Thursday, June 20, 2024
Homeರಾಷ್ಟ್ರೀಯಮೋದಿ ಸ್ಪರ್ಧಿಸಿರುವ ವಾರಣಾಸಿ ಸೇರಿ 57 ಕ್ಷೇತ್ರಗಳಲ್ಲಿ ಇಂದು ಅಂತಿಮ ಹಂತದ ಮತದಾನ

ಮೋದಿ ಸ್ಪರ್ಧಿಸಿರುವ ವಾರಣಾಸಿ ಸೇರಿ 57 ಕ್ಷೇತ್ರಗಳಲ್ಲಿ ಇಂದು ಅಂತಿಮ ಹಂತದ ಮತದಾನ

ನವದೆಹಲಿ, ಜೂನ್‌.1-ಇಡೀ ವಿಶ್ವವೇ ಬೆರಗುಕಣ್ಣಿಂದ ನೋಡುತ್ತಿರುವ ಭಾರತದ ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ನಡೆದಿದೆ.ಒ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಸೇರಿದಂತೆ 7 ರಾಜ್ಯಗಳಲ್ಲಿ ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಿಗೆ ಮತದಾನ ಶಂತಿಯುತ ನಡೆಯುತ್ತಿದೆ.

ಹೊಸ ದಾಖಲೆಯಾಗಿ ಸತತ ಮೂರನೇ ಅವಧಿಗೆ ಪ್ರಧಾನಿ ಸ್ಥಾನದಲ್ಲಿ ನರೇಂದ್ರ ಮೋದಿ ಅವರನ್ನು ಅಲಂಕರಿಸಲು ಬಿಜೆಪಿ ಬರ್ಜರಿ ಪ್ರಚಾರ ನಡೆಸಿದರೆ,ಕಾಂಗ್ರೆಸ್‌‍ ಸಾರಥ್ಯದ ಇಂಡಿ ಒಕ್ಕೂಟ ತಡೆ ಒಡ್ಡಲು ಸಾಕಷ್ಟು ತಂತ್ರಗಾರಿಕೆ ನಡೆಸಿದೆ.

ಚಂಡೀಗಢ ಹೊರತುಪಡಿಸಿ ಪಂಜಾಬ್‌ನ ಎಲ್ಲಾ 13 ಮತ್ತು ಹಿಮಾಚಲ ಪ್ರದೇಶದ ನಾಲ್ಕು, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 9,ಬಿಹಾರದ 8, ಒಡಿಶಾದ 6 ಮತ್ತು ಜಾರ್ಖಂಡ್‌ 3 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಡಿಶಾದ ಉಳಿದ 42 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಹಿಮಾಚಲ ಪ್ರದೇಶದ 6 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯೂ ಏಕಕಾಲದಲ್ಲಿ ನಡೆಯುತ್ತಿದೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ದೇಶದ ಹಲವೆಡೆ ತೀವ್ರ ಬಿಸಿಲಿನ ವಾತಾವರಣದ ನಡುವೆ ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು. ಜನರು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು. ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ರೋಮಾಂಚಕ ಮತ್ತು ಭಾಗವಹಿಸುವಂತೆ ಮಾಡೋಣ ಎಂದು ಪ್ರಧಾನಿ ಸಾಮಾಜಿಕ ಜಾಲತಾಣದ ಎಕ್‌್ಸನಲ್ಲಿ ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ ಚಲಾಯಿಸುವಂತೆ ಮತದಾರರಿಗೆ ಕರೆ ನೀಡುತ್ತಿದೆ. ಯುವ ಮತ್ತು ಮಹಿಳಾ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ ಹಕ್ಕು ಚಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದಾರೆ.

ಕಣದಲ್ಲಿರುವ 904 ಅಭ್ಯರ್ಥಿಗಳ ಪೈಕಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಪುತ್ರಿ ಮಿಸಾ ಭಾರತಿ ಮತ್ತು ನಟಿ ಕಂಗನಾ ರನೌತ್‌ ಹಾಗು ಇತರ ಪ್ರಮುಖ ಅಭ್ಯರ್ಥಿಗಳು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ ಒಟ್ಟಾರೆ ಜನಾದೇಶ ಇವಿಎಂ ನಲ್ಲಿ ಭದ್ರವಾಗಿದೆ.

