Tuesday, January 7, 2025
Homeರಾಷ್ಟ್ರೀಯ | Nationalಗೆಳತಿಯ ಕೊಂಕು ಮಾತಿಗೆ ಬೇಸತ್ತು ಮತ್ತೊಬ್ಬ ಟೆಕ್ಕಿ ಆತಹತ್ಯೆ

ಗೆಳತಿಯ ಕೊಂಕು ಮಾತಿಗೆ ಬೇಸತ್ತು ಮತ್ತೊಬ್ಬ ಟೆಕ್ಕಿ ಆತಹತ್ಯೆ

Unemployed Noida engineer kills self, live-in partner under scanner3

ನವದೆಹಲಿ,ಡಿ.15- ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದೇಶದಲ್ಲಿ ಬಿರುಗಾಳಿ ಎಬ್ಬಿಸಿರುವ ಸಂದರ್ಭದಲ್ಲೇ ಲಿವ್ ಇನ್ ಸಂಗಾತಿಯ ಕೊಂಕು ಮಾತಿನಿಂದ ಮತ್ತೊಬ್ಬ ಟೆಕ್ಕಿ ಆತಹತ್ಯೆ ಮಾಡಿಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಸಂಗಾತಿಯ ಕೊಂಕು ಮಾತಿನಿಂದ ಆತಹತ್ಯೆಗೆ ಶರಣಾದ ಟೆಕ್ಕಿಯನ್ನು ಮಯಾಂಕ್ ಚಂದೇಲ್ ಎಂದು ಗುರುತಿಸಲಾಗಿದೆ.

ಈತ ಕೆಲ ಸಮಯದಿಂದ ಕೆಲಸವಿಲ್ಲದೆ ನಿರು ದ್ಯೋಗಿಯಾಗಿದ್ದರು. ಇದೇ ವಿಚಾರವಾಗಿ ಪದೇ ಪದೇ ಗೆಳತಿ ಕೊಂಕು ಮಾತನಾಡುತ್ತಿದ್ದಳು, ಅದನ್ನು ಕೇಳಲಾಗದೆ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸವಿಲ್ಲದ ಕಾರಣ ಮಾನಸಿಕ ಒತ್ತಡದಲ್ಲಿದ್ದರು, ಜತೆಗೆ ತನ್ನ ಸಂಗಾತಿಯ ಕುಹಕ ಮಾತುಗಳನ್ನು ಕೇಳಿ ಮತ್ತಷ್ಟು ಡಿಪ್ರೆಶನ್ಗೆ ಹೋಗಿದ್ದರು. ಉತ್ತರ ಪ್ರದೇಶದ ಜಲಾಲಾಬಾದ್ನವರಾದ ಚಂದೇಲ್, ಬಂಡಾ ಮೂಲದ ಮಹಿಳೆಯೊಂದಿಗೆ ಸುಮಾರು ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ನೋ್ಡಾದ ಸೆಕ್ಟರ್ 73 ರಲ್ಲಿ ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು.

ಡೆತ್ನೋಟ್ನಲ್ಲಿ ಏನೂ ಕೆಲಸವಿಲ್ಲ, ಇಡೀ ದಿನ ಮನೆಯಲ್ಲಿ ಕೂತು ತಿನ್ನೋದೊಂದೇ ಕೆಲಸ ಎನ್ನುವ ಮಾತು ತೀರಾ ಮನಸ್ಸು ಹಾಳುಮಾಡಿತ್ತು. ಈ ಎಲ್ಲಾ ಕಾರಣಗಳಿಂದಾಗಿ ತಾನು ಸಾಯುವ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದ್ದರು. ಸಂಜೆ ಕೆಲಸ ಮುಗಿಸಿ ಬಂದ ಬಳಿಕ ಆಕೆಗೆ ಮಯಾಂಕ್ ನೇಣುಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ ತಕ್ಷಣ ಆಕೆ ಪೊಲೀಸರಿಗೆ ದೂರು ನೀಡಿದ್ದರು.

RELATED ARTICLES

Latest News