ಬೆಂಗಳೂರು, ಡಿ.5– ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ನಿಯಮಗಳನ್ನು ಉಲ್ಲಂಘಿಸಿದ ಚಾಲಕರು ಹಾಗೂ ಸವಾರರ ವಿರುದ್ಧ 300ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ 1.67 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ಈ ವ್ಯಾಪ್ತಿಗಳಲ್ಲಿ ಹೆಲೆಟ್ ಧರಿಸದೇ ಚಾಲನೆ, ಸಿಗ್ನಲ್ ಜಂಪಿಂಗ್, ನೋ ಎಂಟ್ರಿ, ಚಾಲನೆ ವೇಳೆ ಮೊಬೈಲ್ ಬಳಕೆ, ತಪ್ಪು ವಾಹನ ನಿಲುಗಡೆ, ಫುಟ್ಪಾತ್ ರೈಡಿಂಗ್ ಮತ್ತು ತ್ರಿಬಲ್ ರೈಡಿಂಗ್ ಮಾಡುವ ವಾಹನ ಸವಾರರು ಮತ್ತು ಚಾಲಕರುಗಳ ವಿರುದ್ಧ ಒಟ್ಟು 334 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರಿ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ.
1413 ಪ್ರಕರಣ- 6.88 ಲಕ್ಷ ರೂ. ದಂಡ ಸಂಗ್ರಹ:
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 1413 ಪ್ರಕರಣಗಳನ್ನು ದಾಖಲಿಸಿ 6.88 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ತ್ರಿಬಲ್ ರೈಡಿಂಗ್ 25 ಪ್ರಕರಣ-
12100 ರೂ. ದಂಡ, ಪ್ರವೇಶ ನಿಷಿದ್ಧ 65- 28500, ಹೆಲೆಟ್ ಧರಿಸದೇ ವಾಹನ ಚಾಲನೆ 1273- 6.37 ಲಕ್ಷ ರೂ., ಇತರೆ 50 ಪ್ರಕರಣಗಳಲ್ಲಿ 44,400 ರೂ. ದಂಡ ಸಂಗ್ರಹಿಸಲಾಗಿದೆ.