ಸುಮಾರು 5.24 ಕೋಟಿ ಪುರುಷರು, 4.82 ಕೋಟಿ ಮಹಿಳೆಯರು ಮತ್ತು 3,574 ತೃತೀಯಲಿಂಗಿ ಮತದಾರರು ಸೇರಿದಂತೆ 10.06 ಕೋಟಿಗೂ ಹೆಚ್ಚು ನಾಗರಿಕರು ಈ ಹಂತದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು ಸರಿಸುಮಾರು ಶೇ.60 ಕ್ಕೂ ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ.

ಏಪ್ರಿಲ್‌ 19 ರಂದು ಪ್ರಾರಂಭವಾದ ಚುನಾವಣಾ ಮ್ಯಾರಥಾನ್‌ ಮತದಾನ ಪ್ರಕ್ರಿಯೆಯ ಇಂದು ಅಂತ್ಯವಾಗಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಅಸೆಂಬ್ಲಿಗಳು ಸಹ ಮತದಾನಕ್ಕೆ ನಡೆದಿದೆ.ಜೂನ್‌ 4 ರಂದು ಮತ ಎಣಿಕೆ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಜೂನ್‌ 2 ರಂದು ವಿಧಾನಸಭೆ ಚುನಾವಣೆಗೆ ಮತ ಎಣಿಕೆ ನಡೆಯಲಿದೆ ಈಗ ಎಲ್ಲರ ಚಿತ್ತ ಅದರತ್ತ ನೆಟ್ಟಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಸುದ್ದಿವಾಹಿನಿಗಳು ಇಂದು ಸಂಜೆ 6:30 ರ ನಂತರ ಎಕ್ಸಿಟ್‌ ಪೋಲ್‌ ಡೇಟಾವನ್ನು ಮತ್ತು ಸಮೀಕ್ಷಾ ಫಲಿತಾಂಶಗಳನ್ನು ಬಿತ್ತರಿಸಲಿದೆ.ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜವಾಬ್ದಾರಿ ಮತ್ತು ಹೆಮ್ಮೆಯಿಂದ ಮತ ಚಲಾಯಿಸುವಂತೆ ಚುನಾವಣಾ ಆಯೋಗ ಕರೆ ನೀಡಿತ್ತು ಅದರಂತೆ ಸಾರ್ವತ್ರಿಕ ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ.66.14, ಶೇ.66.71, ಶೇ.65.68, ಶೇ.69.16, ಶೇ.62.2 ಮತ್ತು ಶೇ.63.36ರಷ್ಟು ಮತದಾನವಾಗಿದೆ.

ಪ್ರಮುಖವಾಗಿ ಇಂದು ನಡೆದ ಚುನಾವಣೆಯಲ್ಲಿ ಬಿಹಾರದ 8 ಲೋಕಸಭಾ ಕ್ಷೇತ್ರ, ಅಜಿಯೋನ್‌ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಕಣದಲ್ಲಿ ಕೇಂದ್ರ ಸಚಿವ ಆರ್‌ ಕೆ ಸಿಂಗ್‌ ಮತ್ತು ಕೇಂದ್ರದ ಮಾಜಿ ಸಚಿವ ರವಿಶಂಕರ್‌ ಪ್ರಸಾದ್‌ ಕಣದಲ್ಲಿದ್ದಾರೆ.

ಇನ್ನು ಜಾರ್ಖಂಡ್‌ನ ದುಮ್ಕಾ, ರಾಜಮಹಲ್‌ ಮತ್ತು ಗೊಡ್ಡಾ ಕ್ಷೇತ್ರ ಗಮನ ನೆಟ್ಟಿದೆ ಜೈಲಿನಲ್ಲಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಸೊಸೆ, ಬಿಜೆಪಿಯ ಸೀತಾ ಸೊರೆನ್‌ ಸ್ಪರ್ಧಿಸುತ್ತಿರುವ ದುಮ್ಕಾದ ಕ್ಷೇತ್ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮೂರು ಬಾರಿ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕಿಯಾಗಿರುವ ಸೀತಾ ಸೊರೆನ್‌ ಅವರು ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡರು.ಒಡಿಶಾದ ಆರು ಲೋಕಸಭೆ ಮತ್ತು 42 ವಿಧಾನಸಭಾ ಸ್ಥಾನಗಳಿಗೆ ಮತದಾನ ಆರಂಭವಾಗಿದೆ. ವಿಧಾನಸಭೆ ಸ್ಪೀಕರ್‌ ಪ್ರಮೀಳಾ ಮಲ್ಲಿಕ್‌, ಸರ್ಕಾರದ ಮುಖ್ಯ ಸಚೇತಕ ಪ್ರಶಾಂತ್‌ ಮುದುಲಿ, ಒಡಿಶಾ ಬಿಜೆಪಿ ಮುಖ್ಯಸ್ಥ ಮನಮೋಹನ್‌ ಸಮಾಲ್‌ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್‌ ಪಾಂಡಾ ಕಣದಲ್ಲಿದ್ದಾರೆ.

