Thursday, December 5, 2024
Homeಮನರಂಜನೆನೆಲಮಂಗಲದಲ್ಲಿ ನಾಳೆ ಮೇರುನಟಿ ಲೀಲಾವತಿ ಅವರ ಸ್ಮಾರಕ ಉದ್ಘಾಟನೆ

ನೆಲಮಂಗಲದಲ್ಲಿ ನಾಳೆ ಮೇರುನಟಿ ಲೀಲಾವತಿ ಅವರ ಸ್ಮಾರಕ ಉದ್ಘಾಟನೆ

Memorial of legendary actress Leelavathi to be inaugurated tomorrow in Nelamangala

ವರದಿ : ಮಂಜು, ನೆಲಮಂಗಲ.
ಮ.. ಇಡೀ ಸೃಷ್ಟಿಯಲ್ಲಿ ಬೆಲೆ ಕಟ್ಟಲಾಗದ ಸಂಪತ್ತು. ಅಮನಿಗಾಗಿ ಏನು ಮಾಡಿದರೂ ಕಡಿಮೆಯೇ.. ಪ್ರೀತಿ, ಮಮತೆ, ಕರುಣೆಯ, ನಿಸ್ವಾರ್ಥದ ಸಾರ್ಥಕ ಮೂರ್ತಿ ಈ ತಾಯಿ..
ಅಮನನ್ನು ಅವಿಸರಣೀಯ ಮಾಡಲು ಒಬ್ಬೊಬ್ಬರದ್ದು ಒಂದೊಂದು ಪ್ರಯತ್ನ. ಚಂದನವನದ ಮೇರುನಟಿ ಡಾ.ಲೀಲಾವತಿ ಅವರಿಗಾಗಿ ಪ್ರೀತಿಯ ಮಗ ವಿನೋದ್‌ ರಾಜ್‌ ಸಾರಕ ನಿರ್ಮಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಯ ಮುಂಭಾಗ ಈ ಸಾರಕ ತಲೆ ಎತ್ತಿದೆ. ನಾಳೆ(ಡಿ.5) ಲೀಲಾವತಿ ಅವರ ಸಾರಕವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಉದ್ಘಾಟಿಸಲಿದ್ದಾರೆ.ಕಲಾ ಲೋಕದ ಬಹುಮುಖಿ ಪ್ರತಿಭೆ ಲೀಲಾವತಿ ಅವರ ಬದಕು, ಸಾಧನೆಗಳನ್ನು ಈ ಸಾರಕ ಚಿರಸ್ಥಾಯಿ ಮಾಡಲಿದೆ. ಲೀಲಾವತಿ ಅವರೊಂದು ದೈತ್ಯ ಪ್ರತಿಭೆ. ಕಲಾ ಲೋಕದ ಬಹುರೂಪಿ ವ್ಯಕ್ತಿತ್ವ. ಬಣ್ಣದ ಲೋಕವನ್ನು ಆಳಿಹೋದ ಕಲಾ ಮಣಿ.

ಈ ಅಮೂಲ್ಯ ರತ್ನವನ್ನು ಅಮನಾಗಿ ಪಡೆದ ಪುಣ್ಯ ಫಲವನ್ನು ವಿನೋದ್‌ ರಾಜ್‌ ಅವರು ಸಾರಕದ ಮೂಲಕ ಸಮಾಜಕ್ಕೆ ನೀಡುತ್ತಿದ್ದಾರೆ.ತಾಯಿ-ಮಗನ ಸಂಬಂಧಕ್ಕೆ ಸಾಕ್ಷೀ ಭೂತರಾಗಿದ್ದವರು ಲೀಲಾವತಿ ಮತ್ತು ಅವರ ಪುತ್ರ ವಿನೋದ್‌ ರಾಜ್‌.. ಒಬ್ಬರಿಗೊಬ್ಬರು ಸರ್ವಸ್ವ ಎನ್ನುವ ಮಟ್ಟಕ್ಕೆ ಅವರಿಬ್ಬರ ಬಾಂಧವ್ಯ ಬೆಸೆದುಕೊಂಡಿತ್ತು. ಮಾತೃ ಮಮತೆಗೆ ಲೀಲಾವತಿ..ಪುತ್ರ ನಿಷ್ಠೆಗೆ ವಿನೋದ್‌ ರಾಜ್‌ ಮಾದರಿ ಎನಿಸಿ ಬದುಕಿದ್ದವರು.

