Saturday, April 27, 2024
Homeಜಿಲ್ಲಾ ಸುದ್ದಿಗಳುನೆಲಮಂಗಲ : 199 ಎಲ್‍ಇಡಿ ಟಿವಿಗಳ ವಶ

ನೆಲಮಂಗಲ : 199 ಎಲ್‍ಇಡಿ ಟಿವಿಗಳ ವಶ

ನೆಲಮಂಗಲ, ಮಾ.27- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ 199 ಎಲ್‍ಇಡಿ ಟಿವಿಗಳನ್ನು ಲ್ಯಾಂಕೊ ಟೋಲ್ ಬಳಿ ವಶಪಡಿಸಿಕೊಳ್ಳಲಾಗಿದೆ.

ಕ್ಯಾಂಟರ್ ವಾಹನದಲ್ಲಿ ಬೆಂಗಳೂರಿನಿಂದ ಇಸ್ಲಾಂ ಪುರಕ್ಕೆ 199 ಟಿವಿಗಳನ್ನು ತುಂಬಿಕೊಂಡು ತೆರಳುತ್ತಿದ್ದಾಗ ಟೋಲ್ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತಪಾಸಣೆ ನಡೆಸುವಾಗ ದಾಖಲೆ ಇಲ್ಲದೆ ಟಿವಿಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಇಸ್ಲಾಂ ಪುರ ಗ್ರಾಮದ ಬಾಬಾಜಾನ್ ಎಂಬುವರಿಗೆ ಸೇರಿದ ಟಿವಿಗಳು ಎನ್ನಲಾಗಿದ್ದು, ಇವುಗಳಿಗೆ ಯಾವುದೇ ದಾಖಲೆಗಳು ಇಲ್ಲದೆ ಸಾಗಿಸುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಶ ಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News