ಪಶ್ಚಿಮ ಬಂಗಾಳದ ದಮ್‌ ಡಮ್‌, ಬರಾಸತ್‌, ಬಸಿರ್‌ಹತ್‌, ಜಯನಗರ, ಮಥುರಾಪುರ, ಡೈಮಂಡ್‌ ಹಾರ್ಬರ್‌, ಜಾದವ್‌ಪುರ, ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದ್ದು ಅಲ್ಲಲ್ಲಿ ಸಣ್ಣ ಗಲಾಟೆ ನಡೆದಿದೆ. ಪ್ರಸ್ತುತ ತೃಣಮೂಲ ಕಾಂಗ್ರೆಸ್‌‍ (ಟಿಎಂಸಿ) ಸಂಸದರಾದ ಸುದೀಪ್‌ ಬಂಡೋಪಾಧ್ಯಾಯ, ಸೌಗತ ರಾಯ್‌ ಮತ್ತು ಮಾಲಾ ರಾಯ್‌, ಬಿಜೆಪಿಯ ಮಾಜಿ ಕೇಂದ್ರ ಸಚಿವ ದೇಬಶ್ರೀಚೌಧುರಿ ಮತ್ತು ಸಿಪಿಐ(ಎಂ) ಹಿರಿಯ ನಾಯಕ ಸುಜನ್‌ ಚಕ್ರವರ್ತಿ ಸೇರಿದಂತೆ ಹಲವು ಭಾರಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರ ಪ್ರದೇಶದ 13 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡರೆ ರಾಜ್ಯದಲ್ಲಿ ಬಹುದೇಖ ಶಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆದಿದೆ ದೇಶದಲ್ಲೇ ಅತಿ ಹಚ್ಚು ಅಂದರೆ 80 ಸ್ಥಾನವಿರುವ ರಾಜ್ಯವಿದು .

ಪಂಜಾಬ್‌ನಲ್ಲಿ ಚಿತ್ರವಿಚಿತ್ರವಾಗಿದ್ದು ಇಂಡಿ ಮಿತ್ರಪಕ್ಷಗಳಾದ ಕಾಂಗ್ರೆಸ್‌‍ ಮತ್ತು ಆಮ್‌ ಆದಿ ಪಕ್ಷ (ಎಎಪಿ) ಇಲ್ಲಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌‍ಎಡಿ) 1996 ರ ನಂತರ ಮೊದಲ ಭಾರಿಗೆ ಸ್ವಂತ ಬಲದ ಮೇಲೆ ಸ್ಪರ್ಧಿಸುತ್ತಿವೆ. .

ನಾಲ್ಕು ಲೋಕಸಭಾ ಕ್ಷೇತ್ರಗಳಾದ ಹಮೀರ್‌ಪುರ್‌, ಮಂಡಿ, ಕಾಂಗ್ರಾ ಮತ್ತು ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಸುಜನ್‌ಪುರ್‌, ಧರ್ಮಶಾಲಾ, ಲಾಹೌಲ್‌ ಮತ್ತು ಸ್ಪಿತಿ, ಬರ್ಸರ್‌, ಗ್ಯಾಗ್ರೆಟ್‌ ಮತ್ತು ಕುಟ್ಲೆಹಾರ್‌ನ ಆರು ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕಾಂಗ್ರೆಸ್‌‍ನ ವಿಕ್ರಮಾದಿತ್ಯ ಸಿನ್‌ ವಿರುಧ್ದ ಬಿಜೆಪಿಯಿಂದ ಬಾಲಿವುಡ್‌ ಕ್ವೀನ್‌ ಕಮಗನಾ ರಣಾವತ್‌ ಮಂಡಿ ಕ್ಷೇತ್ರದಲ್ಲಿ ಕಣಕ್ಕಿಳಿದು ಗಮನಸೆಳೆದಿದ್ದಾರೆ.

RELATED ARTICLES

Latest News