Monday, December 23, 2024
Homeರಾಷ್ಟ್ರೀಯ | Nationalಶಬರಮಲೆಗೆ ಭಕ್ತರ ಜೊತೆ ಹರಿದು ಬಂದ ಕಾಣಿಕೆ, 29 ದಿನದಲ್ಲಿ 163.89ರೂ. ಕೋಟಿ ಸಂಗ್ರಹ

ಶಬರಮಲೆಗೆ ಭಕ್ತರ ಜೊತೆ ಹರಿದು ಬಂದ ಕಾಣಿಕೆ, 29 ದಿನದಲ್ಲಿ 163.89ರೂ. ಕೋಟಿ ಸಂಗ್ರಹ

Over 22L visit Sabarimala, revenue rises to Rs 163 crore in 29 days

ತಿರುವನಂತಪುರ,ಡಿ.16– ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಯಲವು ಕೇವಲ 29 ದಿನಗಳಲ್ಲಿ 163.89 ಕೋಟಿ ರೂ. ಆದಾಯ ಗಳಿಸಿದೆ.

ಡಿಸೆಂಬರ್‌ 14ರವರೆಗೆ 22 ಲಕ್ಷ ಅಯ್ಯಪ್ಪನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 4.51 ಲಕ್ಷ ಅಧಿಕ ಭಕ್ತರು ಭೇಟಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತಿರುವಾಂಕೂರು ದೇವಾಲಯ ಮಂಡಳಿಯ ಅಧ್ಯಕ್ಷ ಪಿ.ಎಸ್‌‍ ಪ್ರಶಾಂತ್‌, ದೇವಾಸ್ಥಾನದ ವರಮಾನವನ್ನು ಕಳೆದ ಬಾರಿಗೆ ಹೋಲಿಸಿದರೆ 22.76 ಕೋಟಿ ರೂ. ಹೆಚ್ಚಾಗಿದೆ. ಕೇವಲ 29 ದಿನಗಳಲ್ಲಿ ಒಟ್ಟು 22,67,956 ಭಕ್ತರು ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಭಕ್ತರಿಂದ ಒಟ್ಟು 163.89 ಕೋಟಿ ಆದಾಯ ದೇವಾಲಯಕ್ಕೆ ಹರಿದುಬಂದಿದೆ. ಈ ಪೈಕಿ ಪ್ರಸಾದ ಮಾರಾಟದಿಂದಲೇ 82.67 ಕೋಟಿ ರೂ. ಆದಾಯ ಬಂದಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News