ್‌‍ ನೀಡುವಂತೆ ಒತ್ತಾಯಿಸಿದ್ದಾಳೆ.

ಭೇಂಗ್ರಾ ತನ್ನ ಮನೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಅವಳನ್ನು ಕರೆದೊಯ್ದು ಅವಳ ದುಪಟ್ಟಾದಿಂದ ಗಂಗಿಯನ್ನು ಕತ್ತು ಹಿಸುಕಿದನು. ನಂತರ ಅವರು ದೇಹವನ್ನು ಸುಮಾರು 50 ತುಂಡುಗಳಾಗಿ ಕತ್ತರಿಸಲು ಮುಂದಾದರು ಮತ್ತು ಕಾಡು ಪ್ರಾಣಿಗಳಿಗೆ ಹಬ್ಬಕ್ಕಾಗಿ ಅವಶೇಷಗಳನ್ನು ಎಸೆದಿದ್ದ.

ನಾಯಿಯೊಂದು ದೇಹದ ಕೆಲವು ಭಾಗಗಳೊಂದಿಗೆ ಕಾಣಿಸಿಕೊಂಡ ನಂತರ ಬಲಿಪಶುವಿನ ಅವಶೇಷಗಳನ್ನು ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸ್‌‍ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

RELATED ARTICLES

Latest News