Thursday, December 12, 2024
Homeಜಿಲ್ಲಾ ಸುದ್ದಿಗಳು | District Newsಕುಡಿಯಲು ನೀರು ಕೇಳಿ ಮನೆಗೆ ನುಗ್ಗಿ ಗನ್‍ನಿಂದ ಬೆದರಿಸಿ 3 ಲಕ್ಷ ದೋಚಿದ ಖದೀಮರು

ಕುಡಿಯಲು ನೀರು ಕೇಳಿ ಮನೆಗೆ ನುಗ್ಗಿ ಗನ್‍ನಿಂದ ಬೆದರಿಸಿ 3 ಲಕ್ಷ ದೋಚಿದ ಖದೀಮರು

ಕುಣಿಗಲ್,ಮಾ.27- ಕುಡಿಯಲು ನೀರು ಕೇಳಿ ಮನೆಗೆ ನುಗ್ಗಿದ ಚೋರರು ಗನ್‍ನಿಂದ ಬೆದರಿಸಿ ಮೂರು ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಉರ್ಕೆನಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆ ಗ್ರಾಮದ ಗಂಗಣ್ಣ ಎಂಬುವರ ಮನೆಗೆ ಬಂದ ಅಪರಿಚಿತರು ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ ಗಂಗಣ್ಣ ಪತ್ನಿ ನೀರು ತರಲು ಮನೆಯೊಳಗೆ ಹೋದಾಗ ಬ್ಯಾಗ್‍ನಲ್ಲಿಟ್ಟಿದ್ದ 3 ಲಕ್ಷ ಹಣವನ್ನು ದೋಚಲು ಯತ್ನಿಸಿದ್ದಾರೆ.

ಅಲ್ಲೇ ಮಲಗಿದ್ದ ಮನೆಯ ಮಾಲೀಕ ಚೀರಾಡಿ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಬಂದೂಕನ್ನು ಹೊರತೆಗೆದು ಗಲಾಟೆ ಮಾಡಿದರೆ ಶೂಟ್ ಮಾಡುವುದಾಗಿ ಹೆದರಿಸಿ ಹಣದೊಂದಿಗೆ ಓಡಿಹೋಗಲು ಯತ್ನಿಸಿದಾಗ ಮನೆಯ ಮಾಲೀಕ ಬೆನ್ನಟ್ಟಿ ಹಿಡಿಯಲು ಮುಂದಾದಾಗ ಚೋರರು ಗುಂಡು ಹಾರಿಸಿದ್ದು, ಅವರ ಕಾಲಿನ ಬೆರಳಿಗೆ ತಗುಲಿದೆ.

ಕೂಡಲೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕುಣಿಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಚೋರರ ಸೆರೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News