ನೆಲಮಂಗಲ ನಗರಸಭೆ ಅಧ್ಯಕ್ಷರ ರಾಜಕೀಯ ಭವಿಷ್ಯಕ್ಕೆ ಅರ್ಧಚಂದ್ರ

ನೆಲಮಂಗಲ,ಫೆ.3- ಜೆಡಿಎಸ್‍ನಿಂದ ಗೆದ್ದು ಕಾಂಗ್ರೆಸ್ ಸೇರಿರುವ ನಗರಸಭೆಯ ಮಧ್ಯಂತರ ಅಧ್ಯಕ್ಷೆಯಾಗಿರುವ ಲತಾ ಹೇಮಂತ್ ಕುಮಾರ್ ಹಾಗೂ ಇತರ ಕೆಲ ಸದಸ್ಯರ ಸದಸ್ಯತ್ವ ಅತಂತ್ರ ಸ್ಥಿತಿಗೆ ಸಿಲುಕಿದೆ. ಪಕ್ಷ ದ್ರೋಹ ಮಾಡಿದ್ದಕ್ಕಾಗಿ ನಗರಸಭೆಯ ಅಧ್ಯಕ್ಷೆ ಸೇರಿ ಇತತರಿಗೆ ಪಕ್ಷದ ಜಿಲ್ಲಾಧ್ಯಕ್ಷರು ನೋಟಿಸ್ ನೀಡಿದ್ದಾರೆ. ರಾಜಕೀಯವಾಗಿ ಹೈಡ್ರಾಮಾ ಸೃಷ್ಟಿಸಲೆತ್ನಿಸಿದ ಜೆಡಿಎಸ್ ಸದಸ್ಯರಿಗೆ ಈಗ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೊದಲು ಪುರಸಭೆ ಯಾಗಿದ್ದ ನೆಲಮಂಗಲದ 23 ವಾರ್ಡ್‍ಗಳಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಲತಾ ಹೇಮಂತ್ ಕುಮಾರ್, ಆನಂದ್, ಭಾರತಿ ಬಾಯಿ, […]
ಗುತ್ತಿಗೆದಾರರ-ಅಧಿಕಾರಿಗಳ ಒಳ ಒಪ್ಪಂದ, ನೆಲಮಂಗಲ ನಗರಸಭೆ ಲೂಟಿ

ನೆಲಮಂಗಲ,ಜ.31- ಶೇ.40ರಷ್ಟು ಕಮಿಷನ್ ದಂಧೆ ಕುರಿತು ವ್ಯಾಪಕ ಟೀಕೆಗಳು ಕೇಳಿ ಬರುತ್ತಿರುವ ನಡುವೆಯೂ ಇಲ್ಲಿನ ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣವನ್ನು ಎಗ್ಗಿಲ್ಲದೆ ಲೂಟಿ ಹೊಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ದೂರು ನೀಡಿದರೂ ಗುತ್ತಿಗೆ ಅಕ್ರಮಗಳು ನಿಂತಿಲ್ಲ. ದೂರು, ಟೀಕೆ ಮತ್ತು ಆಕ್ಷೇಪಗಳ ನಡುವೆಯೂ ನಿನ್ನೆ ವರ್ಕ್ ಆಡರ್ ನೀಡುವ ಮೂಲಕ ನಗರಸಭೆಯ ಪೌರಾಯುಕ್ತರು ಅಂಧಾ ದರ್ಬಾರ್ ಅನ್ನು ಮುಂದುವರೆಸಿದ್ದಾರೆ. ನಗರಸಭೆಯ ಅತಂತ್ರ ಪರಿಸ್ಥಿತಿಯ […]
ರಾಜಧಾನಿ ಮಾಫಿಯಾ ಗ್ರಾಮಾಂತರಕ್ಕೆ ಶಿಫ್ಟ್ : ಹೆಡೆಮುರಿ ಕಟ್ಟುವರೇ ಅಲೋಕ್..?

ನೆಲಮಂಗಲ,ಜ.19- ಸಿಲಿಕಾನ್ ಸಿಟಿ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಫಿಯಾ ರಾಜಧಾನಿಯಾಗಿ ಬದಲಾಗುತ್ತಿದೆಯೇ? ಹೌದು… ಈ ಭಾಗದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು, ಸ್ಕಿಲ್‍ಗೇಮ್‍ಗಳ ಹಾವಳಿ, ಇಸ್ಟಿಟ್ ಹಾಗೂ ಮಾಂಸದ ದಂಧೆಗಳು ಹಾಗೂ ರೌಡಿಸಂನಿಂದಾಗಿ ಇಂತಹ ಪರಿಸ್ಥಿತಿ ಬಂದೊದಗಿದೆ. ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆಯಲ್ಲಿ ಭೂಮಿ ಬೆಲೆಗೆ ಬೂಮ್ ಬಂದಿರುವುದರಿಂದ ರಿಯಲ್ ಎಸ್ಟೆಟ್ ಜತೆಗೆ ಮಟ್ಕಾ, ಜೂಜು, ಸ್ಕಿಲ್‍ಗೇಮ್‍ಗಳು, ಇಸ್ಟಿಟ್ ಅಡ್ಡೆಗಳು ಹಾಗೂ ಮಸಾಜ್ ಪಾರ್ಲರ್‍ಗಳು ಗ್ರಾಮಾಂತರ ಪ್ರದೇಶಗಳಿಗೆ ಶಿಫ್ಟ್ ಆಗಿವೆ. ಸಮಾಜದ ಕೊಳಕನ್ನು ತೊಳೆದು ಹಾಕಬೇಕಾದ ರಕ್ಷಕರೆ ಪರೋಕ್ಷವಾಗಿ […]
ನೆಲಮಂಗಲ- ದೇವಿಹಳ್ಳಿ ಹೆದ್ದಾರಿ ಪೂರ್ಣ

