Thursday, December 12, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-11-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-11-2024)

Today's Horoscope

ನಿತ್ಯ ನೀತಿ : ನಂಬಿಕೆ ಇರಲಿ ನಾವು ಎಲ್ಲಿಯಾದರೂ ಯಾರಿಗಾದರೂ ಒಳ್ಳೆಯದನ್ನು ಮಾಡುತ್ತಿದ್ದರೆ ನಮಗೂ ಕೂಡ ಎಲ್ಲೋ ಯಾರಿಂದಲೋ ಒಳ್ಳೆಯದಾಗುತ್ತದೆ.

ಪಂಚಾಂಗ : ಶನಿವಾರ, 30-11-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ವಿಶಾಖಾ / ಯೋಗ: ಅತಿಗಂಡ / ಕರಣ: ಚತುಷ್ಪಾದ

ಸೂರ್ಯೋದಯ – ಬೆ.06.26
ಸೂರ್ಯಾಸ್ತ – 05.51
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.
ವೃಷಭ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮಿಥುನ: ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

ಕಟಕ: ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ. ಸಮತೋಲಿತ ರೀತಿಯಲ್ಲಿ ಆಹಾರ ಸೇವಿಸಿ.
ಸಿಂಹ: ಹಿಂಜರಿಕೆ ಮತ್ತು ಭಯದ ಸ್ವಭಾವದಿಂದ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಕನ್ಯಾ: ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಮಾತನಾಡುವ ಮುನ್ನ ಯೋಚಿಸಿ.

ತುಲಾ: ಮಕ್ಕಳ ವಿಷಯ ದಲ್ಲಿ ಹೆಚ್ಚು ಕಾಳಜಿ ವಹಿಸಿ.
ವೃಶ್ಚಿಕ: ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲಧಿ ಕಾರಿಗಳಿಗೆ ಹೆಚ್ಚು ಭರವಸೆ ಮೂಡಲಿದೆ.
ಧನುಸ್ಸು: ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ಕೃಷಿಕರಿಗೆ ಅಲ್ಪ ಪ್ರಮಾಣದ ಲಾಭ ದೊರೆಯಲಿದೆ.

ಮಕರ: ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಉತ್ತಮ ಆದಾಯ ಬರಲಿದೆ.
ಕುಂಭ: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮೀನ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.

RELATED ARTICLES

Latest News