Thursday, June 20, 2024
Homeರಾಜ್ಯಕ್ಯಾಂಟರ್‌ ಹರಿದು ಟೋಲ್‌ ಸಿಬ್ಬಂದಿ ಸಾವು

ಕ್ಯಾಂಟರ್‌ ಹರಿದು ಟೋಲ್‌ ಸಿಬ್ಬಂದಿ ಸಾವು

ನೆಲಮಂಗಲ,ಜೂ.1- ಹಿಟ್‌ ಅಂಡ್‌ ರನ್‌ಗೆ ಟೋಲ್‌ ಕಾರ್ಮಿಕ ಬಲಿಯಾಗಿರುವ ಘಟನೆ ಅರಿಶಿನಕುಂಟೆ ಟೋಲ್‌ ಪ್ಲಾಸಾ ಬಳಿ ಇಂದು ಬೆಳಿಗ್ಗೆ ನಡೆದಿದೆ. ನಾಗರಾಜು (25) ಮೃತಪಟ್ಟ ಸಿಬ್ಬಂದಿ.

ಈತ ನವಯುಗ ಟೋಲ್‌ನಲ್ಲಿ ಆಪರೇಟರ್‌ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕ್ಯಾಂಟರ್‌ ವಾಹನ ಟೋಲ್‌ನಲ್ಲಿ ಮುಂದೆ ಚಲಿಸುತ್ತಿದ್ದ ಎರಡು ವಾಹನಗಳ ಹಿಂದೆಯೇ ತೆರಳುತ್ತಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ನಾಗರಾಜು, ಹಿಂದೆ ಯಾವುದೇ ವಾಹನಗಳು ಇಲ್ಲವೆಂದು ರಸ್ತೆಗೆ ಇಳಿದಾಗ ಕ್ಯಾಂಟರ್‌ ವಾಹನ ಕಾಲಿನ ಮೇಲೆ ಹರಿದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಸುದ್ದಿ ತಿಳಿಯುತ್ತಿದ್ದ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಚಾಲಕನ ಪತ್ತೆಗಾಗಿ ಬಲೆಬೀಸಿದ್ದಾರೆ.

RELATED ARTICLES

Latest News