Monday, January 13, 2025
Homeರಾಜ್ಯಕರ್ತವ್ಯಲೋಪ : ಇನ್‌ಸ್ಪೆಕ್ಟರ್‌ ಸೇರಿ 6 ಮಂದಿ ಸಿಬ್ಬಂದಿ ಅಮಾನತು

ಕರ್ತವ್ಯಲೋಪ : ಇನ್‌ಸ್ಪೆಕ್ಟರ್‌ ಸೇರಿ 6 ಮಂದಿ ಸಿಬ್ಬಂದಿ ಅಮಾನತು

Negligence of duty: Six staff members including inspector suspended

ಬೆಂಗಳೂರು, ಡಿ.5– ಕರ್ತವ್ಯ ಲೋಪದ ಮೇರೆಗೆ ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮುತ್ತುರಾಜ್ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಇನ್‌್ಸಪೆಕ್ಟರ್ ಮುತ್ತುರಾಜ್, ಸಬ್ಇನ್ಸ್ ಪೆಕ್ಟರ್ ಉಮೇಶ್, ಎಎಸ್ಐಗಳಾದ ಮಹೇಶ್, ಫೈರೋಜ್ಖಾನ್, ಹೆಡ್ಕಾನ್ಸ್ ಟೆಬಲ್ ಮಂಜುನಾಥ್ ಹಾಗೂ ಕಾನ್ಸ್ಟೇಬಲ್ ಬಸವರಾಜು ಅಮಾನತುಗೊಂಡವರು.

ಈ ಆರು ಮಂದಿ ವಿರುದ್ಧ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಿಟ್ಟಿರುವ ಆರೋಪ ಹಾಗೂ ಗಾಂಜಾ ಪ್ರಕರಣದ ಆರೋಪಿಯಿಂದ ಹಣ ಪಡೆದು ದೂರು ದಾಖಲಿಸದ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಇನ್ಸ್ ಪೆಕ್ಟರ್ ವಿರುದ್ಧ ಠಾಣೆ ಸಿಬ್ಬಂದಿಗಳು ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ಕುಮಾರ್ ಅವರು ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.ಆ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಇನ್‌್ಸಪೆಕ್ಟರ್ ಸೇರಿ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

RELATED ARTICLES

Latest News