Saturday, November 30, 2024
Homeರಾಷ್ಟ್ರೀಯ | Nationalತಮಿಳುನಾಡು-ಪುದುಚೇರಿಯಲ್ಲಿ ಅಬ್ಬರಿಸುತ್ತಿದೆ ಫೆಂಗಲ್‌ ಚಂಡಮಾರುತ

ತಮಿಳುನಾಡು-ಪುದುಚೇರಿಯಲ್ಲಿ ಅಬ್ಬರಿಸುತ್ತಿದೆ ಫೆಂಗಲ್‌ ಚಂಡಮಾರುತ

Cyclone Fengal approaches Chennai

ಚನ್ನೈ,ನ.30– ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಫೆಂಗಲ್‌ ನಿಂದ ತಮಿಳುನಾಡು ಕರಾವಳಿಯ ಕಾರೈಕಲ್‌ ಮತ್ತು ಮಹಾಬಲಿಪುರಂ ನಡುವೆ ಗಂಟೆಗೆ ಸುಮಾರು 90 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ಫೆಂಗಾಲ್‌‍ ಚಂಡಮಾರುತವು ವೇಗದಲ್ಲಿ ಪಶ್ಚಿಮ ವಾಯುವ್ಯ ಕಡೆಗೆ ಚಲಿಸಿದ್ದು ಇಂದು ಸಂಜೆ ವೇಳೆಗೆ ಕರಾವಳಿಗೆ ಅಪ್ಪಳಿಸಲಿದೆ.

ಪುದುಚೇರಿಯ ಪೂರ್ವಕ್ಕೆ ಸುಮಾರು 150 ಕಿ.ಮೀ. ಚೆನ್ನೈನಿಂದ ಆಗ್ನೇಯಕ್ಕೆ 140 ಕಿಮೀ, ನಾಗಪಟ್ಟಿಣಂನಿಂದ ಈಶಾನ್ಯಕ್ಕೆ 210 ಕಿಮೀ ಮತ್ತು ಟ್ರಿಂಕೋಮಲಿಯಿಂದ ಉತ್ತರಕ್ಕೆ 400 ಕಿಮೀ ದೂರದಲ್ಲಿ ಸುಮಾರು ಪಶ್ಚಿಮಕ್ಕೆ ಚಲಿಸಿ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯನ್ನು ದಾಟಲು ಕಾರೈಕಾಲ್‌ ಮತ್ತು ಮಹಾಬಲಿಪುರಂ ನಡುವೆ ಪುದುಚೇರಿಗೆ ಸಮೀಪವಿರುವ ಚಂಡಮಾರುತವು ಗಂಟೆಗೆ 70-80 ಕಿಮೀ ವೇಗದಲ್ಲಿ ಬೀಸುತ್ತದೆ.

ಸಂಜೆಯ ಸಮಯದಲ್ಲಿ ಗಂಟೆಗೆ 90 ಕಿಮೀ ವೇಗದಲ್ಲಿ ಬೀಸುತ್ತದೆ.ಇದರಿಂದ ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಯಿದೆ. ತಮಿಳುನಾಡು ಕರಾವಳಿಯಲ್ಲಿ ಅವಾಂತರವನ್ನು ಕಡಿಮೆ ಮಾಡಲು ರಕ್ಷಣಾ ಸಿಬ್ಬಂಧಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಕರಾವಳಿ ಬಳಿ ಯಾರು ಬರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

RELATED ARTICLES

Latest News