Friday, December 27, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌, ಪವಿತ್ರಾಗೌಡ ಸೇರಿ 7 ಮಂದಿಗೆ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌, ಪವಿತ್ರಾಗೌಡ ಸೇರಿ 7 ಮಂದಿಗೆ ಜಾಮೀನು

Renukaswamy murder case: Actor Darshan, Pavitra Gowda and 7 others granted bail

ಬೆಂಗಳೂರು,ಡಿ.13– ಚಿತ್ರದುರ್ಗದ ರೇಣಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್‌, ಪವಿತ್ರಾಗೌಡ ಸೇರಿ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಏಳು ತಿಂಗಳ ಬಳಿಕ ಪ್ರಕರಣದ ಆರೋಪಿಗಳಾದ ದರ್ಶನ್‌, ಪವಿತ್ರಾ ಗೌಡ, ನಾಗರಾಜ್‌, ಅನುಕುಮಾರ್‌, ಲಕ್ಷ್ಮಣ್‌. ಎಂ.ಜಗದೀಶ್‌, ಪ್ರದೂಶ್‌ ರಾವ್‌ ಅವರುಗಳಿಗೆ ಜಾಮೀನು ದೊರೆತಿದೆ. ನಟ ದರ್ಶನ್‌ , ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜೀತ್‌ ಶೆಟ್ಟಿ ಅವರು ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿ ಪ್ರಕರಣದ ಎಲ್ಲಾ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು.

ಇತ್ತೀಚೆಗೆ ದರ್ಶನ್‌ಗೆ ಬೆನ್ನು ಇದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬೇಕಾದ ಹಿನ್ನಲೆಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.
ಜಾಮೀನು ಪಡೆದು ಬಿಜಿಎಸ್‌‍ ಆಸ್ಪತ್ರೆಗೆ ಅವರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಜಾಮೀನು ದೊರೆತಿರುವ ಹಿನ್ನಲೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಫಿಜಿಯೋ ಥೆರಪಿ ಚಿಕಿತ್ಸೆಗೆಯನ್ನು ಮುಂದುವರೆಸುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂ.11ರಂದು ದರ್ಶನ್‌ ಬಂಧನವಾಗಿತ್ತು.
ದರ್ಶನ್‌, ಪವಿತ್ರಾ ಗೌಡ ಸೇರಿ 17 ಜನರ ಬಂಧನವಾಗಿತ್ತು. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಈ ಜೈಲಿನಲ್ಲಿ ರಾಜಾತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಸೇರಿದಂತೆ ಹಲವು ಆರೋಪಿಗಳನ್ನು ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು.

ಪವಿತ್ರಾ ಗೌಡ ಅವರು ಬೆಂಗಳೂರು ಜೈಲು, ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಹಾಗೂ ಇತರರ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಅದರಲ್ಲಿ ಕೆಲವರು ಜಾಮೀನು ಪಡೆದಿದ್ದರು.
ಇಂದು ಪ್ರಕರಣದ ಎಲ್ಲಾ ಏಳು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ನೀಡಿದೆ.

ಡಿ.11ಕ್ಕೆ ಜಾಮೀನು ಅವಧಿ ಅಂತ್ಯವಾಗಬೇಕಿತ್ತು. ಆದರೆ ಇಷ್ಟುದಿನ ದರ್ಶನ್‌ಗೆ ರಕ್ತದೊತ್ತಡ ಎಂದು ಅವರ ಪರ ವಕೀಲ ನಾಗೇಶ್‌ ಅವರು ಬೆನ್ನು ನೋವಿನ ಪರಿಣಾಮ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತಾದರೂ ಫಿಜಿಯೋ ಥೆರಪಿ ಮೂಲಕವೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಅನುಮಾನ.

RELATED ARTICLES

Latest News