Thursday, December 19, 2024
Homeರಾಜ್ಯವಿಧಾನಸಭೆಯಲ್ಲಿ ಸಚಿವರ ಗೈರು, ವಿಪಕ್ಷಗಳ ತೀವ್ರ ಆಕ್ಷೇಪ

ವಿಧಾನಸಭೆಯಲ್ಲಿ ಸಚಿವರ ಗೈರು, ವಿಪಕ್ಷಗಳ ತೀವ್ರ ಆಕ್ಷೇಪ

Absence of ministers in the assembly, strong objections from opposition parties

ಬೆಳಗಾವಿ,ಡಿ.17– ಇಂದು ಬೆಳಗ್ಗೆ ವಿಧಾನಸಭೆ ಸಮಾವೇಶಗೊಂಡಾಗ ಆಡಳಿತ ಪಕ್ಷದ ಸಾಲಿನ ಸಚಿವರ ಆಸನಗಳು ಖಾಲಿ ಇದ್ದದ್ದನ್ನು ಗಮನಿಸಿದ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಸಚಿವರಿಲ್ಲ. ಹೀಗಾದರೆ ಹೇಗೆ ಅಧಿವೇಶನ ನಡೆಸುವುದು. ಅವರ ಬಂದ ಮೇಲೆ ಅಧಿವೇಶನ ಶುರು ಮಾಡೋಣ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಆರೋಗ್ಯಕರ ಚರ್ಚೆಯಾಗಬೇಕು ಎಂಬುದು ನಮ ಉದ್ದೇಶ. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೊಬ್ಬರೇ ಸದನದಲ್ಲಿದ್ದಾರೆ. ಊರಿಗೆ ಒಬ್ಬಳೇ ಪದಾವತಿ ಎನ್ನುವಂತಾಗಿದೆ ಎಂದರು.

ಇದಕ್ಕೆ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ದನಿಗೂಡಿಸಿದರು. ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್‌ ಮಾತನಾಡಿ, ಏಕವ್ಯಕ್ತಿ ಸರ್ಕಾರವಿದು. ಮಂತ್ರಿ ಮಂಡಳ ಇಲ್ಲ. ಅವರೇ ನಡೆಸುವುದು. ಈ ಬಾರಿ ಶಾಸಕರ ಪ್ರಶಸ್ತಿಯನ್ನು ಸಭಾಧ್ಯಕ್ಷರಿಗೆ ಕೊಡಬೇಕು ಎಂದರು.

ಆಗ ಸಭಾಧ್ಯಕ್ಷರು, ಐದು ನಿಮಿಷದಲ್ಲಿ ಸಚಿವರು ಬರುತ್ತಾರೆ. ಕಲಾಪ ಆರಂಭಿಸೋಣ ಎಂದು ಹೇಳಿದರು. ಬಿಜೆಪಿ ಶಾಸಕ ಭೈರತಿ ಬಸವರಾಜು ಅವರು ನಿನ್ನೆ ತಡರಾತ್ರಿಯವರೆಗೂ ಸದನ ನಡೆಸಿರುವುದನ್ನು ಗಮನದಲ್ಲಿಟ್ಟುಕೊಂಡು ಗಿನ್ನಿಸ್‌‍ ದಾಖಲೆ ಮಾಡಲು ಹೊರಟಿದ್ದೀರಿ ಎಂದರು. ಗುರುರಾಜ ಶೆಟ್ಟಿ ಗಂಟಿಹೊಳಿ ಅವರು, ಕಾರ್ಯಕಲಾಪಗಳ ಪಟ್ಟಿಯಲ್ಲಿದ್ದ ಎಲ್ಲಾ ವಿಚಾರಗಳಿಗೂ ಸಮಯ ಕೊಟ್ಟು ಸದನ ಕಾರ್ಯ ಕಲಾಪಗಳನ್ನು ನಡೆಸಿದ್ದೀರಿ. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮತ್ತೊಬ್ಬ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರು, ತಡರಾತ್ರಿವರೆಗೂ ಸದನದ ಕಾರ್ಯಕಲಾಪ ನಡೆಸಿರುವುದಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು.

RELATED ARTICLES

Latest News