ಬೆಂಗಳೂರು,ಅ.31- ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ನಗರದಲ್ಲಿ ಮಾನವ ಕಳ್ಳಸಾಗಣೆ ಸಂಬಂಧ ವಿಶೇಷ ಕಾರ್ಯಚಾರಣೆ ಕೈಗೊಂಡು 14ಮಂದಿ ಆರೋಪಿಗಳನ್ನು ಬಂಧಿಸಿ 20 ಮಂದಿ ನೊಂದ ಮಹಿಳೆಯರನ್ನು ಸಂರಕ್ಷಣೆ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆ, ವರ್ತೂರು, ವಿದ್ಯಾರಣ್ಯಪುರ, ಅಮೃತಹಳ್ಳಿ ಮತ್ತು ಕೆ.ಆರ್. ಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 4 ದ್ವಿಚಕ್ರ ವಾಹನಗಳು, ಒಂದು ಮಾರುತಿ ಸ್ವಿಫ್ಟ್ ಕಾರು, 40 ಮೊಬೈಲ್‍ಗಳು, 2 ಲ್ಯಾಪ್‍ಟ್ಯಾಪ್ ಹಾಗೂ ಮೂರು ವಿವಿಧ ಕಂಪನಿಯ ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು
ಅಕ್ಟೋಬರ್ 1 ರಿಂದ ನಿನ್ನೆವರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಚಾರಣೆ ಕೈಗೊಂಡು ನಗರದ ವಿವಿಧ ಕಡೆ ದಾಳಿ ಮಾಡಿ ಬಾಂಗ್ಲದೇಶದಿಂದ ಹಾಗು ಹೊರರಾಜ್ಯಗಳಿಂದ ಮಹಿಳೆಯರನ್ನು ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ವೇಶ್ಯವಾಟಿಕೆ ನಡೆಸುತ್ತಿರುತ್ತಾರೆಂದು ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ.
ಮಹಿಳೆಯರನ್ನು ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ವೇಶ್ಯವಾಟಿಕೆ ನಡೆಸುತ್ತಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಿ, ವೇಶ್ಯವಾಟಿಕೆಗೆ ತೊಡಗಿಸಿಕೊಂಡಿದ್ದ ಒಟ್ಟು 20 ಮಂದಿ ನೊಂದ ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಪೈಕಿ ಬಾಂಗ್ಲದೇಶದ ನಾಲ್ವರು ಮಹಿಳೆಯರು, ಪಶ್ಚಿಮ ಬಂಗಾಳದ 11 ಮಂದಿ ಮಹಿಳೆಯರು, ತೆಲಂಗಾಣದ ಒಬ್ಬ ಮಹಿಳೆ, ಉತ್ತರಖಂಡದ ಒಬ್ಬ ಮಹಿಳೆ ಹಾಗು ಕರ್ನಾಟಕದ 3 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ. ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಕೇಂದ್ರ ಅಪರಾಧ ವಿಭಾಗ, ಸಂರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡದವರು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.