ಮಗನ ಪಾಲಿಗೆ ಅಮನೇ ಸರ್ವಸ್ವವೂ ಆಗಿದ್ದರು. ವಿನೋದ್‌ ರಾಜ್‌ ಎನ್ನುವ ವ್ಯಕ್ತಿತ್ವಕ್ಕೆ ನೀರೆರೆದವರೂ ಲೀಲಾವತಿ ಅವರೇ. ಈ ಕಾರಣಕ್ಕಾಗಿ ಅಮ ನನ್ನ ಹೃದಯದಲ್ಲಿ ಅಗೋಚರವಾಗಿರಬಾರದು. ಅವರಿಗೊಂದು ಸಾರಕ ನಿರ್ಮಿಸಿ ತಾಯಿ-ಮಗನ ಸಂಬಂಧಕ್ಕೆ ಸಾಕ್ಷೀಕರಿಸಬೇಕು ಎನ್ನುವ ಉದ್ದೇಶದಿಂದಲೇ ವಿನೋದ್‌ ರಾಜ್‌ ತಮ ತೋಟದಲ್ಲಿ ಲೀಲಾವತಿ ಅವರ ಸಾರಕವನ್ನು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಅಲ್ಲಿ ಅಲಂಕರಿಸಲಾಗಿದೆ.ಲೀಲಾವತಿ ಅವರ ಸಮಾಧಿ ಸ್ಥಳದಲ್ಲಿ ಸುಂದರ ಸಾರಕ ನಿರ್ಮಾಣಗೊಂಡಿದೆ. ಸಾದಹಳ್ಳಿ ಶಿಲೆಗಳನ್ನು ಬಳಸಿ ಸಾರಕಕ್ಕೆ ದೇಗುಲ ರೂಪ ನೀಡಲಾಗಿದೆ. ಕನ್ನಡ ಕಲಾಲೋಕಕ್ಕೆ ಲೀಲಾವತಿ ಅವರು ನೀಡಿದ ಕೊಡುಗೆ ಕಡಿಮೆಯಲ್ಲ. ನಟಿಯಾಗಿ ಕಲೆಯನ್ನು ಎಷ್ಟು ಮೇರೆತ್ತರಕ್ಕೆ ಬೆಳೆಸಿದರೋ ಅಷ್ಟೇ ಪ್ರಮಾಣದಲ್ಲಿ ಸಾಮಾಜಿಕ ಸೇವೆಯಲ್ಲೂ ತಾನು ಮಮತಾಮಯಿ ಎನ್ನುವುದನ್ನು ತೋರಿಸಿಕೊಟ್ಟಿದ್ದವರು ಲೀಲಾವತಿ.

ಕೈ ಕೆಸರು ಮಾಡಿಕೊಂಡು ಮಾದರಿ ರೈತ ಮಹಿಳೆಯಾಗಿದ್ದ ಲೀಲಾವತಿ ಅವರು ಎಷ್ಟೋ ರೈತರಿಗೆ ಮಾದರಿ ಎನಿಸಿದ್ದರು. ಸರ್ಕಾರವೂ ನಾಚುವಂತೆ ಆಸ್ಪತ್ರೆಯನ್ನು ನಿರ್ಮಿಸಿ ಬಡಬಗ್ಗರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದ್ದರು. ಅಷ್ಟೇ ಏಕೆ ಸಿನಿಮಾ ರಂಗದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುವಷ್ಟು ಉದಾರ ಮನಸ್ಸೂ ಅವರದ್ದಾಗಿತ್ತು. ಆದರೆ ಯಾವತ್ತೂ ಇದನ್ನು ಪ್ರಚಾರಕ್ಕಾಗಿ ಹೇಳಿಕೊಂಡವರಲ್ಲ. ತನ್ನ ಪಾಡಿಗೆ ತಾನಿದ್ದುಕೊಂಡು ಧರಿತ್ರಿಯಂತೆ ತ್ಯಾಗ ಜೀವನ ನಡೆಸುತ್ತಿದ್ದರು.

