Friday, December 27, 2024
Homeರಾಜ್ಯಬಾಣಂತಿಯರ ಸರಣಿ ಸಾವಿನಿಂದ ಸುದ್ದಿಯಾಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿಗ ಇಲಿ ಜ್ವರ ಪತ್ತೆ

ಬಾಣಂತಿಯರ ಸರಣಿ ಸಾವಿನಿಂದ ಸುದ್ದಿಯಾಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿಗ ಇಲಿ ಜ್ವರ ಪತ್ತೆ

Rat Fever detected in Bellary District Hospital,

ಬಳ್ಳಾರಿ,ನ.30- ಬಾಣಂತಿಯರ ಸರಣಿ ಸಾವಿನ ಘಟನೆಯಿಂದ ಭಾರಿ ಸುದ್ದಿಯಾಗಿದ್ದ ಬಳ್ಳಾರಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಆಸ್ಪತ್ರೆಯಲ್ಲಿ (ಬಿಮ್ಸೌ) ಈಗ ಮೂವರಿಗೆ ಇಲಿ ಜ್ವರ ಪತ್ತೆಯಾಗಿ, ಸದ್ಯ ಚಿಕಿತ್ಸೆ ಪಡೆದು ಇಬ್ಬರು ಡಿಸ್ಚಾರ್ಜ್‌ ಆಗಿದ್ದು, ಓರ್ವ ಬಾಣಂತಿಗೆ ಚಿಕಿತ್ಸೆ ಮುಂದುವರೆದಿದೆ. ಈ ವಿಷಯವನ್ನ ಸ್ವತಹ ಬಿಮ್ಸೌ ನಿರ್ದೇಶಕ ಡಾ.ಗಂಗಾಧರ್‌ ಗೌಡ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಏಳು ಮಂದಿ ಗರ್ಭಿಣಿಯರು ದಾಖಲಾಗಿದ್ದರು. ಏಳೂ ಮಂದಿ ಗರ್ಭಣಿಯರಿಗೆ ನವೆಂಬರ್‌ 9 ರಂದು ಸಿಸೇರಿಯನ್‌ ಮಾಡಲಾಗಿತ್ತು. ಸಿಸೇರಿಯನ್‌ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಆರೋಗ್ಯದಲ್ಲಿನ ಏರುಪೇರಿಂದ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಇಲಿ ಜ್ವರದಿಂದ ಇಬ್ಬರು ಗುಣಮುಖರಾಗಿದ್ದು, ಒಬ್ಬರಿಗೆ ಚಿಕಿತೆಮುಂದೆವರೆದಿದೆ.

ನಾಲ್ವರು ಬಾಣಂತಿಯರ ಸಾವು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ನವೆಂಬರ್‌ 14 ರಂದು ಡಾ.ಸವಿತಾ, ಡಾ. ಬಿ ಬಾಸ್ಕರ್‌, ಡಾ. ಟಿಆರ್‌ ಹರ್ಷಾ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿದೆ.

ಬಳ್ಳಾರಿಗೆ ಬಂದ ತನಿಖಾ ತಂಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಚಿಕಿತ್ಸಾ ವರದಿ ಪಡೆದು ಮೆಡಿಸನ್‌ಗಳ ಸ್ಯಾಂಪಲ್‌ ಲ್ಯಾಬ್‌ಗಳಲ್ಲಿ ಪರಿಶೀಲನೆ ಮಾಡುವ ಮೂಲಕ ಬಾಣಂತಿಯರ ಸಾವಿಗೆ ನಿಜವಾದ ಕಾರಣವನ್ನು ಪತ್ತೆ ಮಾಡಿತ್ತು. ಬಾಣಂತಿಯರ ಸರಣಿ ಸಾವಿಗೆ ಗ್ಲೊಕೋಸ್‌‍ ಸಹಿತ ಇಂಟ್ರಾವೀನಸ್‌‍ (ಐವಿ) ದ್ರಾವಣ ಕಾರಣ ಅನ್ನೊದನ್ನ ಸ್ಪಷ್ಟವಾಗಿ ವರದಿ ನೀಡಿದೆ.

ಸಿಸೇರಿಯನ್‌ ಬಳಿಕ ಇಂಟ್ರಾವೀನಸ್‌‍ ಡ್ರಿಪ್‌್ಸ ಬಾಣಂತಿಯರಿಗೆ ನೀಡಲಾಗಿತ್ತು. ಅದರಿಂದ ಅಡ್ಡ ಪರಿಣಾಮ ಉಂಟಾಗಿ ಬಹು ಅಂಗಾಗಳ ವೈಫಲ್ಯದಿಂದ ಸಾವಾಗಿದೆ ಅಂತ ವರದಿ ನೀಡಲಾಗಿದೆ. ಇಂಟ್ರಾವೀನಸ್‌‍ ಗ್ಲೋಕಸ್‌‍ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು, ರಾಜ್ಯದ ಎಲ್ಲ ಡಿಎಚ್‌ಒಗಳಿಗೆ ಪತ್ರ ಬರೆದಿದೆ. ಪ್ರಸ್ತುತ ಇಂಟ್ರಾವೀನಸ್‌‍ ದ್ರಾವಣವನ್ನು ಸಂಪೂರ್ಣ ಬಳಿಕೆ ನಿಷೇಧ ಮಾಡಲಾಗಿದೆ.

RELATED ARTICLES

Latest News