ನವದೆಹಲಿ,ಜ.1- ನೆಲಮಂಗಲ-ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ-75 ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪ್ರಕಟಿಸಿರುವ ಕೇಂದ್ರ ರಸ್ತೆ ಸಾರಿಗೆ, ಅತ್ಯಾಧುನಿಕ ಬಳಸಿ ನಿರ್ಮಿಸಿರುವ ರಸ್ತೆ ದೀರ್ಘ ಕಾಲ ಬಾಳಿಕೆ ಬರಲಿದೆ ಎಂದಿದ್ದಾರೆ. ಬೆಂಗಳೂರು ಹೊರ ವಲಯದ ನೆಲಮಂಗಲದಿಂದ ಹಾಸನದ ದೇವಿಹಳ್ಳಿ ನಡುವಿನ ರಸ್ತೆ ಚಿತ್ರವನ್ನು ಟ್ವೀಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ರಸ್ತೆ ಮೈಸೂರು, ಸಕಲೇಶಪುರ, ಹಳೆಬೀಡು, ಧರ್ಮಸ್ಥಳ ಸೇರಿ ಹಲವು ಪ್ರವಾಸಿ ತಾಣಗಳನ್ನು ವೇಗವಾಗಿ ತಲುಪಲು ನೆರವಾಗಲಿದೆ. ವಾರಾಂತ್ಯದಲ್ಲಿ ಈ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ 30 ಸಾವಿರ ದಾಟಲಿದೆ ಎಂದು ಹೇಳಿದ್ದಾರೆ. […]
ಮತ್ತೆ ಸದ್ದು ಮಾಡಿದ ಪೊಲೀಸರ ರಿವಾಲ್ವರ್ : ರೌಡಿಗೆ ಗುಂಡೇಟು

ನೆಲಮಂಗಲ, ನ.25- ಪೊಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಕೊಲೆ ಆರೋಪಿಯೂ ಆಗಿರುವ ರೌಡಿ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ.ರಾಜ ರಾಜನ್ ಅಲಿಯಾಸ್ ಸೇಟು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್. ಘಟನೆ ವಿವರ: ದಾಸನಪುರ ಹೋಬಳಿ ಮಾಚೋಹಳ್ಳಿಯ ಗೋಡೌನ್ ಒಂದರ ಬಳಿ ನ.14ರಂದು ನಡೆದ ರೌಡಿ ಶೀಟರ್ ನಟರಾಜ ಅಲಿಯಾಸ್ ಮುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್ ಅಲಿಯಾಸ್ ಮುಳ್ಳು, ಕುಮಾರ್ ಸೇರಿದಂತೆ ಮೂವರು […]
ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

ನೆಲಮಂಗಲ, ನ.23- ಸ್ಥಳ ಮೊಹಜರಿಗೆ ಕರೆದೊಯ್ದ ವೇಳೆ ಇಟ್ಟಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಯೋಗಾನಂದ ಅಲಿಯಾಸ್ ನೈಟ್‍ಶಿಫ್ಟ್ ಯೋಗಿ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರ. ಈತ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣವಲ್ಲದೆ ಬೆಂಗಳೂರು ನಗರದ ಬ್ಯಾಟರಾಯನಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪ್ರಕರಣಗಳು,ತುಮಕೂರಿನ ಕೋರಾ, ಅಮೃತೂರು ಠಾಣೆ, ನೆಲಮಂಗಲ ಗ್ರಾಮಾಂತರ, ಶ್ರೀರಂಗಪಟ್ಟಣ, ಹಿರಿಸಾವೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು […]
ದುಷ್ಕರ್ಮಿಗಳಿಂದ ಮನೆ, ದೇವಾಲಯ ಧ್ವಂಸ

ನೆಲಮಂಗಲ, ನ.13- ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಏಕಾಏಕಿ ಮನೆಯಿಂದ ಹೊರಹಾಕಿ ಮನೆ ಹಾಗೂ ಪಕ್ಕದಲ್ಲಿದ್ದ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಾರನಹಳ್ಳಿಯಲ್ಲಿ ನಡೆದಿದೆ. ಮನೆ ಖಾಲಿ ಮಾಡುವಂತೆ ಲಾಂಗು, ಮಚ್ಚುಗಳಿಂದ ಬೆದರಿಸಿದ ಕೆಲ ದುಷ್ಕರ್ಮಿಗಳು ಜೆಸಿಬಿಗಳ ಮೂಲಕ ಮನೆ ಮತ್ತು ದೇಗುಲವನ್ನು ಕೆಡವಿದ್ದಾರೆ. ಸುಮಾರು 25ಕ್ಕೂ ಹೆಚ್ಚು ದುಷ್ಕರ್ಮಿಗಳು ಮನೆಗೆ ನುಗ್ಗಿ ದಾಂಧಲೆ ಮಾಡಿ ಮನೆಯನ್ನು ಧ್ವಂಸ ಮಾಡುತ್ತಿದ್ದಾಗ ಆಟೋ, ಕಾರು […]