ಬದುಕಿನುದ್ದಕ್ಕೂ ಸ್ವಾಭಿಮಾನಕ್ಕೆ ಸಾಕ್ಷಿ ಎನಿಸಿ ಬದುಕಿದ್ದ ಲೀಲಾವತಿಯವರು ಲೀನವಾದ ದಿನದಿಂದಲೂ ಅವರನ್ನು ಚಿರಸರಣೀಯವಾಗಿಸುವ ಪ್ರಯತ್ನ ಆಗಬೇಕು ಎನ್ನುವುದು ಹಲವರ ಹಂಬಲವೂ ಆಗಿತ್ತು. ಅದನ್ನು ಪುತ್ರ ವಿನೋದ್‌ ರಾಜ್‌ ಅವರೇ ಮಾಡಿ ತೋರಿಸಿದ್ದಾರೆ. ಅಮನಿಗೆ ಸಾರಕ ನಿರ್ಮಿಸಿ ಕನ್ನಡ ಸಿನಿಮಾ ಪ್ರೀತಿಸುವವರು ಲೀಲಾವತಿ ಅವರನ್ನು ಕಣ್ತುಂಬಿಕೊಳ್ಳಲು ಒಂದು ಅವಕಾಶ ಮಾಡಿದ್ದಾರೆ.

ಹಸಿದವರಿ ಅನ್ನವಿಟ್ಟ ಕೈ ಲೀಲಾವತಿ ಅವರದ್ದು. ಹೀಗಾಗಿಯೇ ಲೀಲಾವತಿ ಅವರ ಸಮಾಧಿ ಸ್ಥಳ ದರ್ಶನಕ್ಕೆ ದಣಿದು ಬಂದವರು ಹಸಿದು ಹೋಗಬಾರದು ಎಂದು ಉಚಿತ ಅನ್ನದಾಸೋಹ ಕಟ್ಟಡವನ್ನೂ ವಿನೋದ್‌ ರಾಜ್‌ ನಿರ್ಮಿಸಿದ್ದಾರೆ. ಅಲ್ಲಿ ನಿತ್ಯ ದಾಸೋಹ ನಡೆಸಲು ಸುಸಜ್ಜಿತ ಅಡುಗೆ ಕೋಣೆಯಿದೆ.

ನಟಿಯರಿಗೆ ಗೌರವ :
ನಾಳೆ ತನ್ನ ತಾಯಿಯವರ ಸಮಕಾಲೀನ ನಟಿಯರನ್ನು ಕರೆಸಿ ಗೌರವಿಸುವ ಕಾರ್ಯಕ್ರಮವನ್ನೂ ವಿನೋದ್‌ ರಾಜ್‌ ಹಮಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ, ಕನ್ನಡ ಸಿನಿಮಾ ಲೋಕದ ಹಲವು ನಟ-ನಟಿಯರು ಸೇರಿದಂತೆ ಹಲವು ಗಣ್ಯರು ಲೀಲಾವತಿ ಅವರ ಸಾರಕ ಉದ್ಘಾಟನೆಗೆ ಆಗಮಿಸಲಿದ್ದಾರೆ.

ಲೀಲಾವತಿ ಕನ್ನಡ ಕಲಾ ಲೋಕದ ತಪಸ್ವಿ.. ನಿಸ್ವಾರ್ಥ ಸಮಾಜ ಸೇವೆಗೆ ಮೂರ್ತರೂಪ.. ಬಹುತೇಕರಿಗೆ ಬದುಕಿನ ಪಾಠ ಕಲಿಸಿದ ಸ್ವಾಭಿಮಾನಿ.. ಅದಕ್ಕೂ ಮಿಗಿಲಾಗಿ ಅಕ್ಕರೆಯ ಅಮ.. ವಿನೋದ್‌ ರಾಜ್‌ ಅವರಿಗೆ ಮಾತ್ರವಲ್ಲ, ಕನ್ನಡ ಕಲಾಲೋಕದಲ್ಲಿ ಅಂಬೆಗಾಲಿಡುವ ಪ್ರತಿಯೊಬ್ಬ ಕಲಾವಿದರಿಗೂ ತಾಯಿ ಸ್ವರೂಪಿ. ಈ ಕಾರಣಕ್ಕೆ ಅವರಿಗೊಂದು ಸಾರಕ ಬೇಕಿತ್ತು. ವಿನೋದ್‌ ರಾಜ ಈ ಕೆಲಸ ಮಾಡುವ ಮೂಲಕ ತಾಯಿಗೆ ಈ ಜಗತ್ತು ಅದೆಷ್ಟು ವಿಶಿಷ್ಟ ಸ್ಥಾನ ನೀಡಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆಯಾಗಿದ್ದಾರೆ.

RELATED ARTICLES

Latest News