Monday, January 13, 2025
Homeರಾಷ್ಟ್ರೀಯ | Nationalದೆಹಲಿಯ ಮೂರು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

ದೆಹಲಿಯ ಮೂರು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

Bomb threat for three schools in Delhi

ನವದೆಹಲಿ, ಡಿ 13 (ಪಿಟಿಐ)– ದೆಹಲಿಯ ಮೂರು ಶಾಲೆಗಳಿಗೆ ಇಂದು ಮುಂಜಾನೆ ಮತ್ತೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದೆ.ಹೀಗಾಗಿ ಸ್ಥಳಕ್ಕೆ ದೌಡಾಯಿಸಿರುವ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳದ ಅಧಿಕಾರಿಗಳು ಹುಡುಕಾಟ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದೆ.

ಕೆಲ ದಿನಗಳ ಹಿಂದೆ ಇಲ್ಲಿನ ಕನಿಷ್ಠ 44 ಶಾಲೆಗಳು ಇದೇ ರೀತಿಯ ಇಮೇಲ್ಗಳನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಇತ್ತೀಚಿನ ಬೆದರಿಕೆಗಳು ಬಂದಿವೆ. ಪೊಲೀಸರು ಆ ಬೆದರಿಕೆಗಳನ್ನು ವಂಚನೆ ಎಂದು ಘೋಷಿಸಿದ್ದಾರೆ.

ನಾವು ಪಶ್ಚಿಮ ವಿಹಾರ್ನ ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್ (ಬೆಳಿಗ್ಗೆ 4:21), ಶ್ರೀನಿವಾಸ್ ಪುರಿಯ ಕೇಂಬ್ರಿಡ್ಜ್ ಶಾಲೆ (ಬೆಳಿಗ್ಗೆ 6:23) ಮತ್ತು ಪೂರ್ವದಲ್ಲಿರುವ ಡಿಪಿಎಸ್ ಅಮರ್ ಕಾಲೋನಿಯಿಂದ ಕರೆಗಳನ್ನು ಸ್ವೀಕರಿಸಿದ್ದೇವೆ (ಬೆದರಿಕೆ ಇಮೇಲ್ಗಳ ಬಗ್ಗೆ). ಕೈಲಾಶ್ (6:35 ) ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶಾಲೆಗಳ ಅಧಿಕಾರಿಗಳು ಮಕ್ಕಳನನ್ನು ತರಗತಿಗಳಿಗೆ ಕಳುಹಿಸದಂತೆ ಪೋಷಕರಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

RELATED ARTICLES

Latest News